ಮುಂಬಯಿ: ಗರೋಡಿಗಳೆಂದರೆ ತುಳುನಾಡ ಪಾವಿತ್ರ್ಯತೆಯ ಪುಣ್ಯಕ್ಷೇತ್ರಗಳಾಗಿವೆ. ಪರಂಪರೆ, ಸಂಸ್ಕೃತಿ, ಸಂಪ್ರದಾಯ ಮತ್ತು ಧರ್ಮನಿಷ್ಠೆಯ ಕೇಂದ್ರಗಳಾಗಿರುವ ಗರೋಡಿಗಳು ನಂಬಿಕೆ ಇರಿಸಿದವರ ರಕ್ಷಣೆಯ ಕೇಂದ್ರಗಳೂ ಹೌದು. ತುಳುನಾಡ ಕಾರಣಿಕ ಕೇಂದ್ರಗಳಾಗಿರುವ ಗರೋಡಿಗಳ ಸೇವಾರಾಧನೆಯಿಂದ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಬಹುದು. ನಿಮ್ಮ ವಿಶ್ವಾಸ ಮತ್ತು ಬೆಂಬಲದೊಂದಿಗೆ ಗರೋಡಿಗಳ ಮೂಲಕ ಸೇವೆಗೈದು ಪುಣ್ಯ ಕಟ್ಟಿಕೊಳ್ಳುವುದೂ ನಮ್ಮೆಲ್ಲರ ಭಾಗ್ಯವಾಗಿದೆ. ನಮ್ಮ ಸಮಿತಿಯ ಸದಸ್ಯರು ಹೃದಯವಂತರು ಪ್ರತಿಯೊಂದು ಯೋಜನೆಗಳಿಗೆ ಧನ ಸಹಾಯ ನೀಡಿ ಪ್ರೋತ್ಸಾಹ ನೀಡುತ್ತಾರೆ. ಆದ್ದರಿಂದ ಇಂತಹ ಶ್ರದ್ಧಾ ಕೇಂದ್ರಗಳ ಮೂಲಕ ಸಮಾಜಮುಖೀ ಕೆಲಸಗಳು ನಡೆ ಯಬೇಕು ಎಂದು ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ತಿಳಿಸಿದರು.
ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಸಮಾಲೋಚನಾ ಸಭಾಗೃಹದಲ್ಲಿ ನ. 14ರಂದು ಪೂರ್ವಾಹ್ನ ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಇದರ ತೃತಿಯ ವಾರ್ಷಿಕ ಮಹಾಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಉಡುಪಿ ಜಿಲ್ಲೆಯ ಕಲ್ಯಾಣು³ರ ಮೂಡುತೋನ್ಸೆಯ ಬ್ರಹ್ಮಶ್ರೀ ಬೈದರ್ಕಳ ಪಂಚ ಧೂಮವತೀ ಗರೋಡಿ ಇದರ ಸವೊìನ್ನತಿಯೊಂದಿಗೆ ಸಮಾಜ ಸೇವೆಯಲ್ಲಿ ಸೇವಾನಿರತ ಗರೋಡಿ ಸೇವಾ ಟ್ರಸ್ಟ್ ಪೂರ್ವಜರ ದೂರದೃಷ್ಟಿಯ ಯೋಜನೆಗಳನ್ನು ಮುಂದಿನ ಜನಾಂಗಕ್ಕೆ ಪರಿಚಯಿಸುವ ಪ್ರಯತ್ನದಲ್ಲಿ ಸಾಗುತ್ತಿದೆ. ಇದನ್ನು ಪರಿಪೂರ್ಣಗೊಳಿಸುವಲ್ಲಿ ಎಲ್ಲರ ಸಹಯೋಗ ಅತ್ಯವಶ್ಯಕವಾಗಿದೆ. ಇಂದು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರ ಉಪಸ್ಥಿತಿಯನ್ನು ನೋಡಿ ತುಂಬಾ ಸಂತೋಷವಾಗಿದೆ. ನನ್ನನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಪುನರ್‌ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು. ತೋನ್ಸೆ ಬಿಲ್ಲವರು ಬಿಲ್ಲವರ ಅಸೋಸಿಯೇಶನ್ ಮತ್ತು ಸ್ಥಳೀಯ ಸಮಿತಿಯಲ್ಲಿ ಕಾರ್ಯಕರ್ತರಾಗಿ ದುಡಿಯುತ್ತಿದ್ದಾರೆ. ಇಂದು 11 ಮಂದಿಯನ್ನು ಗೌರವಿಸಲು ಅಭಿಮಾನವೆನಿಸುತ್ತದೆ. ಇಂದಿನ ಮಹಾಸಭೆಯಲ್ಲಿ ರಚಿಸಲ್ಪಟ್ಟ ಮಹಿಳಾ ಸಮಿತಿಯ ಸರ್ವರಿಗೂ ಅಭಿನಂದನೆಗಳು. ನಿಮ್ಮಿಂದ ಪ್ರಧಾನ ಸಮಿತಿಗೆ ಸಹಕಾರವಾಗಲಿದೆ ಎಂದರು.
ಗರೋಡಿ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷರಾದ ಡಿ. ಬಿ. ಅಮೀನ್, ಸಿ.ಕೆ.ಪೂಜಾರಿ, ವಿಶ್ವನಾಥ ತೋನ್ಸೆ, ಗೌರವ ಪ್ರಧಾನ ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ, ಗೌರವ ಪ್ರಧಾನ ಕೋಶಾಧಿಕಾರಿ ರವಿರಾಜ್ ಕಲ್ಯಾಣು³ರ್, ಜತೆ ಕೋಶಾಧಿಕಾರಿ ವಿಜಯ್ ಸನಿಲ್ ವೇದಿಕೆಯಲ್ಲಿ ಉಪಸ್ಥಿರಿತದ್ದರು. ಶ್ರೀ ಬ್ರಹ್ಮ ಬೈದರ್ಕಳರಿಗೆ ಹಾರಾರ್ಪಣೆಗೈದು ಪ್ರಾರ್ಥನೆ ನೆರವೇರಿಸಿ ಮಹಾಸಭೆಗೆ ಚಾಲನೆ ನೀಡಿದರು.
