ಮಹಾನಗರ: ಶರವು ಶ್ರೀ ಮಹಾಗಣಪತಿ ದೇವಸ್ಥಾನದ ವರ್ಷಾವಧಿ ಮಹೋತ್ಸವ ಎ. 6ರಿಂದ ಆರಂಭಗೊಂಡಿದ್ದು, ಎ. 14ರ ವರೆಗೆ ಸಂಭ್ರಮದಿಂದ ನಡೆಯಲಿದೆ.
ಎ. 9ರಂದು ಸಂಜೆ 6ಕ್ಕೆ ಬಯನ ಬಲಿ ಉತ್ಸವ, ಬಂಡಿಯಲ್ಲಿ ಉತ್ಸವ, ಪೇಟೆ ಸವಾರಿ, ರಾತ್ರಿ 8.30ಕ್ಕೆ ಮಹಾಪೂಜೆ, ಗಂಟೆ 9.30ಕ್ಕೆ ಭೂತ ಬಲಿ ಮತ್ತು 10ಕ್ಕೆ ದೀಪದ ಬಲಿ ಉತ್ಸವ, ಸಂಜೆ 7ಕ್ಕೆ ವಸಂತ ಅಮೀನ್ ಬರೆದ ತಿರುಪತಿ ತಿಮ್ಮಪ್ಪ ಪೌರಾಣಿಕ ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಎ.10ರಂದು 6ಕ್ಕೆ ಬಯನ ಬಲಿ ಉತ್ಸವ, ಬಂಡಿಯಲ್ಲಿ ಉತ್ಸವ, ಪೇಟೆ ಸವಾರಿ, ರಾತ್ರಿ 8.30ಕ್ಕೆ ಮಹಾಪೂಜೆ, 9.30ಕ್ಕೆ ಭೂತ ಬಲಿ ಮತ್ತು ಗಂಟೆ 10ಕ್ಕೆ ದೀಪದ ಬಲಿ ಉತ್ಸವ, ಸಂಜೆ 7ಕ್ಕೆ ಕಡಲನಾಡ ಕಲಾವಿದರು ಟ್ರಸ್ಟ್ ನಿಂದ ಸಾಂಸ್ಕೃತಿಕ ಕಾರ್ಯಕ್ರಮ “ಮಣ್¡ದ ಮಗಲ್ ಅಬ್ಬಕ್ಕ’ ತುಳು ಚಾರಿತ್ರಿಕ ನಾಟಕ ನಡೆಯಲಿದೆ.
ಎ. 11ರಂದು ಸಂಜೆ 6ಕ್ಕೆ ಬಯನ ಬಲಿ ಉತ್ಸವ, ರಾತ್ರಿ 8.30ಕ್ಕೆ ಮಹಾಪೂಜೆ, 9.30ಕ್ಕೆ ಭೂತ ಬಲಿ ಉತ್ಸವ, 10ಕ್ಕೆ ದೀಪದ ಬಲಿ ಉತ್ಸವ, ಸಂಜೆ ಗಂಟೆ 7ಕ್ಕೆ ಕದಿರೆ ಕಲಾಕೇಂದ್ರ ಕಲಾವಿದರಿಂದ ವೀರ ಅಭಿಮನ್ಯು, ಎ. 12ರಂದು ಸಂಜೆ 6ಕ್ಕೆ ಬಯನ ಬಲಿ ಉತ್ಸವ, ರಾತ್ರಿ 8ಕ್ಕೆ ಮಹಾಪೂಜೆ, ಸಂಜೆ 9ಕ್ಕೆ ಭೂತಬಲಿ, 9.30ಕ್ಕೆ ಜೋಡುದೇವರ ದೀಪದ ಬಲಿ ಉತ್ಸವ ಮತ್ತು ಸಣ್ಣ ರಥೋತ್ಸವ, ಸಂಜೆ 7ಕ್ಕೆ ಶ್ರೀ ಸೋಮನಾಥ ಕಲಾಭೂಮಿಯಿಂದ ನಾಟಕ ವಿಧಿಲೀಲೆ ಪ್ರದರ್ಶನವಾಗಲಿದೆ.
ಎ. 13: ರಥೋತ್ಸವ
ಬೆಳಗ್ಗೆ 10ಕ್ಕೆ ರಥಕಲಶ, 11.30ಕ್ಕೆ ಮಹಾಪೂಜೆ, ಮಧ್ಯಾಹ್ನ 12ಕ್ಕೆ ದೊಡ್ಡ ರಥಾರೋಹಣ, ರಾತ್ರಿ 9ಕ್ಕೆ ದೊಡ್ಡ ರಥೋತ್ಸವ, 10ಕ್ಕೆ ಮಹಾಪೂಜೆ, ಭೂತ ಬಲಿ, ಕವಾಟ ಬಂಧನ. ಸಂಜೆ 7ರಿಂದ ಶ್ರೀ ಶರಭೇಶ್ವರ ಕೃಪಾಪೋಷಿತ ಯಕ್ಷಗಾನ ಸಂಘದಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಎ. 14ರಂದು ಬೆಳಗ್ಗೆ 7ರಿಂದ ಕವಾಟೋದ್ಘಾಟನೆ, ಬೆಳಗ್ಗೆ 10ಕ್ಕೆ ಓಕುಳಿ, 8.30ಕ್ಕೆ ಬಲಿ ಉತ್ಸವ, ರಥೋತ್ಸವ, ಬೆಡಿಮದ್ದು ಸುಡುವುದು (ಬೆಡಿಕಂಬ), ರಾತ್ರಿ 11ಕ್ಕೆ ಅವಭೃಥ ಸ್ನಾನ, ಧ್ವಜಾವರೋಹಣ, ರಾತ್ರಿ 12ಕ್ಕೆ ಮಹಾಪೂಜೆ ಮತ್ತು ಪ್ರಸಾದ ವಿತರಣೆ. ಸಂಜೆ 6ಕ್ಕೆ ಸಾಂಸ್ಕೃತಿಕೋತ್ಸವ ಸಭಾ ಕಾರ್ಯಕ್ರಮ, ಶರವು ರಾಮಕೃಷ್ಣ ಶಾಸ್ತ್ರಿ ಸಂಸ್ಮರಣ ಪ್ರಶಸ್ತಿ-2019 ನಡೆಯಲಿದೆ ಎಂದು ದೇವಸ್ಥಾನದ ಶಿಲೆ ಶಿಲೆ ಆಡಳಿತ ಮೊಕ್ತೇಸರ ಶರವು ಶ್ರೀ ರಾಘವೇಂದ್ರ ಶಾಸ್ತ್ರಿ ತಿಳಿಸಿದ್ದಾರೆ.