Advertisement

ಶ್ರೀ ಮದ್ಭಾರತ ಮಂಡಳಿಯ ಗ್ರಂಥ ಪಾರಾಯಣ ಸಮಾಪ್ತಿ,ಮಂಗಳ್ಳೋತ್ಸವ

05:11 PM Feb 22, 2017 | |

ಮುಂಬಯಿ: ಶ್ರೀ ಮದ್ಭಾರತ ಮಂಡಳಿ ಮುಂಬಯಿ ವತಿಯಿಂದ ಗ್ರಂಥ ಪಾರಾಯಣ ಸಮಾಪ್ತಿ ಹಾಗೂ ಮಂಡಳಿಯ 139ನೇ ವಾರ್ಷಿಕ ಮಂಗಳ್ಳೋತ್ಸವವು ಫೆ. 18, 19 ರಂದು  ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಅಂಧೇರಿಯ ಶ್ರೀ ಲಕ್ಷ್ಮೀನಾರಾಯಣ ಮಂದಿರದಲ್ಲಿ ಜರಗಿತು.

Advertisement

ಫೆ. 18ರಂದು ಸಂಜೆ  ಶ್ರೀ ದೇವರ ಮೂರ್ತಿ ಯನ್ನು ಮಂಟಪನಲ್ಲಿ ಆರೂಢ ಗೊಳಿಸಲಾಯಿತು.  ಸಂಜೆ 6.30ರಿಂದ ಹೋಮ, ಬ್ರಾಹ್ಮಣ ಸತ್ಕಾರ, ರಾತ್ರಿ 7.30ರಿಂದ ಗ್ರಂಥ ಪಾರಾಯಣ, ಆನಂತರ ಉಪಕಾರ ಸ್ಮರಣೆ, ರಾತ್ರಿ 9.50 ರಿಂದ ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.

ಫೆ. 19ರಂದು ಬೆಳಗ್ಗೆ 8 ರಿಂದ ಭಜನೆ, ಉತ್ತರ ಪೂಜೆ, ಮುಖ್ಯ ಅತಿಥಿಗಳಿಗೆ ಸತ್ಕಾರ, ಪೂರ್ವಾಹ್ನ 11.30ರಿಂದ ಪ್ರಾರ್ಥನೆ, ಹರಕೆ ಸಮರ್ಪಣೆ, ಧಾರ್ಮಿಕ ಸಭೆ, ಮಧ್ಯಾಹ್ನ 12.05ರಿಂದ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ಅಪರಾಹ್ನ 3 ರಿಂದ ಶ್ರೀ ದೇವರ ಮೂರ್ತಿಯನ್ನು ಪಲ್ಲಕ್ಕಿಯೊಂದಿಗೆ ಸಾತ್‌ಬಂಗ್ಲೆಯ ಚೌಪಾಟಿಗೆ ಮೆರವಣಿಗೆಯೊಂದಿಗೆ ಅವಭೃತ ಸ್ನಾನಕ್ಕೆ ಕೊಂಡೊಯ್ಯಲಾಯಿತು. ಆನಂತರ ಅಂಧೇರಿ ಪಶ್ಚಿಮದ ಮೊಗವೀರ ಭವನದಲ್ಲಿ ಅನ್ನಸಂತರ್ಪಣೆ ನಡೆಯಿತು. ಗುರುಪ್ರಸಾದ್‌ ಭಟ್‌ ಅವರ ಪೌರೋಹಿತ್ಯದಲ್ಲಿ ಮಂಗಳ್ಳೋತ್ಸವವು ಜರಗಿದ್ದು,  ಭಕ್ತಾದಿಗಳು ದೇವರಿಗೆ ಹರಕೆಯ ರೂಪದಲ್ಲಿ ಕ್ಷೀರಪ್ರಸಾದ, ಹೂವು, ಲಡ್ಡು, ಎಣ್ಣೆ ಇತ್ಯಾದಿ ಸೇವೆಗಳನ್ನು ನೀಡಿ ಸಹಕರಿಸಿದರು.

