Advertisement

Shree Krishna: ಪವಾಡಗಳಿಂದಲೇ ಜೀವನದ ಮಾರ್ಗ ತೋರಿಸಿದ ಮಾಧವ

03:00 PM Sep 05, 2023 | Team Udayavani |

ಸನಾತನ ಧರ್ಮದ ವಿಶೇಷ ಹಬ್ಬ ಶ್ರಾವಣ ಮಾಸದ ಕೃಷ್ಣ ಪಕ್ಷ ಅಷ್ಟಮಿಯ ದಿವಸ. ಶ್ರೀ ಕೃಷ್ಣನ ಜನ್ಮ ದಿನವನ್ನು ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ಆಚರಿಸಲ್ಪಡುತ್ತದೆ. ಈ ಪವಿತ್ರ ಶ್ರೇಷ್ಠ ದಿನದಂದು ವಿಷ್ಣು ತನ್ನ ಎಂಟನೇ ಅವತಾರವನ್ನು ತಾಳಿದ, ಇದಕ್ಕೆ ಕಾರಣ ಕೃಷ್ಣನೇ ಭಗವದ್ಗೀತೆಯಲ್ಲಿ ಸಾರಿರುವಂತೆ,

Advertisement

“ಪರಿತ್ರಾಣಾಯ ಸಾಧೂನಾಂ

ವಿನಾಶಾಯ ಚದುಷ್ಕೃತಂ

ಧರ್ಮ ಸಂಸ್ಥಾಪನಾರ್ಥಾಯ

ಸಂಭವಾಮಿ ಯುಗೇ ಯುಗೇ ‘

Advertisement

ಶಿಷ್ಟ ರಕ್ಷಣಾ ದುಷ್ಟ ಶಿಕ್ಷಣೆ. ಸಾಧು ಜನರನ್ನು ರಕ್ಷಿಸುವುದಕ್ಕೆ ದುರ್ಜನರ ವಿನಾಶ ಮಾಡುವ ಉದ್ದೇಶ ಹಾಗೂ ಧರ್ಮದ ಪುನರುತ್ಥಾನಕ್ಕಾಗಿ ವಿಷ್ಣು ದ್ವಾಪರ ಯುಗದಲ್ಲಿ ಕೃಷ್ಣಾವತಾರ ತಾಳುತ್ತಾನೆ.

ಜನನದ ಹಿನ್ನೆಲೆ ಉಗ್ರಸೇನನ ಮಗ ಕಂಸ ತಂದೆಯನ್ನೇ ಸೆರೆಯಲ್ಲಿಟ್ಟು ಮಥುರ ನಗರವನ್ನಾಳುತ್ತಿರುತ್ತಾನೆ. ಪ್ರಜೆಗಳು ಅವನ ಕಿರುಕುಳ ತಾಳಲಾರದೆ ಅಶಾಂತಿ ಇಂದಿರುತ್ತಾರೆ. ಕಂಸ ತನ್ನ ಸಹೋದರಿ ತಂಗಿ ದೇವಕಿಯ ವಿವಾಹವನ್ನು ವಿಜೃಂಭಣೆಯಿಂದ ನೆರವೇರಿಸುತ್ತಿದ್ದಾಗ, ಮೆರವಣಿಗೆ ಹೊರಟಿರುತ್ತದೆ, ಕಂಸ ಅಹಂಕಾರದಿಂದ ಬೀಗುತ್ತ ರಥದಲ್ಲಿದ್ದಾಗ ಅಶರೀರವಾಣಿ ಕೇಳಿಬರುತ್ತದೆ. ನಿನ್ನ ತಂಗಿಯ ಎಂಟನೇ ಮಗುವಿನಿಂದಲೇ ನಿನಗೆ ಸಾವು ಕಂಸ !

