ಕ್ವೀನ್ಸ್‌ಟೌನ್: ಬೃಹತ್ ಮೊತ್ತದ ಅಂತಿಮ ಟಿ20 ಪಂದ್ಯದಲ್ಲಿ ಶ್ರೀಲಂಕಾವನ್ನು 4 ವಿಕೆಟ್‌ಗಳಿಂದ ಪರಾಭವಗೊಳಿಸಿದ ನ್ಯೂಜಿಲ್ಯಾಂಡ್ 2-1ರಿಂದ ಸರಣಿ ವಶಪಡಿಸಿಕೊಂಡಿದೆ.
ಶ್ರೀಲಂಕಾ 6 ವಿಕೆಟಿಗೆ 182 ರನ್ ಪೇರಿಸಿದಾಗ ಪಂದ್ಯವನ್ನು ಉಳಿಸಿಕೊಳ್ಳುವ ಸಾಧ್ಯತೆಯೊಂದಿತ್ತು. ಆದರೆ ಓಪನರ್ ಟಿಮ್ ಸೀಫರ್ಟ್ ಅವರ ಬ್ಯಾಟಿಂಗ್ ಸಾಹಸದಿಂದ ನ್ಯೂಜಿಲ್ಯಾಂಡ್ ಒಂದು ಎಸೆತ ಬಾಕಿ ಉಳಿದಿರುವಂತೆಯೆ 6 ವಿಕೆಟಿಗೆ 183 ರನ್ ಬಾರಿಸಿ ವಿಜಯೋತ್ಸವ ಆಚರಿಸಿತು.
ಟಿಮ್ ಸೀಫರ್ಟ್ 48 ಎಸೆತಗಳಿಂದ 88 ರನ್ ಹೊಡೆದರು(10 ಬೌಂಡರಿ, 3 ಸಿಕ್ಸರ್). ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಗಳೆರಡನ್ನೂ ತಮ್ಮದಾಗಿಸಿಕೊಂಡರು. ಶ್ರೀಲಂಕಾ ಪರ ಆರಂಭಕಾರ ಕುಸಲ್ ಮೆಂಡಿಸ್ ಅಮೋಘ ಬ್ಯಾಟಿಂಗ್ ನಡೆಸಿ 48 ಎಸೆತಗಳಿಂದ 73 ರನ್ ಹೊಡೆದರು(6 ಬೌಂಡರಿ, 4 ಸಿಕ್ಸರ್).
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-6 ವಿಕೆಟಿಗೆ 182(ಮೆಂಡಿಸ್ 73, ಪೆರೆರ 33, ನಿಸ್ಸಂಕ 25, ಲಿಸ್ಟರ್ 37ಕ್ಕೆ 2). ನ್ಯೂಜಿಲ್ಯಾಂಡ್-19.5 ಓವರ್‌ಗಳಲ್ಲಿ 6 ವಿಕೆಟಿಗೆ 183(ಸೀಫರ್ಟ್ 88, ಲ್ಯಾಥಂ 31, ಲಹಿರು ಕುಮಾರ 38ಕ್ಕೆ 3). ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಟಿಮ್ ಸೀಫರ್ಟ್.