ಬೆಂಗಳೂರು: ಆರೋಗ್ಯ ಇಲಾಖೆಯ ಶೀಘ್ರಲೀಪಿಗಾರ ಮಹಿಳಾ ಸಿಬ್ಬಂದಿಯೊಬ್ಬರ ನಗ್ನ ಮತ್ತು ಅರೆನಗ್ನ ಚಿತ್ರಗಳ ತೋರಿಸಿ ಬ್ಲ್ಯಾಕ್‌ವೆುಲ್ ಮಾಡುತ್ತಿದ್ದ ಅರಣ್ಯ ಇಲಾಖೆಯ ಡಿ ದರ್ಜೆಯ ನೌಕರರ ಸೇರಿದಂತೆ ಇಬ್ಬರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಾಗಿದೆ. ಅರಣ್ಯ ಇಲಾಖೆಯ ಡಿ ಗ್ರೂಪ್ ನೌಕರ ಪಿ.ಕೃಷ್ಣ (52) ಮತ್ತು ಗುತ್ತಿಗೆ ನೌಕರರಾದ ಸುಮಲತಾ ದೇವನ್(27) ವಿರುದ್ಧ ಮಹಿಳೆ ದೂರು ನೀಡಿದ್ದಾರೆ.
ಆರೋಪಿ ಕೃಷ್ಣ, ಸುಮಲತಾಳ ಮೂಲಕ ದೂರುದಾರ ಮಹಿಳೆಯ ನಗ್ನ ಚಿತ್ರಗಳನ್ನು ಪಡೆದು ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಒತ್ತಾಯಿಸುತ್ತಿದ್ದ. ಇದಕ್ಕೆ ನಿರಾಕರಿಸಿದಕ್ಕೆ ಪ್ರಾಣ ಬೆದರಿಕೆಯೊಡ್ಡಿದ್ದಾನೆ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಉಲ್ಲೇಖೀಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗ್ನ ಚಿತ್ರ ಸಿಕ್ಕಿದ್ದು ಹೇಗೆ?: ಬಹುಮಹಡಿ ಕಟ್ಟಡದಲ್ಲಿ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿರುವ ಸುಮಲತಾ ಹಾಗೂ ಸಂತ್ರಸ್ತೆ ಈ ಮೊದಲು ಒಂದೇ ವಸತಿ ನಿಲಯದಲ್ಲಿ ನೆಲೆಸಿದ್ದರು. ಇದನ್ನು ದುರುಪಯೋಗ ಪಡಿಸಿಕೊಂಡ ಆರೋಪಿ, ಸುಮಲತಾಳಿಗೆ ಆಮಿಷವೊಡ್ಡಿ ಸಂತ್ರಸ್ತೆಯ ನಗ್ನ ಹಾಗೂ ಅರೆನಗ್ನ ಚಿತ್ರಗಳನ್ನು ತೆಗೆಸಿದ್ದಾನೆ. ಬಳಿಕ ಅದನ್ನು ತನ್ನ ಮೊಬೈಲ್‌ಗೆ ರವಾನಿಸಿಕೊಂಡು ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದಾಗಿ ಸಂತ್ರಸ್ತೆಗೆ ಬ್ಲ್ಯಾಕ್‌ವೆುಲ್ ಮಾಡುತ್ತಿದ್ದ.
ಇದೇ ರೀತಿ 2013ರಿಂದ ನಿರಂತವಾಗಿ ಬೆದರಿಕೆಯೊಡುತ್ತಿದ್ದು. ಈ ನಡುವೆ ಮದುವೆಯಾಗುವಂತೆ ಪೀಡಿಸುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಸ್ನೇಹಿತರ ಜತೆ ಲೈಂಗಿಕಕ್ರಿಯೆಗೆ ಸಹಕರಿಸುವಂತೆ ಒತ್ತಾಯಿಸುತ್ತಿದ್ದ. ಇದಕ್ಕೆ ನಿರಾಕರಿಸಿದ ಸಂತ್ರಸ್ತೆಗೆ ಬೆದರಿಕೆಯೊಡ್ಡಿ 4,76 ಲಕ್ಷ ಹಣ ಹಾಗೂ 35 ಗ್ರಾಂ ತೂಕದ ಮಾಂಗಲ್ಯ ಸರವನ್ನು ಪಡೆದುಕೊಂಡಿದ್ದಾನೆ. ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ, ಕುಟುಂಬ ಸದಸ್ಯರನ್ನು ಹತ್ಯೆಗೈಯುತ್ತೇನೆ.
ಇತರೆ ಸಿಬ್ಬಂದಿಗೆ ಅಶ್ಲೀಲ ಫೋಟೋಗಳನ್ನು ತೋರಿಸುತ್ತೇನೆಂದು ಬ್ಲ್ಯಾಕ್‌ವೆುಲ್ ಮಾಡುತ್ತಿದ್ದ. ಜತೆಗೆ ಕಚೇರಿ ಬಳಿ ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಮಾನಸಿಕ ಕಿರುಕುಳು ನೀಡುತ್ತಿದ್ದಾನೆ ಎಂದು ಸಂತ್ರಸ್ತೆ ದೂರು ನೀಡಿದ್ದರು. ಈ ಸಂಬಂಧ ಆರೋಪಿ ಕೃಷ್ಣನನ್ನು ಪೊಲೀಸರು ಬಂಸಿದ್ದು, ಇದೀಗ ಜಾಮೀನು ಪಡೆದು ಬಿಡುಗಡೆಯಾಗಿದ್ದಾನೆ. ಮತ್ತೂಂದೆಡೆ ನಾಪತ್ತೆಯಾಗಿರುವ ಸುಮಲತಾ ದೇವನ್‌ಗೆ ಹುಡುಕಾಟ ನಡೆಯುತ್ತಿದೆ ಪೊಲೀಸರು ತಿಳಿಸಿದ್ದಾರೆ.