ನವದೆಹಲಿ: ಕೇಂದ್ರೀಯ ವಿದ್ಯಾಲಯ ಸೇರಿದಂತೆ ಕೇಂದ್ರ ಸರ್ಕಾರದಡಿ ಕಾರ್ಯನಿರ್ವಹಿಸುತ್ತಿರುವ ನಾನಾ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿಯೊಬ್ಬ ಸಂಸದರು 10 ವಿದ್ಯಾರ್ಥಿಗಳನ್ನು “ಸಂಸದರ ಕೋಟಾ’ದ ಅಡಿಯಲ್ಲಿ ಶಿಫಾರಸಿನ ಮೂಲಕ ದಾಖಲು ಮಾಡಿಸಲು ಇರುವ ಸೌಲಭ್ಯವನ್ನು ಹಿಂಪಡೆಯುವ ಬಗ್ಗೆ ಎಲ್ಲಾ ಪಕ್ಷಗಳೊಂದಿಗೆ ಚರ್ಚಿಸುವಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸೂಚಿಸಿದ್ದಾರೆ.
ಸೋಮವಾರ ನಡೆದ ಲೋಕಸಭಾ ಕಲಾಪದ ವೇಳೆ, ಕಾಂಗ್ರೆಸ್ ಸಂಸದ ಮನೀಶ್ ತಿವಾರಿ, ಸಂಸದರ ಕೋಟಾದಡಿ ಶಿಫಾರಸು ಮಾಡುವಂತೆ ಹಲವಾರು ಪೋಷಕರು ನಮ್ಮ ಬಳಿಗೆ ಬರುತ್ತಾರೆ. ಪ್ರತಿಯೊಬ್ಬ ಸಂಸದರಿಗೆ 10 ಸೀಟುಗಳು. ಆದರೆ, ಅದಕ್ಕೆ ನೂರಾರು ಮಂದಿ ದುಂಬಾಲು ಬಿದ್ದಿರುತ್ತಾರೆ.
ಇದನ್ನೂ ಓದಿ:ಸೋತರೂ ಪುಷ್ಕರ್ ಸಿಂಗ್ ಧಾಮಿಗೆ ಉತ್ತರಾಖಂಡ ಸಿಎಂ ಪಟ್ಟ
ಹಾಗಾಗಿ, ಒಂದೋ, ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಸಂಸದರ ಕೋಟಾವನ್ನು ಹೆಚ್ಚಿಸಬೇಕು ಅಥವಾ ಈ ಪದ್ಧತಿಯನ್ನೇ ರದ್ದುಗೊಳಿಸಬೇಕು ಎಂದು ಕೋರಿದರು.
ಅದಕ್ಕೆ ಪ್ರತಿಯಾಗಿ ಸ್ಪೀಕರ್ ಮಾತನಾಡಿದ್ದು, ಕೋಟಾ ರದ್ದು ಮಾಡುವ ಬಗ್ಗೆ ಎಲ್ಲ ಪಕ್ಷಗಳ ನಾಯಕರೊಂದಿಗೆ ಚರ್ಚೆ ನಡೆಸಿ, ಕ್ರಮ ತೆಗೆದುಕೊಳ್ಳಲು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ರವರಿಗೆ ಸೂಚಿಸಿದರು.