Advertisement

ಪರಮಾತ್ಮನ ಪಾದ ಸೇರಿದ ಬೆಟ್ಟದ ಹೂವು

11:28 AM Oct 31, 2021 | Team Udayavani |

ದೇವನಹಳ್ಳಿ: ಬೆಟ್ಟದಹೂವು ಸಿನಿಮಾದಲ್ಲಿನ ನಟನೆಗಾಗಿ ರಾಷ್ಟ್ರಪ್ರಶಸ್ತಿ ಪಡೆದು ತನ್ನದೇ ಆದ ಕೋಟ್ಯಂತರ ಅಭಿಮಾನಿಗಳನ್ನು ರೂಪಿಸಿಕೊಳ್ಳುವುದರ ಜತೆಗೆ ಸಮಾಜ ಸೇವೆಯಲ್ಲೂ ತನ್ನನ್ನು ತೊಡಗಿಸಿ ಕೊಂಡಿದ್ದ ನಮ್ಮೆಲ್ಲರ ಪ್ರೀತಿಯ ಪುನೀತ್‌ ರಾಜ್‌ ಕುಮಾರ್‌ ಇನ್ನಿಲ್ಲವೆಂಬುದು ಆಘಾತ ಸುದ್ದಿ ಆಗಿದೆ ಎಂದು ಶಾಸಕ ಎಲ್‌.ಎನ್‌.ನಾರಾಯಣಸ್ವಾಮಿ ತಿಳಿಸಿದರು.

Advertisement

ಪಟ್ಟಣದ ಪ್ರವಾಸಿಮಂದಿರದಲ್ಲಿ ತಾಲೂಕು ಜೆಡಿಎಸ್‌ನಿಂದ ನಟ ಪುನೀತ್‌ ರಾಜ್‌ ಕುಮಾರ್‌ ನಿಧನಕ್ಕೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡ ಚಿತ್ರರಂಗದ ಚಕ್ರವರ್ತಿಯಾಗಿದ್ದ ಪುನೀತ್‌ ರಾಜ್‌ ಕುಮಾರ್‌ ನಿಧನದಿಂದ ಕೇವಲ ಕನ್ನಡ ಚಿತ್ರರಂಗವಲ್ಲ. ಇಡೀ ದಕ್ಷಿಣ ಭಾರತ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಪುನೀತ್‌ ರಾಜ್‌ಕುಮಾರ್‌ ಒಂದು ಅದ್ಬುತ ಶಕ್ತಿ.

ಚಿಕ್ಕ ವಯಸ್ಸಿಗೆ ಸಾವು ನ್ಯಾಯವಲ್ಲ. ಇದೊಂದು ದುರಂತ. ಚಿತ್ರರಂಗಕ್ಕೆ ಸಾಕಷ್ಟು ನಿರೀಕ್ಷೆಯಿತ್ತು ಎಂದರು. ಬೆಟ್ಟದ ಹೂವೊಂದು ಪರಮಾತ್ಮನ ಪಾದ ಸೇರಿತು. ಯುವರತ್ನ ನೀನೆ ವಿನಯದ ರಾಜಕುಮಾರ ಎಂದು ಹೇಳಿದಂತಾಗಿದೆ. ಅವರ ಅಗಲಿಕೆ ತೀವ್ರ ದುಃಖ ತರಿಸಿದೆ. ನಾಡು-ನುಡಿ ವಿಚಾರದಲ್ಲಿ ಮುಂದೆ ನುಗ್ಗುತ್ತಿದ್ದರು. ಅವರನ್ನು ಕಳೆದುಕೊಂಡು ನಾಡು ಅನಾಥವಾಗಿದೆ ಎಂದು ಕಂಬನಿ ಮಿಡಿದರು.

