Advertisement

ಪೊಲೀಸ್‌ ಭದ್ರತೆಯಲ್ಲಿಕಾಲಾ ಪ್ರದರ್ಶನ

03:14 PM Jun 08, 2018 | Team Udayavani |

ಬಳ್ಳಾರಿ: ಬಹುಭಾಷಾ ನಟ ರಜನಿಕಾಂತ್‌ ಅವರ ಬಹುನಿರೀಕ್ಷಿತ “ಕಾಲ’ ಚಲನಚಿತ್ರ ಪೊಲೀಸರ ಬಿಗಿ ಭದ್ರತೆ ನಡುವೆ ನಗರದಲ್ಲಿ ಗುರುವಾರ ಪ್ರದರ್ಶನ ಕಂಡಿದೆ. ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳನ್ನು ಪೊಲೀಸರು ಬಂಧಿಸಿ, ಬಿಡುಗಡೆಗೊಳಿಸಿದರು.

Advertisement

ಖ್ಯಾತ ಚಿತ್ರನಟ ರಜನಿಕಾಂತ್‌ ಅಭಿನಯದ “ಕಾಲಾ’ ಚಲನಚಿತ್ರ ಪ್ರದರ್ಶನಕ್ಕೆ ನಗರದ ರಾಧಿಕಾ ಚಿತ್ರಮಂದಿರದಲ್ಲಿ
ಸಿದ್ಧತೆ ನಡೆದಿತ್ತು. ಆದರೆ ಚಿತ್ರ ಪ್ರದರ್ಶನಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಶೆಟ್ಟಿ ಬಣ) ಮತ್ತು ಕರ್ನಾಟಕ ಜನಸೈನ್ಯ ಕಾರ್ಯಕರ್ತರು ಚಿತ್ರಮಂದಿರದ ಮುಂಭಾಗದಲ್ಲಿ ಕೆಲಹೊತ್ತು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಚಿತ್ರಮಂದಿರ ಮಾಲೀಕರು ಮತ್ತು ಕನ್ನಡಪರ ಸಂಘಟನೆಗಳ ಕಾರ್ಯಕರ್ತರ ನಡುವೆ ಕೆಲಕಾಲ
ವಾಗ್ವಾದವೂ ನಡೆಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನೆ ನಡೆಸುತ್ತಿದ್ದ 30ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಳಿಕ ಬಿಡುಗಡೆಗೊಳಿಸಿದರು.

ಈ ನಡುವೆ ಚಿತ್ರ ವೀಕ್ಷಣೆಗೆ ಆಗಮಿಸಿದ್ದ ರಜನಿಕಾಂತ್‌ ಅಭಿಮಾನಿಗಳು ಟಿಕೆಟ್‌ಗಾಗಿ ಸಾಲುಗಟ್ಟಿ ನಿಂತಿದ್ದರು. ಸಿನಿಮಾ ಪ್ರಿಯರನ್ನು ಪೊಲೀಸರು ಭದ್ರತೆಯಲ್ಲಿ ಒಳಗೆ ಬಿಟ್ಟರು. ವಿರೋಧದ ನಡುವೆಯೂ ಕಾಲಾ ಚಲನಚಿತ್ರ ಪ್ರದರ್ಶನ ನಡೆಯಿತು. ಚಿತ್ರಮಂದಿರದ ಬಳಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು .

Advertisement

Udayavani is now on Telegram. Click here to join our channel and stay updated with the latest news.

Next