Advertisement

IPL; ಶೆಫರ್ಡ್ 10 ಎಸೆತದಲ್ಲಿ 39 ರನ್: ಡೆಲ್ಲಿ ಗೆಲುವಿಗೆ 235 ರನ್ ಗುರಿ ಮುಂದಿಟ್ಟ ಮುಂಬೈ

05:31 PM Apr 07, 2024 | Team Udayavani |

ಮುಂಬೈ: ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ರವಿವಾರ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟ್ಸ್ ಮ್ಯಾನ್ ಗಳು ಅಬ್ಬರಿಸಿದ್ದು ಡೆಲ್ಲಿಗೆ ಗೆಲುವಿಗೆ 235 ರನ್ ಗುರಿ ಮುಂದಿಟ್ಟಿದ್ದಾರೆ.

Advertisement

ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ರೋಹಿತ್ ಶರ್ಮ 49(27 ಎಸೆತ), ಇಶಾನ್ ಕಿಶನ್ 42(23 ಎಸೆತ) ಉತ್ತಮ ಆರಂಭ ಒದಗಿಸಿ ಔಟಾದರು. ತಂಡ ಸೇರಿಕೊಂಡ ಸೂರ್ಯಕುಮಾರ್ ಯಾದವ್ ಶೂನ್ಯಕ್ಕೆ ನಿರ್ಗಮಿಸಿದರು. ನಾಯಕ ಹಾರ್ದಿಕ್ ಪಾಂಡ್ಯ 39(33 ಎಸೆತ) ಗಳಿಸಿ ಔಟಾದರು. ತಿಲಕ್ ವರ್ಮ 6, ಟಿಮ್ ಡೇವಿಡ್ ಔಟಾಗದೆ 45(21ಎಸೆತ) ಮತ್ತು ರೊಮಾರಿಯೋ ಶೆಫರ್ಡ್ ಕೇವಲ10 ಎಸೆತದಲ್ಲಿ 39 ರನ್ ಚಚ್ಚಿದರು.ಅವರು 3 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿದರು. ನೋರ್ಟ್ಜೆ ಎಸೆದ ಕೊನೆಯ ಓವರ್ ನಲ್ಲಿ 4 ಸಿಕ್ಸರ್ ಮತ್ತು ಎರಡು ಬೌಂಡರಿ ಚಚ್ಚಿದರು.

Advertisement

Udayavani is now on Telegram. Click here to join our channel and stay updated with the latest news.

Next