ಮುಂಬಯಿ: ಮೀರಾರೋಡ್ ಶ್ರೀ ಶನೀಶ್ವರ ಮಂದಿರದಲ್ಲಿ ವಿಶೇಷ ಪೂಜೆಯು ವಿವಿಧ ಧಾರ್ಮಿಕ ಕಾರ್ಯ ಕ್ರಮಗಳೊಂದಿಗೆ ಇತ್ತೀಚೆಗೆ ನಡೆಯಿತು. ಈ ಸಂದರ್ಭ ದಾನಿಗಳಾದ ದಿನೇಶ್ ಸುವರ್ಣ ಮತ್ತು ರವೀಂದ್ರ ಕರ್ಕೇರ ಅವರನ್ನು ಮಂದಿರದ ವತಿಯಿಂದ ದೇವರ ಮಹಾಪ್ರಸಾದವನ್ನಿತ್ತು ಗೌರವಿಸಲಾಯಿತು.
ಶನೀಶ್ವರ ಮಂದಿರದಲ್ಲಿ ಶಿವುಶಕ್ತಿ ಅನುಷ್ಠಾನ ಪೂಜೆಯ ಅಂಗವಾಗಿ ಮಣ್ಣಿನಿಂದ ತಯಾರಿಸಿದ 1.25 ಲಕ್ಷ ಶಿವಲಿಂಗ ಸ್ಥಾಪನೆ, ವಿವಿಧ ಧಾರ್ಮಿಕ ಕಾರ್ಯ ಕ್ರಮವು ಶಿವಜಪ ಮಂತ್ರದೊಂದಿಗೆ ಬೆಳಗ್ಗೆಯಿಂದ ರಾತ್ರಿಯವರೆಗೆ ಜರಗಿ ಅನ್ನಸಂತರ್ಪಣೆಯೊಂದಿಗೆ ಸಂಪನ್ನಗೊಂಡಿತು.
ಅನುಷ್ಠಾನದ ಎರಡನೇ ದಿನ ಬೆಳಗ್ಗೆಯಿಂದ ಕ್ಷೇತ್ರದ ಎಲ್ಲ ದೇವರಿಗೆ ಅಭಿಷೇಕ ನಡೆಯಿತು. ಬಳಿಕ 1.25 ಲಕ್ಷ ಶಿವಲಿಂಗ ಸ್ಥಾಪನೆಗೊಂಡು ಪೂಜೆ, ಆರತಿ, ಮಧ್ಯಾಹ್ನ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು. ಮಧ್ಯಾಹ್ನದ ಬಳಿಕ ಶಿವಲಿಂಗಕ್ಕೆ ವಿವಿಧ ರೀತಿಯ ವಸ್ತುಗಳಿಂದ ಅಭಿಷೇಕ, ದುರ್ಗಾಪೂಜೆ, ಹವನ ಹಾಗೂ ಶ್ರೀ ಶನೀಶ್ವರ ಸಮಿತಿಯವರಿಂದ ಓಂ ನಮಃ ಶಿವಾಯ ಜಪಯಜ್ಞ ಮತ್ತು ಭಜನ ಕಾರ್ಯಕ್ರಮ ನಡೆಯಿತು.
ಎರಡು ದಿನಗಳ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ 2.50 ಲಕ್ಷ ಶಿವಲಿಂಗಕ್ಕೆ ಮಹಾ ಮಂಗಳಾರತಿಯ ಬಳಿಕ ಶಿವಲಿಂಗ ಗಳನ್ನು ವಿಸರ್ಜನೆ ಮಾಡಲಾ ಯಿತು. ಕೊನೆಯಲ್ಲಿ ಅನ್ನಸಂತ ರ್ಪಣೆ ನಡೆಯಿತು.
ಶ್ರೀ ಶನೀಶ್ವರ ಮಂದಿರದ ಎಲ್ಲ ಸದಸ್ಯರು ಮತ್ತು ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.