ಮುಂಬಯಿ: ಹಿಂದೂ ನಾಯಕ ವಿನಾಯಕ ದಾಮೋದರ್ ಸಾವರ್ಕರ್ ಅವರ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ, ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ನಾಲಿಗೆ ಹರಿಬಿಟ್ಟಿದ್ದಾರೆ. ಇನ್ನಾದರೂ ಅವರು ತಮ್ಮ ತಪ್ಪನ್ನು ಅರಿತು ಕ್ಷಮೆ ಯಾಚಿಸಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಮಹಾರಾಷ್ಟ್ರದ ನಾಗ್ಪುರದ ಶಂಕರನಗರದಲ್ಲಿ ನಡೆದ ಸಾವರ್ಕರ್ ಗೌರವ ಯಾತ್ರೆಯ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಗಡ್ಕರಿ ಮಾತನಾಡಿದರು.
ಈ ವೇಳೆ ರಾಹುಲ್ ಅವರನ್ನು ಟೀಕಿಸಿದ ಗಡ್ಕರಿ ಸಾವರ್ಕರ್ ಬಗ್ಗೆ ದೇಶದ ಯುವಜನತೆಗೆ ಮತ್ತಷ್ಟು ತಿಳಿಯುವಂತಾಗಿದ್ದು ನಿಮ್ಮಿಂದಲೇ, ಅದಕ್ಕಾಗಿ ಧನ್ಯವಾದ. ಇನ್ನಾದರೂ ಅವರ ಬಗ್ಗೆ ತಿಳಿದು ಕ್ಷಮೆಯಾಚಿಸಿ. ಸಾವರ್ಕರ್ ಅವರನ್ನು ನಿಂದಿಸುವ ಹಕ್ಕು ನಿಮಗೆ ಯಾರು ಕೊಟ್ಟರು. ಈ ನಿಂದನೆಯನ್ನು ಯಾರೂ ಸಹಿಸುವುದಿಲ್ಲ ಎಂದಿದ್ದಾರೆ.