Advertisement

ಶ್ರದ್ಧಾ ಪ್ರಕರಣ: ಸಾಕ್ಷ್ಯ ಪತ್ತೆಗಾಗಿ ಕೆರೆಯೇ ಬರಿದು: ಇಂದು ಆರೋಪಿ ಅಫ್ತಾಬ್‌ ಮಂಪರು ಪರೀಕ್ಷೆ

07:22 AM Nov 21, 2022 | Team Udayavani |

ಹೊಸದಿಲ್ಲಿ: ಶ್ರದ್ಧಾ ವಾಲ್ಕರ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತದೇಹದ ಉಳಿದ ಭಾಗಗಳ ಪತ್ತೆಗಾಗಿ ಪೊಲೀಸರು ಹೊಸದಿಲ್ಲಿಯ ಮೆಹೌಲಿ ಸಮೀಪದ ಮೈದಾನ್‌ ಗಹಿ ಕೆರೆಯಲ್ಲಿ ಹುಡುಕಾಟ ನಡೆಸಿದ್ದಾರೆ. ಅಲ್ಲದೇ ಇದಕ್ಕಾಗಿ ಕೆರೆಯ ನೀರನ್ನೇ ಬರಿದು ಮಾಡುತ್ತಿದ್ದಾರೆ. ಈ ಕೆರೆಯು ಆರೋಪಿ ಅಫ್ತಾಬ್‌ ಅಮಿನ್‌ ಪೂನಾವಾಲಾ ವಾಸವಿದ್ದ ಮನೆಯ ಸಮೀಪದಲ್ಲಿಯೇ ಇದೆ.

Advertisement

ತಲೆಬುರುಡೆ ಪತ್ತೆ: ಗುರುಗ್ರಾಮದಲ್ಲಿ ತಲೆ­ಬುರುಡೆಯ ಕೆಲವು ಭಾಗಗಳು ಪತ್ತೆಯಾಗಿವೆ. ಅಲ್ಲದೇ ದಿಲ್ಲಿಯ ಅರಣ್ಯ ಪ್ರದೇಶದಲ್ಲಿ ಪೊಲೀಸರ ತಂಡವು ರವಿವಾರವೂ ಹುಡುಕಾಟ ಮುಂದುವರಿ­ಸಿದ್ದು, ಅವರಿಗೆ ದೇಹದ ಕೆಲವು ಭಾಗಗಳು (ಮೂಳೆಗಳು) ದೊರೆತಿವೆ. ಇವು ಶ್ರದ್ಧಾಳದೇ ಎಂಬುದನ್ನು ಪತ್ತೆಹಚ್ಚಲು ಅವುಗಳನ್ನು ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಇನ್ನೊಂದೆಡೆ, ಮೆಹೌಲಿಯಲ್ಲಿರುವ ಆರೋಪಿ ಅಫ್ತಾಬ್‌ನ ಮನೆಯಿಂದ ಎರಡು ಪ್ಲಾಸ್ಟಿಕ್‌ ಬ್ಯಾಗ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೂವರ ಹೇಳಿಕೆ ದಾಖಲು: ಶ್ರದ್ಧಾಳಿಗೆ ಪರಿಚಯ ವಿದ್ದ ಮಹಾರಾಷ್ಟ್ರದ ಪಾಲ್ಗರ್‌ ಜಿಲ್ಲೆಯ ವಸಾಯಿ ನಗರದ ಮೂವರು ವ್ಯಕ್ತಿಗಳ ಹೇಳಿಕೆಗಳನ್ನು ದಿಲ್ಲಿ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈ ಮೂವರು ಶ್ರದ್ಧಾಳನ್ನು ಹತ್ತಿರದಿಂದ ಕಂಡವರಾಗಿದ್ದಾರೆ. ಶ್ರದ್ಧಾ ಪ್ರಕರಣ ಹಿನ್ನೆಲೆಯಲ್ಲಿ ಸಾಕ್ಷ್ಯಾಧಾರಗಳ ಸಂಗ್ರಹಕ್ಕಾಗಿ ದಿಲ್ಲಿ ಪೊಲೀಸರು ಮಹಾರಾಷ್ಟ್ರ, ಹರಿಯಾಣ ಮತ್ತು ಹಿಮಾಚಲ ಪ್ರದೇಶಕ್ಕೆ ತೆರಳಿದ್ದಾರೆ.

ಇಂದು ಮಂಪರು ಪರೀಕ್ಷೆ: ಹೊಸದಿಲ್ಲಿಯ ಡಾ| ಬಾಬಾ ಸಾಹೇಬ್‌ ಅಂಬೇಡ್ಕರ್‌ ಆಸ್ಪತ್ರೆಯಲ್ಲಿ ಸೋಮ ವಾರ ಆರೋಪಿ ಅಫ್ತಾಬ್‌ನ ಮಂಪರು ಪರೀಕ್ಷೆ ನಡೆಯಲಿದೆ. ದಿಲ್ಲಿ ನ್ಯಾಯಾಲಯವು ಮಂಗಳವಾರ ದವರೆಗೆ ಆರೋಪಿ ಅಫ್ತಾಬ್‌ನನ್ನು ಪೊಲೀಸರ ವಶಕ್ಕೆ ನೀಡಿದೆ.

ಮಾಲಕರ ವಿಚಾರಣೆ: ಈ ಹಿಂದೆ ಮಹಾರಾಷ್ಟ್ರದ ಪಾಲ್ಗರ್‌ ಜಿಲ್ಲೆಯ ವಸಾಯಿಯಲ್ಲಿ ಶ್ರದ್ಧಾ ಮತ್ತು ಅಫ್ತಾಬ್‌ ವಾಸವಿದ್ದರು. ಈ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀ ಸರು ರವಿವಾರ ಮನೆ ಮಾಲಕರ ವಿಚಾರಣೆ ನಡೆಸಿ ದ್ದಾರೆ. “ಇಬ್ಬರು ಮದುವೆಯಾಗಿದ್ದಾಗಿ ಹೇಳಿ ತಮ್ಮ ಬಾಡಿಗೆ ಮನೆಯಲ್ಲಿ 10 ತಿಂಗಳು ವಾಸವಿದ್ದರು,’ ಎಂದು ಮನೆ ಮಾಲಕರು ಹೇಳಿಕೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next