ಇದು ಅಸಾಧ್ಯ “ರೋಷದಿಂದ ತಂಗಿಯನ್ನೇ ಕೊಲ್ಲಲು ಹೊರಟ ಕಂಸನಿಗೆ ದೇವಕಿಯ ಪತಿ ವಸುದೇವ “ಓ ರಾಜನೇ ನನಗೆ ಹುಟ್ಟುವ ಮಕ್ಕಳನ್ನು ನಿನಗೆ ಅರ್ಪಿಸುತ್ತೇನೆ’ ಅಂದಾಗ ಕಂಸ ಅವರಿಬ್ಬರನ್ನು ಕಾರಾಗೃಹದಲ್ಲಿ ಬಂಧಿಸಿ ಅವರಿಗೆ ಹುಟ್ಟಿದ ಮಕ್ಕಳನ್ನು ಕೊಲ್ಲುತ್ತಿರಲು ಏಳನೆಯ ಹೆಣ್ಣುಮಗು ಅವನ ಕೈಯಿಂದ ಗಗನಕ್ಕೆ ಹಾರಿ ಆಗಸದಿಂದ ಹೇಳುತ್ತದೆ “ಮುಂಬರುವ ಎಂಟನೇ ಮಗುವಿನಿಂದ ನಿನಗೆ ಸಾವು ಖಚಿತ’  ತಂಗಿಯ ಎಂಟನೇ ಮಗುವಿನೆ ನಿರೀಕ್ಷೆಯಲ್ಲಿ ಸಹೋದರ ಕಂಸ ಹಗಲು ಇರಳು ಎಣಿಸುತ್ತಿರುತ್ತಾನೆ.

ನವಮಾಸ ತುಂಬಿ ಪ್ರಸವವೇದನೆಯಲ್ಲಿದ್ದ ದೇವಕಿಗೆ ವಸುದೇವ ಸಾಂತ್ವನ ತೋರುತ್ತಿದ್ದಾಗ ಅಶರೀರವಾಣಿ ಕೇಳಿಬರುತ್ತದೆ .”ನಾನು ಹುಟ್ಟಿದ ತತ್‌ಕ್ಷಣ ನನ್ನನ್ನು ಗೋಕುಲದಲ್ಲಿ ನಂದನ ಮನೆಗೆ ಕರೆದುಕೊಂಡು ಹೋಗು’. ಭಗವಂತನ ಇಚ್ಛೆಯಂತೆ ವಸುದೇವ ಗೋಕುಲದಲ್ಲಿ ನಂದಗೋಪ ಯಶೋಧ ರ ಹತ್ತಿರ ಬಿಟ್ಟು ಅವರಿಗೆ ಆಗತಾನೆ ಜನಿಸಿದ ಹೆಣ್ಣು ಮಗುವನ್ನು ತಂದು ದೇವಕಿ ಹತ್ತಿರ ಮಲಗಿಸುತ್ತಾನೆ. ಇದೊಂದೂ ಅರಿಯದ ಕಂಸ ಆ ಹೆಣ್ಣುಮಗುವನ್ನು ಇನ್ನೇನು ಕೊಲ್ಲಲೆತ್ನಿಸಿದಾಗ ಮತ್ತೂಮ್ಮೆ ಅಶರೀರವಾಣಿ ಕೇಳಿ ಬರುತ್ತದೆ. “ಓ ಕಂಸ ನಿನ್ನನ್ನು ಧ್ವಂಸಿಸುವನು ಸುರಕ್ಷಿತವಾಗಿ ಬೆಳೆಯುತ್ತಿದ್ದಾನೆ’. ಕೇಳಿದ ಕಂಸ ವ್ಯಾಕುಲ ನಾಗುತ್ತಾನೆ. ಹೀಗೆ ಕೃಷ್ಣಾವತಾರ ಪವಾಡಗಳಿಂದ ಆರಂಭವಾಗಿ ದೇವಕಿ ಯಶೋಧ ಇಬ್ಬರು ಮಾತೆಯರ ನಡುವೆ ಕೃಷ್ಣನಿಗೆ ಮಾತೃಪ್ರೇಮ ಬೆಳೆಯುತ್ತದೆ.

ಬಾಲ ಕೃಷ್ಣನ ಲೀಲೆ ಬಲು ಚೆಂದ:

“ಮಣ್ಣು ತಿನ್ನಬೇಡ ‘ ಕಾತುರದಿ ಯಶೋಧೆ ಬಾಯಿ ತೆಗೆ ಅಂದಾಗ: ಮಾತೆಗೆ ತೋರಿದ ಜಗವ ತನ್ನ ಬಾಯಲ್ಲಿ. ಕಾಳಿಂಗ ಸರ್ಪವ ಕೊಂದು ಮಕ್ಕಳ ಕಾಪಾಡಿದ . ಗೋವರ್ಧನ ಗಿರಿ ಎತ್ತಿ ಪ್ರವಾಹದಿಂದ ಜನರ ಕಾಪಾಡಿದ. ಯೌವ್ವನಕ್ಕೆ ಕಾಲಿಡುತ್ತಿದ್ದಂತೆ ಕಂಸನ ವಧೆ ಮಾಡಿ ತಂದೆ-ತಾಯಿಯರ ಬಂಧನ ಬಿಡಿಸಿದ. ಗೋಪಿಯರಿಗೆ ತನ್ನ ಲೀಲೆ ತೋರಿಸಿ ರಾಸಕ್ರೀಡೆ ಆಡಿದ . ಹುಟ್ಟುತ್ತಲೇ ಪವಾಡಗಳನ್ನು ಸೃಷ್ಟಿಸಿ ಎಲ್ಲರನ್ನೂ ಆಶ್ವರ್ಯಕ್ಕೆ ಒಳಮಾಡುತ್ತಿದ್ದ.

ನವನೀತ ಚೋರ, “ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ’  ಎಂದು ಮುನಿದ ಅಮ್ಮನಿಗೆ ಹೇಳಿದ. ಗುರುಕುಲದ ಸ್ನೇಹಿತ ಸುಧಾಮನ ಬಡತನ ನೀಗಿದ. ಪಾಂಡವರ ಪಕ್ಷವಾಗಿ ನಿಂತು ಅವರನ್ನು ದುರ್ಯೋಧನನ ಕಪಟಗಳಿಂದ ಕಾಪಾಡಿದ. ದ್ರೌಪದಿಯ ಕರೆಗೆ ಓಗೊಟ್ಟು ಅವಳ ಗೌರವ ಕಾಪಾಡಿದ. ಅರ್ಜುನನನ್ನು ಪರಮ ಸಂಗಾತಿಯಾಗಿ ಆರಿಸಿ, ಧರ್ಮಕ್ಕೆ ಹೋರಾಡು ಎಂದು ಪ್ರೋತ್ಸಾಹಿಸಿದ. ಪಾಂಡವ ಕೌರವರ ನಡುವೆ ಶಾಂತಿ ಧೂತನಾಗಿ ಯುದ್ಧ ಬೇಡ ಎಂದು ಬುದ್ಧಿಹೇಳಿದ. ದುರ್ಯೋಧನನ ಅಹಂಕಾರ ಮಹಾಭಾರತದ ಯುದ್ಧದವರೆಗೂ ಹೋದಾಗ, “ನನಗೆ ಯುದ್ಧಬೇಡ’ ಎಂದು ಅರ್ಜುನ ಧೈರ್ಯ ಕಳೆದುಕೊಂಡಾಗ ಕ್ಷತ್ರಿಯ ಧರ್ಮವನ್ನು ಬೋಧಿಸಿ, ನೀನು ಧರ್ಮಕ್ಕೆ ಹೋರಾಡು ಎನ್ನುತ್ತ ಅವನ ರಥಕ್ಕೆ ಸಾರಥಿಯಾದ. ಅರ್ಜುನನಿಗೆ ವಿಶ್ವರೂಪ ತೋರಿಸಿ ತನ್ನ ನಿಜಸ್ವರೂಪ ತೋರಿದ. ನಾನು ನನ್ನವರನ್ನು ಕೊಲ್ಲಲಾರೆ ಅಂದಾಗ ಆತ್ಮ ಜ್ಞಾನ ತಿಳಿಸಿ ಭಗವದ್ಗೀತೆ ಬೋಧಿಸಿದ. ಭಗವದ್ಗೀತೆ ಮೂಲಕ ಮೋಕ್ಷ ಪಡೆಯುವ ಮಾರ್ಗವನ್ನು ನೀಡಿದ. ಜ್ಞಾನ ಮಾಗ, ಕರ್ಮಮಾಗ, ಭಕ್ತಿ ಮಾರ್ಗಗಳನ್ನು ಸೂಚಿಸಿ ನಿದರ್ಶನ ನೀಡಿದ.

ಜೀವನದ ಮಾರ್ಗ ತೋರಿಸಿದ ಮಾಧವ

ಅರ್ಜುನನನ್ನು ಪರಮ ಸಂಗಾತಿಯಾಗಿ ಆರಿಸಿ, ಧರ್ಮಕ್ಕೆ ಹೋರಾಡು ಎಂದು ಪ್ರೋತ್ಸಾಹಿಸಿದ. ಪಾಂಡವ ಕೌರವರ ನಡುವೆ ಶಾಂತಿ ಧೂತನಾಗಿ ಯುದ್ಧ ಬೇಡ ಎಂದು ಬುದ್ಧಿಹೇಳಿದ. ದುರ್ಯೋಧನನ ಅಹಂಕಾರ ಮಹಾಭಾರತದ ಯುದ್ಧದವರೆಗೂ ಹೋದಾಗ, “ನನಗೆ ಯುದ್ಧಬೇಡ’ ಎಂದು ಅರ್ಜುನ ಧೈರ್ಯ ಕಳೆದುಕೊಂಡಾಗ ಕ್ಷತ್ರಿಯ ಧರ್ಮವನ್ನು ಬೋಧಿಸಿ, ನೀನು ಧರ್ಮಕ್ಕೆ ಹೋರಾಡು ಎನ್ನುತ್ತ ಅವನ ರಥಕ್ಕೆ ಸಾರಥಿಯಾದ. ಅರ್ಜುನನಿಗೆ ವಿಶ್ವರೂಪ ತೋರಿಸಿ ತನ್ನ ನಿಜಸ್ವರೂಪ ತೋರಿದ. ನಾನು ನನ್ನವರನ್ನು ಕೊಲ್ಲಲಾರೆ ಅಂದಾಗ ಆತ್ಮ ಜ್ಞಾನ ತಿಳಿಸಿ ಭಗವದ್ಗೀತೆ ಬೋಧಿಸಿದ. ಭಗವದ್ಗೀತೆ ಮೂಲಕ ಮೋಕ್ಷ ಪಡೆಯುವ ಮಾರ್ಗವನ್ನು ನೀಡಿದ. ಜ್ಞಾನ ಮಾರ್ಗ, ಕರ್ಮಮಾರ್ಗ, ಭಕ್ತಿ ಮಾರ್ಗಗಳನ್ನು ಸೂಚಿಸಿ ನಿದರ್ಶನ ನೀಡಿದ.

