Advertisement

ದಿನ ಬೆಳಗಾದರೆ ಸಿದ್ದು ಮನೆ ಬಾಗಿಲಲ್ಲಿ ಕುಳಿತುಕೊಳ್ಳಬೇಕಾ?

02:35 PM May 21, 2022 | Team Udayavani |

ಚಿತ್ರದುರ್ಗ: ದಿನ ಬೆಳಗಾದರೆ ಸಿದ್ದರಾಮಯ್ಯನ ಮನೆ ಬಾಗಿಲಲ್ಲಿ ಕುಳಿತುಕೊಳ್ಳಬೇಕಾ? ನಮಗೂ ಜವಾಬ್ದಾರಿಯಿದೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಒಬ್ಬರೇ ಭಾರೀ ಜವಾಬ್ದಾರಿಯಿಂದ ಕೆಲಸ ಮಾಡಿದ್ದಾರಾ, ಅವರು ಹೇಳಿದ್ದಕ್ಕೆಲ್ಲಾ ಉತ್ತರ ಕೊಡಲು ಆಗುವುದಿಲ್ಲ. ದಾವಣಗೆರೆಯಲ್ಲಿ ಒಂದೂವರೆ ಸಾವಿರ ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಅಲ್ಲಿಗೆ ಪರಿಶೀಲನೆಗಾಗಿ ಹೋಗುತ್ತಿದ್ದೇವೆ. ಎಲ್ಲ ಸಚಿವರು ಕೆಲಸ ಮಾಡುತ್ತಿದ್ದಾರೆ. ಕೋಮು ಸಂಘಟನೆಗಳನ್ನು ನಿಷೇಧಿಸಬೇಕು ಎನ್ನುವ ಎಂ.ಬಿ. ಪಾಟೀಲ್‌, ಮೊದಲು ಮುಸ್ಲಿಂ ಸಂಘಟನೆಗಳನ್ನೆಲ್ಲಾ ಬ್ಯಾನ್‌ ಮಾಡಲಿ, ಅವರಿದ್ದಾಗ ಬ್ಯಾನ್‌ ಮಾಡಿದ್ರಾ? ಕಾಮಾಲೆ ಕಣ್ಣಿನವರಿಗೆ ಜಗತ್ತೆಲ್ಲಾ ಹಳದಿಯಾಗಿಯೇ ಕಾಣುತ್ತದೆ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರಿಗೆ ಎಲ್ಲವೂ ಹಳದಿಯಾಗಿ ಕಾಣುತ್ತದೆ. ಕಾಂಗ್ರೆಸ್‌, ಜೆಡಿಎಸ್‌ಗೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಹಾಗಾಗಿ ಮಾಧ್ಯಮಗಳ ಮುಂದೆ ಟೀಕೆ ಮಾಡುತ್ತಾರೆ ಎಂದರು.

ರಾಜ್ಯದಲ್ಲಿ ಎಲ್ಲಿಯೂ ರಸಗೊಬ್ಬರದ ಸಮಸ್ಯೆ ಇಲ್ಲ. 11,18,519 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರ ಸಂಗ್ರಹ ಇದೆ. ಏ.1ಕ್ಕೆ ಆರಂಭಿಕ ಶಿಲ್ಕು 5,94,773 ಲಕ್ಷ ಮೆಟ್ರಿಕ್‌ ಟನ್‌ ಇತ್ತು. ನಂತರ 5,23,746 ಲಕ್ಷ ಮೆಟ್ರಿಕ್‌ ಟನ್‌ ಗೊಬ್ಬರ ಬಂದಿದೆ. ಎಲ್ಲಿಯೂ ಕೊರತೆ ಇಲ್ಲ ಎಂದರು.

ಅಕಾಲಿಕ ಮಳೆಯಿಂದಾಗಿ ನಷ್ಟವಾಗಿರುವುದು ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ. ಮುಂಗಾರು ಆರಂಭವಾಗಿರುವುದರಿಂದ ಬೀಜ, ಗೊಬ್ಬರದ ಅಭಾವ ಆಗದಂತೆ ಮುಂಜಾಗ್ರತೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾರಾದರೂ ಅಕ್ರಮವಾಗಿ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸಿದರೆ ಕಠಿಣ ಕ್ರಮ ಜರುಗಿಸಲು ಸೂಚನೆ ನೀಡಲಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳು 240 ಹೆಕ್ಟೇರ್‌, 40 ಹೆಕ್ಟೇರ್‌ ಖುಷ್ಕಿ ಬೆಳೆಗಳು ನಷ್ಟವಾಗಿವೆ. ಒಟ್ಟಾರೆ 37 ಲಕ್ಷ ರೂ. ಹಾನಿ ಸಂಭವಿಸಿದ್ದು, ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next