Advertisement

Mumbai: ಮೋದಿ ಅವಧಿಯಲ್ಲಿ ಸೆನ್ಸೆಕ್ಸ್‌ 75000ಕ್ಕೆ ಜಿಗಿತ

10:49 PM Apr 10, 2024 | Team Udayavani |

ಮುಂಬಯಿ: ಬಾಂಬೆ ಷೇರು ಪೇಟೆಯಲ್ಲಿ ಇದೇ ಮೊದಲ ಬಾರಿಗೆ ಸಂವೇದಿ ಸೂಚ್ಯಂಕ ಮಂಗಳವಾರ 75 ಸಾವಿರಕ್ಕೆ ತಲುಪಿ ದಾಖಲೆ ನಿರ್ಮಿಸಿತ್ತು. ಅದೇ ಏರಿಕೆಯನ್ನು ಬಾಂಬೆ ಷೇರು ಪೇಟೆಯಲ್ಲಿ ಸೂಚ್ಯಂಕ ಬುಧವಾರವೂ ಕಾಯ್ದು ಕೊಂಡಿದೆ. ದಿನಾಂತ್ಯಕ್ಕೆ 354.45 ರಲ್ಲಿ ಸೂಚ್ಯಂಕ ಮುಕ್ತಾಯಗೊಂಡು 75038ರಲ್ಲಿ ಅಂತ್ಯಾಗಿದೆ. ಮಧ್ಯಂತರದಲ್ಲಿ 421 ಅಂಕ ಏರಿಕೆಯಾಗಿ 75105 ವರೆಗೆ ಏರಿಕೆಯಾಗಿದೆ.

Advertisement

ಇನ್ನು ನಿಫ್ಟಿ ಸೂಚ್ಯಂಕ ಕೂಡ ಬುಧ ವಾರ 111 ಪಾಯಿಂಟ್ಸ್‌ ಏರಿಕೆಯಾಗಿ 22753 ಪಾಯಿಂಟ್ಸ್‌ಗೆ ಮುಕ್ತಾಯ ಗೊಂಡಿತು. ಮಧ್ಯಂತರದಲ್ಲಿ ನಿಫ್ಟಿ ಸೂಚ್ಯಂಕ 22756 ಪಾಯಿಂಟ್ಸ್‌ ವರೆಗೆ ಜಿಗಿದಿತ್ತು. ಪ್ರಧಾನಿ  ಮೋದಿ 2014 ರಲ್ಲಿ ಅಧಿಕಾರಕ್ಕೆ ಬಂದಿದ್ದ ಅವಧಿಯಲ್ಲಿ ಬಾಂಬೆ ಷೇರು ಪೇಟೆ ಸೂಚ್ಯಂಕ 25000ದಷ್ಟೇ ಇತ್ತು. ಮೋದಿ 2019ರಲ್ಲಿ 2ನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ 2021ರ ಜ.21ರಂದು ಬಾಂಬೆ ಷೇರು ಪೇಟೆ ಸೂಚ್ಯಂಕ 50000ಕ್ಕೆ ಏರಿಕೆಯಾ ಗಿತ್ತು. ಏ.9 ರಂದು ಸೂಚ್ಯಂಕ 75124 ತಲುಪಿ ದಾಖಲೆ ನಿರ್ಮಾಣವಾಗಿತ್ತು. ಅಂದರೆ 10 ವರ್ಷಗಳ ಹಾಲಿ ಕೇಂದ್ರ ಸರ್ಕಾರದ ಅವಧಿಯಲ್ಲಿ ಷೇರುಪೇಟೆ ಸೂಚ್ಯಂಕವೂ ದಾಖಲೆಯಾಗಿ ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next