ಡಿ. ಬಿ. ಅಮೀನ್ ಸ್ವಾಗತಿಸಿದರು. ವಿಜಯ್ ಪಾಲನ್ ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿದರು. ರವಿರಾಜ್ ಕಲ್ಯಾಣು³ರ ವಾರ್ಷಿಕ ಲೆಕ್ಕಪತ್ರಗಳ ಮಾಹಿತಿ ನೀಡಿದರು. 2021-24ರ ಸಾಲಿಗೆ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ನಿತ್ಯಾನಂದ ಡಿ. ಕೋಟ್ಯಾನ್ ಸರ್ವಾನುಮತದಿಂದ ಪುನಃರಾಯ್ಕೆಗೊಂಡರು.
ಗರೋಡಿ ಸೇವಾ ಟ್ರಸ್ಟ್‌ನ ಸದಸ್ಯರಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮತ್ತು ಅಸೋಸಿಯೇಶನ್‌ನ ಸ್ಥಳೀಯ ಸಮಿತಿಗಳ ಪದಾಧಿಕಾರಿಗಳಾಗಿ ಆಯ್ಕೆಯಾದ ಕೇಂದ್ರ ಕಚೇರಿಯ ವಿಶ್ವನಾಥ ತೋನ್ಸೆ, ಸಚಿನ್ ಪೂಜಾರಿ, ಮಹಿಳಾ ವಿಭಾಗದ ಮೀರಾ ಡಿ. ಅಮೀನ್, ಮುಲುಂಡ್ ಕಚೇರಿಯ ರವಿ ಕೋಟ್ಯಾನ್, ಜೋಗೇಶ್ವರಿ ಕಚೇರಿಯ ಮೃದುಲಾ ಪೂಜಾರಿ, ಡೊಂಬಿವಲಿ ಕಚೇರಿಯ ಸುಲೋಚನಾ ಆರ್.ಪೂಜಾರಿ, ಗೋರೆಗಾಂವ್ ಕಚೇರಿಯ ವಿಜಯ್ ಪಾಲನ್, ಘಾಟ್ಕೊàಪರ್ ಕಚೇರಿಯ ಉದಯ ಪೂಜಾರಿ ಹಾಗೂ ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಇದರ 2021ನೇ ಸಾಲಿನ ಪ್ರತಿಭಾ ಪುರಸ್ಕಾರಗಳನ್ನು ಕು| ದಿಶಾ ಉದಯ್ ಪೂಜಾರಿ, ಶ್ರೇಯಾ ಡಿ.ಮಂಜ್ರೆàಕರ್ ಮತ್ತು ಸುಗಮ್ ಕೆ. ಪೂಜಾರಿ ಪರವಾಗಿ ರವಿ ಎಸ್. ಪೂಜಾರಿ ಹಾಗೂ ವಾರ್ಷಿಕ ವಿದ್ಯಾರ್ಥಿ ವೇತನವನ್ನು ಪದಾಧಿಕಾರಿಗಳು ಪ್ರದಾನಿಸಿದರು.
ಕಾರ್ಯಕಾರಿ ಸಮಿತಿ ಸದಸ್ಯರಾದ ರೂಪ್‌ಕುಮಾರ್ ಕಲ್ಯಾಣು³ರ, ಉದಯ ಎನ್. ಪೂಜಾರಿ, ಸಲಹಾಗಾರರಾದ ಶಂಕರ್ ಸುವರ್ಣ, ವಿ. ಸಿ. ಪೂಜಾರಿ, ಸೇರಿದಂತೆ ಸದಸ್ಯರು ಸಭೆಯಲ್ಲಿ ಹಾಜರಿದ್ದರು. ಸುರೇಶ್ ಕೋಟ್ಯಾನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸೇವಾ ಟ್ರಸ್ಟ್‌ನ ಸೇವಾ ವೈಖರಿಯನ್ನು ಪ್ರಶಂಸಿಸಿ ಗರೋಡಿಯ ಉನ್ನತಿಗಾಗಿ ಸಲಹೆ ನೀಡಿದರು. ಲಕ್ಷ್ಮೀ ಡಿ. ಅಂಚನ್, ಕಸ್ತೂರಿ ಆರ್. ಕಲ್ಯಾಣು³ರ ಮತ್ತು ಭಾರತಿ ಸುವರ್ಣ ಪ್ರಾರ್ಥನೆಗೈದರು. ವಿಶ್ವನಾಥ ತೋನ್ಸೆ ವಿದ್ಯಾರ್ಥಿ ವೇತನದ ಬಗ್ಗೆ ಪ್ರಸ್ತಾ¤ವಿಸಿದರು. ಸಂಜೀವ ಪೂಜಾರಿ ತೋನ್ಸೆ ಸೇವಾ ಟ್ರಸ್ಟ್‌ನ ವಾರ್ಷಿಕ ಚಟುವಟಿಗಳ ಮಾಹಿತಿ ನೀಡಿ ಕೃತಜ್ಞತೆ ಸಲ್ಲಿಸಿದರು.
ಚಿತ್ರ – ವರದಿ: ರೋನ್ಸ್ ಬಂಟ್ವಾಳ್