ಗೀತಾ ಸಾರ

“ಯೋಚನೆಗಳೇ ಜೀವನದ ಸಮಸ್ಯೆ ಪಾರ್ಥ

ಜ್ಞಾನ ಸಂಪಾದನೆ ಅದರ ಪರಿಹಾರ ಪಾರ್ಥ

ಜೀವಿಸು ಮತ್ತೂಬ್ಬರಿಗಾಗಿ, ಜೀವನದ ಅರ್ಥ

ಅದೇ ಸನ್ಮಾರ್ಗ ನಿನ್ನ ಅಭಿವೃದ್ಧಿಗೆ

ಅರ್ಪಿಸು ಕರ್ಮ, ಫ‌ಲ ಬಯಸದೆ

ಎನಗೆ ಬಿಡು ಅಹಂ, ಆನಂದಿಸು ಅನಂತನ ನಿನ್ನೊಳಗೆ

ಕಲಿತ ವಿದ್ಯೆಯಲಿ ಜೀವನ ಸಾಗಲಿ’ ಎಂದು ನಮ್ಮ ಕರ್ಮದ ಪ್ರಾಮುಖ್ಯತೆಯನ್ನು ತಿಳಿಸಿದ. ಹೀಗೆ ಮುಂದುವರಿಯುತ್ತ

” ದುರ್ಮಾರ್ಗ ದೂರವಿರಲಿ

ಗಮನವಿರಲಿ ದೇವನಲ್ಲಿ

ಕಾಣು ಅವನ ಎಲ್ಲ ವಸ್ತು, ಜೀವಿಗಳಲಿ

ಬ್ರಹ್ಮ ಸತ್ಯ ಒಪ್ಪು ಜೀವನದಲ್ಲಿ

ಮನಸ್ಸು ಸೇರಲಿ ಅವನಲ್ಲಿ

ಮಾಯಾ ಜಾಲ  ದೂರವಿರಲಿ

ನಾಮಸ್ಮರಣೆ ,ಭಕ್ತಿ ನಿರಂತರವಾಗಲಿ

ಬಾಳಿನ ಗುರಿ ಅದಾಗಲಿ

ಆಗ ನೀಡುವೆ ಬಹುಮಾನ “ಸತ್ವಗುಣ’

ಆಕಾಂಕ್ಷೆಗಳಲ್ಲಿ ಅದು ಉತ್ತಮ ಗುಣ

ದೊರಕುವುದು ಮುಕ್ತಿ , ಅನುಮಾನ ಬೇಡ’ ಎಂದು ಸತ್ಯದ, ನಿಷ್ಠೆಯ ದಾರಿಯಲ್ಲಿ ಸಾಗುವುದು ಹೇಗೆ ಎಂದು ಮಾರ್ಗದರ್ಶಿಸಿದ.

ಭಗವದ್ಗೀತೆ ಅನೇಕ ಪಾಶ್ಚಿಮಾತ್ಯ ಭಾಷೆಗಳಲ್ಲಿ ಅನುವಾದ ಮಾಡಲ್ಪಟ್ಟಿದೆ . ಇಟಾಲಿಯನ್‌ ಭಾಷೆಯಲ್ಲಿ ಇದರ ಶೀರ್ಷಿಕೆ Il canto del beato, ಅಂದರೆ ಭಗವಂತನ ಹಾಡು. ಇದು ಎಲ್ಲರಿಗೂ ಅಚ್ಚುಮೆಚ್ಚಿನ ಗ್ರಂಥ.  ಕೃಷ್ಣನ ಜನ್ಮಾಷ್ಟಮಿಯ ಆಚರಣೆಯು ಪ್ರಾದೇಶಿಕವಾಗಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಭಾರತ ಒಂದು ಮೊಸಾಯಿಕ್‌ ತರಹ ವೈವಿಧ್ಯತೆಯಲ್ಲಿ ಏಕತೆ ನೋಡುವುದೇ ನಮ್ಮ ವಿಶೇಷತೆ. ಒಂದೊಂದು ಪ್ರಾಂತದಲ್ಲಿ ಒಂದೊಂದು ತರಹ ಆಚರಿಸುತ್ತಾರೆ. ಉತ್ತರ ಭಾರತದಲ್ಲಿ ದೇಗುಲ ಗಳಲ್ಲಿ 108 ತರಹ ಸಿಹಿತಿಂಡಿ ಗಳನ್ನು ನೈವೇದ್ಯ ಮಾಡಿ, ನವವಸ್ತ್ರ ಗಳನ್ನು ಧರಿಸಿ, ಕೆಲವರು ಉಪವಾಸ ವ್ರತ ಆಚರಿಸಿ, ಕೃಷ್ಣನನ್ನು ಪೂಜಿಸಿ, ಮಾರನೇ ದಿನ ಕೃಷ್ಣಲೀಲೆ ಅಂಗ  ವಾಗಿ ಮಟ್ಕಾ (ಮಡಕೆ ) ಗಳನ್ನು ಮೇಲೆ ಕಟ್ಟಿ ಒಡೆ ಯು ತ್ತಾರೆ. ಅವನು ನವನೀತ ಚೋರ ಮಡಿಕೆ ಒಡೆದು ಬೆಣ್ಣೆ ತಿನ್ನುತ್ತಿದ್ದನಂತೆ, ಇದೇ ಮಟ್ಕಾ ಒಡೆಯುವ ಅರ್ಥ.

