Advertisement
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಫೆ. 28ರಂದು ರಾಕ್ಷೋಘ್ನ ಹೋಮ, ನವಗ್ರಹ ವಾಸ್ತು ಹವನ ಹಾಗೂ ಫೆ. 29ರಂದು ಧನ್ವಂತರಿ, ಮೃತ್ಯುಂಜಯ ಹವನ ಮತ್ತಿತರ ವಿಧಿ-ವಿಧಾನಗಳು ನೆರವೇರಿದವು. ಫೆ. 29ರ ಸಂಜೆ ಜಿಎಸ್‌ಬಿ ಸಮಾಜದ ಪ್ರಸಿದ್ಧ ಕಲಾವಿದರಿಂದ ಭಜನ್ ಸಂಧ್ಯಾ, ಸ್ವಾಮೀಜಿಗಳ ಉಪಸ್ಥಿತಿ ಯಲ್ಲಿ ಧಾರ್ಮಿಕ ಸಭೆ ನಡೆಯಿತು. ಕಾಶೀ ಮಠಾಧೀಶರನ್ನು ಜಿಎಸ್‌ಬಿ ಸಮಾಜ ಬಾಂಧವರು ಮತ್ತು ಭಕ್ತರು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡರು. ಭಕ್ತರಿಂದ ಸಂಕೀರ್ತನೆ, ಶ್ರೀಗಳ ಪಾದಪೂಜೆ ನೆರವೇರಿತು. ಶ್ರೀಗಳು ಫಲಪುಷ್ಪ, ಮಂತ್ರಾಕ್ಷತೆಯನ್ನಿತ್ತು ಹರಸಿದರು.
Related Articles
Advertisement
ಮುಂಬಯಿ ಮತ್ತು ವಿವಿಧ ಉಪನಗರಗಳಾದ ಜಿಎಸ್‌ಬಿ ಸಭಾ ದಹಿಸರ್-ಬೊರಿವಲಿ, ಜಿಎಸ್‌ಬಿ ಮಂಡಳ ಥಾಣೆ, ಜಿಎಸ್‌ಬಿ ಸೇವಾ ಮಂಡಲ ಮುಂಬಯಿ ಸಹಿತ ಜಿಎಸ್‌ಬಿ ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸಮಾಜ ಬಾಂಧವರು, ಭಕ್ತರು, ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯಮಿಗಳು, ಪಾಲ್ಗೊಂಡು ಶುಭಹಾರೈಸಿದರು.
ಶ್ರೀ ಕ್ಷೇತ್ರದಲ್ಲಿ ಮಾ. 1ರಿಂದ ಮಾ. 9ರ ವರೆಗೆ ಸೀಯಾಳಾಭಿಷೇಕ, ದುರ್ಗಾ ನಮಸ್ಕಾರ ಪೂಜೆ, ನವ ಚಂಡಿಕಾ ಯಾಗ, ಮುದ್ರಾಧಾರಣೆ, ಪವಮಾನ ಅಭಿಷೇಕ, ಸುಂದರಕಾಂಡ ಕಲಶಾಭಿಷೇಕ, ಮಹಾವಿಷ್ಣು ಕಲಶಾಭಿಷೇಕ, ಸುಂದರ ಕಾಂಡ ಹವನ ಪಾರಾಯಣ, ವೇದವ್ಯಾಸ ಸಹಸ್ರನಾಮ ಹವನ ಸೇರಿದಂತೆ ವಿವಿಧ ಪೂಜೆ ಹವನಗಳು, ಅಭಿಷೇಕಗಳು, ರಾಮಾಯಣ ಪಾರಾಯಣ ಹಾಗೂ ವಿವಿಧ ಸೇವೆಗಳನ್ನು ಆಯೋಜಿಸಲಾಗಿದೆ.
ರಾಮ ಲಕ್ಷ್ಮಣರು ನೆಲೆಸಿದ್ದ ಸ್ಥಳ
ಶ್ರೀರಾಮ ಮತ್ತು ಲಕ್ಷ್ಮಣ ಸೀತೆಯನ್ನು ಹುಡುಕಲು ಹೊರಟಿದ್ದಾಗ ಈ ಸ್ಥಳದಲ್ಲಿ ನೆಲೆ ನಿಂತಿದ್ದರು ಎಂಬ ಪ್ರತೀತಿಯಿದೆ. ಶ್ರೀರಾಮನ ಬಾಯಾರಿಕೆಯನ್ನು ನೀಗಿಸಲು ಲಕ್ಷ್ಮಣನು ಬಾಣವನ್ನು ನೆಲಕ್ಕೆ ಪ್ರಯೋಗಿಸಿದಾಗ ನೆಲದಿಂದ ನೀರು ಚಿಮ್ಮಿತು. ಈ ಕಾರಣದಿಂದಲೇ ಈ ಸ್ಥಳವು ಬಾಣಗಂಗಾ ಎಂದು ಪ್ರಸಿದ್ಧಿ ಪಡೆದಿದೆ.
ವಾಲ್ಕೇಶ್ವರ ಸ್ಥಳನಾಮ ವಿಶೇಷ
ಶ್ರೀರಾಮನು ಬಾಣಗಂಗಾದಲ್ಲಿ ತಂಗಿದ್ದಾಗ ಮರಳು, ನೀರನ್ನು ಬಳಸಿ ಶಿವಲಿಂಗವನ್ನು ನಿರ್ಮಿಸಿ ಪೂಜೆಯನ್ನು ಸಲ್ಲಿಸಿರುವುದರಿಂದ ಮೂಲತಃ ಇದನ್ನು ವಾಲು ಚ ಈಶ್ವರ ಎಂದು ಕರೆಯಲಾಯಿತು (ವಾಲು ಎಂದರೆ ಮರಳು). ಮುಂದೇ ಇದೇ ವಾಲ್ಕೇಶ್ವರ ಆಯಿತು. ಬಾಣಗಂಗಾ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದೆ.