Advertisement
ಸಂಜೆಯ ಹೊತ್ತಿಗೆ ಇನ್ನೊಂದು ಪತ್ರ ಕನ್ನಡದಲ್ಲೇ ಬಂತು. ಅದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಪತ್ರ. ಈ ಬಗ್ಗೆ ಸ್ಪಷ್ಟನೆ ನೀಡಿದ ಶೆಟ್ಟರ್, “ಅದು ನಕಲಿ ಪತ್ರ. ನಾನು ರಾಜೀನಾಮೆ ನೀಡಿಲ್ಲ’ ಎಂದು ಹೇಳಿದರಲ್ಲದೆ, ದಿಲ್ಲಿ ವರಿಷ್ಠರಿಗೆ ರಾಜೀನಾಮೆ ಪತ್ರ ಬರೆಯುವುದಾದರೆ ಕನ್ನಡದಲ್ಲಿ ಬರೆಯುತ್ತಾರೆಯೇ? ಇಂಗ್ಲಿಷ್‌ನಲ್ಲಿ ತಾನೇ? ಹಾಗಾಗಿಯೇ ಮೇಲ್ನೋಟಕ್ಕೆ ತಿಳಿಯುತ್ತದೆ ಇದು ಸುಳ್ಳೆಂದು ಸ್ಪಷ್ಟಪಡಿಸಿದರು. ಹಾಗಿದ್ದರೆ ಭಾಷೆ ಮೇಲೆ ಪತ್ರ ನಕಲಿಯೋ ಅಸಲಿಯೋ ಎಂದು ತಿಳಿಯುವುದು ಕಷ್ಟ ಎಂದಾಯಿತು. ಹೈಕಮಾಂಡ್‌ಗೆ ಪತ್ರ ಕನ್ನಡದಲ್ಲಿ ಇರಬೇಕೇ? ಇಂಗ್ಲಿಷ್‌ನಲ್ಲಿರಬೇಕೇ- ಕಡೆಗೂ ತಿಳಿಯಲಿಲ್ಲ! Advertisement
ಹೈಕಮಾಂಡ್‌ಗೆ ಪತ್ರ ಕನ್ನಡದಲ್ಲಿ ಇರಬೇಕೇ? ಇಂಗ್ಲಿಷ್‌ನಲ್ಲಿರಬೇಕೇ?
12:32 AM Apr 12, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.