ದಕ್ಷಿಣ ಭಾರತೀಯರು ಈ ದಿನ ಮಧ್ಯರಾತ್ರಿಯವರೆಗೂ ಉಪವಾಸವಿದ್ದು ಕೃಷ್ಣನನ್ನು ಪ್ರಾರ್ಥಿಸುತ್ತಾರೆ. ಕರೆದ ತಿಂಡಿ ಅವನಿಗೆ ಪ್ರೀತಿಯಂತೆ ! ನಾನಾಬಗೆಯ ಖಾರದ ತಿನಿಸುಗಳ ಜತೆ ಸಿಹಿ ತಿಂಡಿಗಳನ್ನು ಮಾಡಿ ಅವನಿಗೆ ಅರ್ಪಿಸುತ್ತಾರೆ. ಮಕ್ಕಳು ಕೃಷ್ಣನ ವೇಷಧರಿಸಿ ಕೊಳಲು ಹಿಡಿದು ಓಡಾಡುತ್ತಿದ್ದರೆ ಅದೇ ಕಣ್ಣಿಗೆ ಹಬ್ಬ.

ಮುಕುಂದ , ಮಾಧವ, ಪಾರ್ಥಸಾರಥಿ, ವೇಣುಗಾನಲೋಲ, ಗೋಪಾಲ್‌ ಹೀಗೆ ಅನೇಕ ಹೆಸರುಗಳಿಂದ ಕರೆಯಲ್ಪಡುವ ಕೃಷ್ಣನ ವೇಣುಗಾನಕ್ಕೆ ಗೋಪಿಯರೊಂದಿಗೆ ಗೋವುಗಳು ತಲೆದೂಗುತ್ತಿದ್ದವಂತೆ.

ಹೀಗೆ ಜನ್ಮಾಷ್ಟಮಿ ಹೊರದೇಶಗಳಲ್ಲೂ ಆಚರಣೆಯಲ್ಲಿದೆ. ಕೃಷ್ಣ ಇರುವನು ಎÇÉೆಲ್ಲೂ ಅವನ ಪರಮಭಕ್ತ ಅರ್ಜುನನ ಸಂಗಡ.

“ಯತ್ರ ಯೋಗೇಶ್ವರೋ ಕೃಷ್ಣ

ಯತ್ರ ಪಾರ್ಥ ಧನುರ್ಧರಃ

ತತ್ರಶ್ರೀ ವಿಜಯೋ ಭೂತಿ

ಧ್ರುವ ನೀತಿರಮತಿರ್ಮಮ ‘

ಕೃಷ್ಣ ಎಲ್ಲೆಲ್ಲಿ ಇರುವನೋ ಅಲ್ಲಿ ಸತ್ಯ, ಧರ್ಮ, ಶಾಂತಿ, ಪ್ರೇಮ ಶಾಶ್ವತ.

-ಜಯಮೂರ್ತಿ, ಇಟಲಿ

Advertisement

Udayavani is now on Telegram. Click here to join our channel and stay updated with the latest news.

Next