ಮಂಡಳಿಯ ಅಧ್ಯಕ್ಷ ಜಗನ್ನಾಥ ಪಿ. ಪುತ್ರನ್‌, ಉಪಾಧ್ಯಕ್ಷರುಗಳಾದ ಒಡೆಯರಬೆಟ್ಟು ರಘು ನಾಥ್‌ ಬಿ. ಕುಂದರ್‌ ಮತ್ತು ಸಂಜೀವ ಬಿ. ಚಂದನ್‌, ಪ್ರಧಾನ ಕಾರ್ಯದರ್ಶಿ ಗುಂಡಿ ವಿ. ಕೆ. ಸುವರ್ಣ, ಜತೆ ಕಾರ್ಯದರ್ಶಿಗಳಾದ ಸಣ್ಣಗುಂಡಿ ಲೋಕನಾಥ್‌ ಸಿ. ಕಾಂಚನ್‌ ಮತ್ತು ಪಲಿಮಾರು ಹರಿಶ್ಚಂದ್ರ ಸಿ. ಕಾಂಚನ್‌, ಗೌರವ ಪ್ರಧಾನ ಕೋಶಾಧಿಕಾರಿ ಮೂಳೂರು ಕೇಶವ ಆರ್‌. ಪುತ್ರನ್‌, ಜತೆ ಕೋಶಾಧಿಕಾರಿಗಳಾದ ಮೂಳೂರು ನಾರಾಯಣ ಸಿ. ಸುವರ್ಣ ಮತ್ತು ಬೈಕಂಪಾಡಿ ಶ್ಯಾಮ ಕೆ. ಪುತ್ರನ್‌, ಪಾರುಪತ್ಯಗಾರರುಗಳಾದ ಜೆ. ಪಿ. ಪುತ್ರನ್‌, ವಿ. ಕೆ. ಸುವರ್ಣ, ನಾರಾಯಣ ಸಿ. ಸುವರ್ಣ, ಆನಂದ ಎ. ಅಮೀನ್‌, ನಾಗೇಶ್‌ ಎಲ್‌. ಮೆಂಡನ್‌, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ನಾಗೇಶ್‌ ಎಲ್‌. ಮೆಂಡನ್‌, ಶಶಿಕುಮಾರ್‌ ಎಸ್‌. ಕೋಟ್ಯಾನ್‌, ಲೋಕನಾಥ ಓಡಿ ಮೆಂಡನ್‌, ವಾಸು ಎಸ್‌. ಉಪ್ಪೂರು, ದೇವದಾಸ್‌ ಪಿ. ಕರ್ಕೇರ, ಗೋವಿಂದ ಎನ್‌. ಪುತ್ರನ್‌, ಗಂಗಾಧರ ಎಸ್‌. ಕರ್ಕೇರ, ಎಚ್‌. ಮಹಾಬಲ್‌, ಸುರೇಂದ್ರನಾಥ್‌ ಹಳೆಯಂಗಡಿ, ಆನಂದ ಎ. ಅಮೀನ್‌, ಗಂಗಾಧರ ಟಿ. ಸಾಲ್ಯಾನ್‌ ಅವರು ಉಪಸ್ಥಿತರಿದ್ದರು.

Advertisement

ಗ್ರಂಥವಾಚಕರಾಗಿ ಉಡುಪಿಯ ಶೋಭಾ ವಿಠuಲ್‌ ಬಂಗೇರ, ಅರ್ಥ ವಿವರಣೆಗಾರರಾಗಿ ಮಲ್ಪೆ ಪುಷ್ಪಾ ಗೋಪಾಲ ಬಂಗೇರ, ಅರ್ಚಕರಾಗಿ ವಾಸು ಎಸ್‌. ಉಪ್ಪೂರು, ಚಾಮರ ಸೇವಕರಾಗಿ ಚರಂತಿಪೇಟೆ ಶಶಿಕುಮಾರ್‌ ಕೋಟ್ಯಾನ್‌ ಮತ್ತು ಅಳಕೆ ಪುರಂದರ ಅಮೀನ್‌, ಪೂಜಾ ಮೇಲ್ವಿಚಾರಕರಾಗಿ ಲೋಕನಾಥ್‌ ಓಡಿ ಮೆಂಡನ್‌ ಅವರು ಸಹಕರಿಸಿದರು.   ಭಕ್ತಾದಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯ ಬಾಂಧವರು, ದಾನಿಗಳು, ಸಮಾಜ ಸೇವಕರು, ವಿವಿಧ ಕ್ಷೇತ್ರಗಳ ಗಣ್ಯರು, ತುಳು-ಕನ್ನಡಿಗರು   ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

 ಚಿತ್ರ-ವರದಿ : ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next