ಮುಂಬಯಿ: ಬೊರಿವಲಿ ಪೂರ್ವದ ಚೌಗ್ಲೇ ನಗರ, ಸಾವರಾ³ಡಾದ ಶ್ರೀ ಶನಿಮಹಾತ್ಮ ಪೂಜಾ ಮಿತ್ರ ಮಂಡಳಿಯ ಸಂಚಾಲಕತ್ವದ ಶ್ರೀ ಶನಿಮಂದಿರದಲ್ಲಿ ಶ್ರೀ ಶನಿಜಯಂತಿ ಆಚರಣೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜೂ. 3ರಂದು ಅದ್ದೂರಿಯಾಗಿ ನಡೆಯಿತು.
ಶ್ರೀ ಶನಿಮಂದಿರದ ಅರ್ಚಕ ಶ್ರೀ ವಿಷ್ಣು ಅಡಿಗ ಅವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರಗಿತು. ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ 6ರಿಂದ ಶನಿದೇವರಿಗೆ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ನೆರವೇರಿತು. ಸಂಜೆ 6.30ರಿಂದ ಮಂಡಳಿಯ ಸದಸ್ಯರಿಂದ ಭಜನ ಕಾರ್ಯಕ್ರಮ, ಅನಂತರ ಕಲಿಯುಗದೊಡೆಯ ಶ್ರೀ ಶನೀಶ್ವರ ದೇವರಿಗೆ ಸರ್ವ ಸೇವೆ, ರಂಗಪೂಜೆ, ತ್ರಿಕಾಲಿಕ ಸೇವೆ, ಪ್ರಸಾದ ಸೇವೆ, ಹೂವಿನ ಪೂಜೆಯು ನೆರವೇರಿತು.
ಭಕ್ತರೊಬ್ಬರ ವತಿಯಿಂದ ಬೆಳಗ್ಗೆಯಿಂದ ರಾತ್ರಿಯವರೆಗೆ ಮಂದಿರದಲ್ಲಿ ಪ್ರಸಾದ ರೂಪದಲ್ಲಿ ಲಡ್ಡು ವಿತರಿಸಲಾಯಿತು. ಶ್ರೀ ಶನಿದೇವರಿಗೆ ಮಲ್ಲಿಗೆಯಿಂದಅಲಂಕರಿಸಲಾಗಿದ್ದು, ಭಕ್ತಾದಿಗಳನ್ನು ಆಕರ್ಷಿಸಿತು. ಕಾರ್ಯಕ್ರಮದ ಯಶಸ್ಸಿಗೆ ಮಂದಿರದ ಉಪಾಧ್ಯಕ್ಷ, ಭುವಾಜಿ ಗಿರೀಶ್ ಕರ್ಕೇರ, ಗೌರವ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ಜತೆ ಕಾರ್ಯದರ್ಶಿ ಗಿರಿಧರ ಸುವರ್ಣ, ಜತೆ ಕೋಶಾಧಿಕಾರಿ ಸುಧಾಕರ ಸನಿಲ್ ಸಹಕರಿಸಿದರು.
ಕಾರ್ಯಕಾರಿ ಸಮಿತಿಯ ತಿಮ್ಮಪ್ಪ ಕೋಟ್ಯಾನ್, ನಾಗೇಶ್ ಕರ್ಕೇರ, ಮೋನಪ್ಪ ತಿಂಗಳಾಯ, ದಾಮೋದರ ಪುತ್ರನ್, ಕೃಷ್ಣ ಅಮೀನ್, ಸದಸ್ಯರಾದ ವಿನೋದ್ ಸಾಲ್ಯಾನ್, ರಾಮ ಕರ್ಕೇರ, ಯಶ್ ಶೆಟ್ಟಿ, ಗಂಗಾಧರ ಸುವರ್ಣ, ವಾಮನ್ ಸುವರ್ಣ, ಮಹಿಳಾ ವಿಭಾಗದ ಸದಸ್ಯೆಯರುಗಳಾದ ಭವಾನಿ ಸಾಲ್ಯಾನ್, ವಿದ್ಯಾ ಸಾಲ್ಯಾನ್, ಲಕ್ಷ್ಮೀ ಕಾಂಚನ್, ಲಕ್ಷ್ಮೀ ಕರ್ಕೇರ, ಪೂಜಾ ಪುತ್ರನ್, ಉಷಾ ಮೆಂಡನ್ ಹಾಗೂ ಸರ್ವ ಭಕ್ತಾದಿಗಳು ಸಹಕರಿಸಿದರು. ಭಕ್ತಾದಿಗಳು ಬೆಳಗ್ಗೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರು.