Advertisement
ವಿವಾದದ ಹಿನ್ನೆಲೆಯಲ್ಲಿ ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಪದಾಧಿಕಾರಿಗಳ ಸಭೆ ನಡೆಸಿದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಾಯಿಗೆ ಬಂದಂತೆ ಹೇಳಿಕೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
Related Articles
Advertisement
ಆಮೇಲೆ ಅದರ ಬಗ್ಗೆ ಕೇಳಿ ಎನ್ನುವ ಮೂಲಕ ವಿವಾದಿತ ಹೇಳಿಕೆ ನೀಡುವವರಿಗೆ ಎಚ್ಚರಿಕೆ ನೀಡಿದರು.
ಕಾರ್ಯಕರ್ತರ ಸಭೆ ಶಾಸಕರ ಮನೆಯಲ್ಲಿಲ್ಲಸಚಿವರ ಸಹಿತ ಪಕ್ಷದ ಶಾಸಕರು ತಮ್ಮ ಮನೆಗಳಲ್ಲಿ ಕಾರ್ಯಕರ್ತರ ಸಭೆಗಳನ್ನು ನಡೆಸುವಂತಿಲ್ಲ. ಬೇಕಿದ್ದರೆ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲಿ. ಆದರೆ ಕಾರ್ಯಕರ್ತರ ಸಭೆಗಳನ್ನು ಮಾತ್ರ ಕಡ್ಡಾಯವಾಗಿ ಪಕ್ಷದ ಕಚೇರಿಗಳಲ್ಲಿ ಮಾಡಬೇಕು. ಒಂದು ವೇಳೆ ಪಕ್ಷದ ಸಭಾಂಗಣ ಸಾಲದಿದ್ದರೆ ಸಮುದಾಯ ಭವನ ಬಾಡಿಗೆ ತೆಗೆದುಕೊಂಡು ಅಲ್ಲಿ ಸಭೆಗಳನ್ನು ನಡೆಸಲಿ. ಈ ಸಂಬಂಧ ಪದಾಧಿಕಾರಿಗಳ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು. ಇದಕ್ಕೂ ಮುನ್ನ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಶಿವಕುಮಾರ್, ಸಿಎಂ-ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವದಂತಿಗೆಲ್ಲ ಕಿವಿಗೊಡಬೇಡಿ. ಅದರಲ್ಲಿ ಯಾವುದೇ ಹುರುಳಿಲ್ಲ. ಪಕ್ಷ ಸಂಘಟನೆ ಕಡೆಗೆ ಲಕ್ಷ್ಯ ವಹಿಸಿ. ಮುಂಬರುವ ಚುನಾವಣೆಗಳಲ್ಲಿ ನಿರೀಕ್ಷಿತ ಗೆಲುವು ಸಾಧಿಸಬೇಕು ಎಂದು ಸೂಚಿಸಿದರು ಎನ್ನಲಾಗಿದೆ. ನೀವು ಮೊದಲು ಓದಿದ್ದು ಇಲ್ಲೇ
ಕಾಂಗ್ರೆಸ್‌ನಲ್ಲಿ ಒಳಬೇಗುದಿ ಇರುವ ಹಿನ್ನೆಲೆಯಲ್ಲಿ ಸೋಮವಾರ ಕೆಪಿಸಿಸಿ ಸಭೆ ನಡೆಯಲಿದೆ ಎಂದು ಉದಯವಾಣಿ ನಿನ್ನೆಯೇ ವರದಿ ಮಾಡಿತ್ತು. ಸೋಲಿನ ಪರಾಮರ್ಶೆಗೆ ಸತ್ಯಶೋಧನ ಸಮಿತಿ: ಡಿಕೆಶಿ
ಬೆಂಗಳೂರು: ಲೋಕಸಭಾ ಚುನಾವ ಣೆಯ ಸೋಲಿನ ಪರಾಮರ್ಶೆಗೆ ಮುಂದಾಗಿ ರುವ ಕೆಪಿಸಿಸಿಯು ಈ ಸಂಬಂಧ ಹಿರಿಯ ನಾಯಕರನ್ನು ಒಳಗೊಂಡ ಸತ್ಯಶೋಧನ ಸಮಿತಿ ರಚಿಸಲು ನಿರ್ಧರಿಸಿದೆ. ಈಗಾಗಲೇ ಎಐಸಿಸಿಯು ಸಮಿತಿ ರಚಿಸಿದ್ದು, ಅದು ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ವರದಿ ಸಂಗ್ರಹಿಸುತ್ತಿದೆ. ಈ ವರದಿಯನ್ನು ಎಐಸಿಸಿ ಸಮಿತಿಗೆ ಸಲ್ಲಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ನಾನು ಯಾವುದೇ
ಕಾರಣಕ್ಕೂ ಸಿಎಂ, ಡಿಸಿಎಂ ಬದಲಾವಣೆ ಬಗ್ಗೆ ಬಹಿರಂಗ ಹೇಳಿಕೆಗಳಿಗೆ ಬೆಂಬಲ ನೀಡುವುದಿಲ್ಲ. ಪಕ್ಷದ ನಿಯಮ ಮೀರಿ ಸಿಎಂ, ಡಿಸಿಎಂ ಬದಲಾವಣೆ ಬಗ್ಗೆ ಮಾತನಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು.
-ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