ಇದನ್ನೂ ಓದಿ:- ಹೃದಯಾಘಾತ ಮತ್ತು ಹೃದಯ ಸ್ತಂಭನ ಇದರ ಬಗ್ಗೆ ಗೊತ್ತಿರಬೇಕಾದ ವಿಷಯ

ಚಿತ್ರರಂಗಕ್ಕೆ ದೊಡ್ಡ ನಷ್ಟ: ತಾಲೂಕು ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ ಮಾತನಾಡಿ, ಕನ್ನಡದ ಮನೆ ಪ್ರತಿಭೆ ದೊಡ್ಡಮನೆ ಕುಟುಂಬದ ಕುಡಿ. ಕನ್ನಡ ಚಿತ್ರರಂಗದ ಆಸ್ತಿಯಾಗಿದ್ದ ಕರ್ನಾಟಕದ ಎಲ್ಲ ಧರ್ಮ, ಸಮುದಾಯ ವರ್ಗಗಳ ಪ್ರೀತಿ ಸಂಪಾದಿಸಿದ ಪುನೀತ್‌ ಅವರ ಅಕಾಲಿಕ ಮರಣ ತುಂಬಲಾರದ ನಷ್ಟ. ಚಿತ್ರರಂಗಕ್ಕೆ ಆದ ದೊಡ್ಡ ನಷ್ಟ ಎಂದು ಹೇಳಿದರು.

Advertisement

ತಾಲೂಕು ಜೆಡಿಎಸ್‌ ಕಾರ್ಯಾಧ್ಯಕ್ಷ ಲಕ್ಷ್ಮಣ್‌, ಮುನಿರಾಜು, ಉಪಾಧ್ಯಕ್ಷ ವಿ.ಹನುಮಂತಪ್ಪ, ವಿಜಯಪುರ ಹೋಬಳಿ ಅಧ್ಯಕ್ಷ ವೀರಪ್ಪ, ಕುಂದಾಣ ಹೋಬಳಿ ಅಧ್ಯಕ್ಷ ಚಂದ್ರೇಗೌಡ, ಚನ್ನರಾಯಪಟ್ಟಣ ಹೋಬಳಿ ಅಧ್ಯಕ್ಷ ಮುನಿರಾಜು, ಕಸಬಾ ಹೋಬಳಿ ಅಧ್ಯಕ್ಷ ಚಿಕ್ಕನಾರಾಯಣಸ್ವಾಮಿ, ಪೀಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಮುನಿರಾಜು, ತಾಲೂಕು ಸೊಸೈಟಿ ಅಧ್ಯಕ್ಷ ನಾರಾಯಣಸ್ವಾಮಿ, ತಾಲೂಕು ಜೆಡಿಎಸ್‌ ಪ್ರಚಾರ ಸಮಿತಿ ಅಧ್ಯಕ್ಷ ನೆರಗನಹಳ್ಳಿ ಶ್ರೀನಿವಾಸ್‌, ತಾಲೂಕು ಎಸ್‌ಟಿ ಘಟಕದ ಅಧ್ಯಕ್ಷ ಯರ್ತಿಗಾನಹಳ್ಳಿ ಶಿವಣ್ಣ, ತಾಪಂ ಮಾಜಿ ಸದಸ್ಯರಾದ ಕಾರಹಳ್ಳಿ ಶ್ರೀನಿವಾಸ್‌, ಎಸ್‌.ಮಹೇಶ್‌, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ, ಟೌನ್‌ ಜೆಡಿಎಸ್‌ ಅಧ್ಯಕ್ಷ ಮುನಿನಂಜಪ್ಪ, ಪ್ರಧಾನ ಕಾರ್ಯದರ್ಶಿ ಸಾಯಿಕುಮಾರ್‌ ಬಾಬು, ತಾಲೂಕು ಯುವಜೆಡಿಎಸ್‌ ಅಧ್ಯಕ್ಷ ಆರ್‌. ಭರತ್‌ ಕುಮಾರ್‌, ಮುಖಂಡ ರಾಮಣ್ಣ, ವಿ.ಮುನಿರಾಜು, ಬೈರೇಗೌಡ, ಜಯರಾಮಯ್ಯ, ಭಾಸ್ಕರ್‌, ಕೇಶವಪ್ಪ, ಕ್ಯಾತೇಗೌಡ ಹಾಗೂ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next