ಮಲಗುವ ಮುನ್ನ ಈ ಆರೋಗ್ಯಕರ ಜ್ಯೂಸ್ ಕುಡಿಯುವುದರಿಂದ ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಡ್, ನಾರಿನಂಶ, ಖನಿಜಾಂಶ, ವಿಟಮಿನ್‌ಮೈ ಬೊಜ್ಜು ಕರಗಿಸುವಲ್ಲಿ ಸಹಕಾರಿಯಾಗುತ್ತದೆ. ಇದು ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗದಂತೆ ತಡೆಯುತ್ತದೆ.
Advertisement
ನಿಂಬೆ ಮತ್ತು ಸೌತೆಕಾಯಿ ಜ್ಯೂಸ್ ನಿಂಬೆರಸ ಬೊಜ್ಜು ಕರಗಿಸುವಲ್ಲಿ ಪರಿಣಾಮಕಾರಿ. ಮಲಗುವ ಮುನ್ನ ಸೌತೆಕಾಯಿ ಜ್ಯೂಸ್‌ಗೆ ನಿಂಬೆರಸ ಹಾಕಿ ಕುಡಿಯುವುದರಿಂದ ಬೊಜ್ಜನ್ನು ಕರಗಿಸಬಹುದು. ಈ ಜ್ಯೂಸ್ ಅನ್ನು ರುಚಿಕರವಾಗಿ ಮಾಡ ಬಯಸುವುದಾದರೆ ಸೌತೆಕಾಯಿ, ಕಿತ್ತಳೆ, ಸ್ವಲ್ಪ ನೀರು ಹಾಕಿ ಜ್ಯೂಸ್ ಮಾಡಿ ಅನಂತರ ಅದಕ್ಕೆ 1 ಚಮಚ ಜೇನುತುಪ್ಪ ಸೇರಿಸಿ ಕುಡಿಯಿರಿ.
ಸೌತೆಕಾಯಿ ಹಾಗೂ ಕೊತ್ತಂಬರಿ ಸೊಪ್ಪಿನ ಜ್ಯೂಸ್ ಕೂಡ ಹೊಟ್ಟೆಬೊಜ್ಜು ಕರಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಒಂದು ಸೌತೆಕಾಯಿ, ಒಂದು ಕಪ್ ಕೊತ್ತಂಬರಿ ಸೊಪ್ಪು, ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ಹಾಕಿ ರುಬ್ಬಿ, ನಂತರ ಸ್ವಲ್ಪ ನಿಂಬೆರಸ ಹಾಕಿ ಕುಡಿಯಿರಿ. ಇನ್ನು ಇದಕ್ಕೆ ಸ್ವಲ್ಪ ತುರಿದ ಶುಂಠಿ ಹಾಗೂ 1 ಚಮಚ ಲೋಳೆಸರ ಹಾಕಿ ಸ್ವಲ್ಪ ಹೊತ್ತು ಬಿಟ್ಟು ಕುಡಿಯಬಹುದು. ಅನಾನಸ್ ಜ್ಯೂಸ್
ಅನಾನಸ್ ಜ್ಯೂಸ್ ಬಾಯಿಗೂ ರುಚಿಕರ ಹೊಟ್ಟೆ ಬೊಜ್ಜು ಕರಗಿಸುವಲ್ಲಿಯೂ ಪರಿಣಾಮಕಾರಿ. ಅನಾನಸ್ ಜ್ಯೂಸ್ ಮಾಡಿ ಅದಕ್ಕೆ ಸ್ವಲ್ಪ ನಿಂಬೆರಸ ಸೇರಿಸಿ ಕುಡಿಯಬಹುದು.
Related Articles
ಈ ಜ್ಯೂಸ್‌ಗೆ ಉರಿಯೂತವನ್ನು ಕಡಿಮೆ ಮಾಡುವ ಹಾಗೂ ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಸುವ ಸಾಮರ್ಥ್ಯ ಇದೆ. ಮಲಗುವ ಮುನ್ನ ಈ ಜ್ಯೂಸ್ ಕುಡಿದು ಹೊಟ್ಟೆ ಬೊಜ್ಜು ಕಡಿಮೆ ಮಾಡಿಕೊಳ್ಳಿ.
Advertisement