Advertisement
ನ. 1ರಂದು ಬಿಲ್ಲವರ ಅಸೋಸಿಯೇಶನ್ ಬೊರಿವಲಿ-ದಹಿಸರ್ ಸ್ಥಳೀಯ ಸಮಿತಿಯ ಗುರುಸನ್ನಿಧಿ ಆರ್. ಎಸ್. ಸಿ 3 ಬೆಸ್ಟ್ ಕ್ವಾಟ್ರìಸ್ ಸಮೀಪದ ಶಿಂಪೋಲಿ ರೋಡ್ ಗೋರೈ ಬೊರಿವಲಿ ಪಶ್ಚಿಮ ಇಲ್ಲಿ ಬಿಲ್ಲವರ ಅಸೋಸಿಯೇಶನ್ ಮಾಜಿ ಅಜೀವ ಗೌರವಾಧ್ಯಕ್ಷ ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಭಾರತ್ ಕೋ. ಆಪರೇಟಿವ್ ಬ್ಯಾಂಕಿನ ನಿಕಟಪೂರ್ವ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣರ ಶ್ರದ್ಧಾಂಜಲಿ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕವಾಗಿ ಸಮಾಜವನ್ನು ಬೆಳೆಸಿ ಅದಕ್ಕೊಂದು ಹೊಸ ಚೈತನ್ಯ ನೀಡಿದ ಮಹಾನ್ ವ್ಯಕ್ತಿ ಅವರು ಸಮಾಜವನ್ನು ಬೆಳೆಸಿದ ದೂರದೃಷ್ಟಿ ಚಿಂತನೆಯನ್ನು ಮುನ್ನಡೆಸುವುದು ಭವಿಷ್ಯದಲ್ಲಿ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
Related Articles
Advertisement
ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಪ್ರತಿನಿಧಿಗಳು ಜಯ ಸಿ. ಸುವರ್ಣರ ಭಾವಚಿತ್ರಕ್ಕೆ ಪುಷ್ಪವೃಷ್ಟಿಗೈದು, ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಗೌರವ ಕಾರ್ಯದರ್ಶಿ ಕೃಷ್ಣರಾಜ್ ಸುವರ್ಣ ಜಯ ಸಿ. ಸುವರ್ಣರ ಸಾಧನೆಯನ್ನು ಗುಣಗಾನ ಮಾಡಿ ಪುಷ್ಪಾಂಜಲಿ ಅರ್ಪಿಸಿದರು. ಸ್ಥಳೀಯ ಸಮಿತಿಯ ಉಪ ಕಾರ್ಯಾಧ್ಯಕ್ಷ ರಜಿತ್ ಎಲ್. ಸುವರ್ಣ, ಭಾರತ್ ಬ್ಯಾಂಕಿನ ನಿರ್ದೇಶಕ ಪ್ರೇಮನಾಥ್ ಎ. ಕೋಟ್ಯಾನ್, ಧನಂಜಯ ಕೋಟ್ಯಾನ್, ಜತೆ ಕಾರ್ಯದರ್ಶಿ ವತ್ಸಲಾ ಪೂಜಾರಿ, ಎಂ. ಎಸ್. ಸಾಲ್ಯಾನ್, ಕೋಶಾಧಿಕಾರಿ ಅಶೋಕ್ ಸಾಲ್ಯಾನ್, ಜತೆ ಕೋಶಾಧಿಕಾರಿ ಉಮೇಶ್ ಜಿ. ಕೋಟ್ಯಾನ್, ಜಯರಾಮ ಪೂಜಾರಿ, ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ಸದಸ್ಯೆಯರು, ಯುವ ಸದಸ್ಯರು ಜಯ ಸುವರ್ಣರ ಅಭಿಮಾನಿಗಳು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಮಾತಾಪಿತರು ಇಟ್ಟ ಜಯ ಹೆಸರಿಗೆ ತಕ್ಕಂತೆ ಜಯದ ಹಾದಿಯಲ್ಲಿ ಸಾಗಿದ ಅವರು ಹೆಸರಿಗಿಂತಲೂ ಬಹುದೊಡ್ಡ ಸಾಧಕರೆನಿಸಿ¨ªಾರೆ. ತನ್ನ ಸುವರ್ಣ ಯುಗದಲ್ಲಿ ಭಾರತ್ ಬ್ಯಾಂಕ್ ಹಣಕಾಸು ಸಂಸ್ಥೆಗೆ ಹೊಸ ರೂಪ ಚೈತನ್ಯ ನೀಡಿ ನಿರುದ್ಯೋಗಿಗಳಿಗೆ ಉದ್ಯೋಗ ಹಾಗೂ ಉದ್ಯಮ ಬಯಸುವವರಿಗೆ ಹಣಕಾಸು ನೆರವು ನೀಡುವ ಮೂಲಕ ಸುವರ್ಣರು ಬಹುದೊಡ್ಡ ಸಾಧನೆಗೈದಿದ್ದಾರೆ. ತನ್ನ ಧರ್ಮವನ್ನು ಕಾಪಾಡುವುದರ ಜತೆಗೆ ಬದುಕಿನಲ್ಲಿ ಸಾಧನೆ ಮುಖ್ಯ ಎಂಬುದನ್ನು ತೋರಿಸಿಕೊಟ್ಟವರು. -ಪ್ರಕಾಶ್ ಶೆಟ್ಟಿ ಪೇಟೆಮನೆ, ಗೌರವ ಕಾರ್ಯದರ್ಶಿ, ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕ
ಚಿತ್ರ-ವರದಿ: ರಮೇಶ್ ಉದ್ಯಾವರ.