ಎರಡು ಬ್ಲಾಕ್ ಶೌಚಾಲಯ, ಸ್ನಾನ ಗೃಹ ನಿರ್ಮಾಣ. ಮೂರು ಕಡೆಗೆ ಎಣ್ಣೆ ಹೊಂಡ ನಿರ್ಮಾಣ, ಪಾದಗಟ್ಟೆಗಳ ರಸ್ತೆ ಅಭಿವೃದ್ಧಿ, ಕೂಡು ರಸ್ತೆ, ರಿಂಗ್ ರೋಡ್ ನಿರ್ಮಾಣ, ಒಂದೇ ಕಡೆಗೆ ಪಡ್ಡಲಗಿ ತುಂಬುವ ವ್ಯವಸ್ಥೆ
Advertisement
ಮಾಸ್ಟರ್ ಪ್ಲ್ಯಾನ್ ತಯಾರುಕರ್ನಾಟಕ -ಮಹಾರಾಷ್ಟ್ರದಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅನೇಕ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಭಕ್ತರ ಸಂಖ್ಯೆ ದ್ವಿಗುಣಗೊಂಡರೂ ಸೌಕರ್ಯಗಳು ಮಾತ್ರ ಮರೀಚಿಕೆ. ಈಗಾಗಲೇ ದೇವಸ್ಥಾನ ಆವರಣದ ಸಂಪೂರ್ಣ ಪ್ರದೇಶ ಸಮೀಕ್ಷೆ ನಡೆಸಲಾಗಿದೆ. ಹುಬ್ಬಳ್ಳಿಯ ವಿಜಯನ್ ಸೊಲ್ಯುಶನ್ ಕಂಪೆನಿಗೆ ಗುತ್ತಿಗೆ ನೀಡಲಾಗಿದ್ದು, ದೇವಸ್ಥಾನದ ಸಾವಿರ ಎಕರೆ ಪ್ರದೇಶದಲ್ಲಿ ಅಗತ್ಯ ಸೌಕರ್ಯ ಒದಗಿಸಬೇಕು ಎಂಬುದರ ಕುರಿತು ಯೋಜನೆ ರೂಪಿಸಲಾಗುತ್ತಿದೆ.
ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ವರ್ಷಪೂರ್ತಿ ಜಾತ್ರೆ, ಉತ್ಸವಗಳು ನಡೆಯುತ್ತವೆ. ಭಕ್ತರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಇದೆ. ಹುಣ್ಣಿಮೆಗಂತೂ ಭಕ್ತ ಸಾಗರವೇ ಹರಿದು ಬರುತ್ತದೆ. ಭಕ್ತರಿಗಾಗುವ ಅನನುಕೂಲ ಸರಿಪಡಿಸಲು ರಾಜ್ಯ ಸರಕಾರ ಕಾಶಿ ಮಾದರಿಯಲ್ಲಿ ದೇವಸ್ಥಾನಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ದೇವಸ್ಥಾನದ ಅಭಿವೃದ್ಧಿಗಾಗಿ ಮಾಸ್ಟರ್ ಪ್ಲಾÂನ್ ಮಾಡಿಕೊಳ್ಳಲಾಗುತ್ತಿದೆ. ಅಗತ್ಯ ಇರುವ ಮೂಲ ಸೌಕರ್ಯ ಒದಗಿಸಲಾಗುವುದು. ಭಕ್ತರಿಗೆ ಅನುಕೂಲ ಆಗುವ ದೃಷ್ಟಿಯಿಂದ ವ್ಯವಸ್ಥೆ ಮಾಡಲಾಗುತ್ತಿದೆ. ಇಡೀ ಗುಡ್ಡಕ್ಕೆ ಆಧುನಿಕ ಸ್ಪರ್ಶ ನೀಡಿ ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು.
-ರವಿ ಕೋಟಾರಗಸ್ತಿ
ಕಾರ್ಯ ನಿರ್ವಾಹಕ ಅಧಿಕಾರಿ, ಯಲ್ಲಮ್ಮ ದೇವಸ್ಥಾನ, ಸವದತ್ತಿ
Related Articles
Advertisement