Advertisement

ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಬೇಕೋ ಬೇಡವೋ ಎಂದು ಜನತೆ ನಿರ್ಧರಿಸಲಿ: ತ್ರಿಪುರಾ ಸಿಎಂ

04:34 PM Dec 09, 2020 | sudhir |

ಅಗರ್ತಲಾ: ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್‌ ಕುಮಾರ್‌ ದೇಬ್‌ ವಿರುದ್ಧ ಆಡಳಿತಾರೂಡ ಬಿಜೆಪಿಯ ಕೆಲವು ಮುಖಂಡರು ಆಕ್ಷೇಪ ಮಾಡಲಾರಂಭಿಸಿದ್ದಾರೆ. ಅವರು ಮುಖ್ಯಮಂತ್ರಿ ಸ್ಥಾನದಿಂದ ಇಳಿಯಬೇಕು ಎಂಬ ವಾದವನ್ನು ಮುಂದಿಟ್ಟಿದ್ದಾರೆ.

Advertisement

ಇತ್ತೀಚೆಗೆ ಬಿಜೆಪಿಯ ಕೇಂದ್ರ ನಾಯಕ ವಿನೋದ್‌ ಸೋನ್ಕರ್‌ ಮುಂದೆಯೇ ಬಿಜೆಪಿಯ ಕೆಲವರು ಸಿಎಂ ವಿರುದ್ಧ ಘೋಷಣೆ ಕೂಗಿದ್ದರು, ಅದಕ್ಕೆ ತಿರುಗೇಟು ನೀಡಿರುವ ಸಿಎಂ ಬಿಪ್ಲಬ್‌ “ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಬೇಕೋ ಬೇಡವೋ ಎಂಬುದನ್ನು ರಾಜ್ಯದ ಜನರು ನಿರ್ಧರಿಸಲಿ. ಅದಕ್ಕಾಗಿ ಡಿ.13ರಂದು ಅಸ್ತಬಾಲ್‌ ಮೈದಾನದಲ್ಲಿ ಬೃಹತ್‌ ಕಾರ್ಯಕ್ರಮ ಆಯೋಜಿಸಲಾಗಿದೆ. ಜನರು ಅಲ್ಲಿಗೆ ಬಂದು ನಾನು ಹುದ್ದೆಯಲ್ಲಿ ಮುಂದುವರಿಯಬೇಕೋ ಬೇಡವೋ ಎಂಬ ಬಗ್ಗೆ ತೀರ್ಮಾನ ಪ್ರಕಟಿಸಲಿ’ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಟಿ20 ರ‍್ಯಾಂಕಿಂಗ್ ಪ್ರಕಟ: ಟಾಪ್ ಟೆನ್ ನಲ್ಲಿ ಸ್ಥಾನಪಡೆದ ಕೊಹ್ಲಿ, ರಾಹುಲ್

2018ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 25 ವರ್ಷಗಳ ಸಿಪಿಎಂ ಆಡಳಿತಕ್ಕೆ ಸೋಲು ಉಣಿಸಿತ್ತು. 60 ಸ್ಥಾನಗಳ ಪೈಕಿ 44ರಲ್ಲಿ ಜಯ ಸಾಧಿಸಿತ್ತು. ಒಂದು ವರ್ಷ ಕಳೆಯುವಷ್ಟರಲ್ಲಿಯೇ ಸಿಎಂ ಬಿಪ್ಲದ್‌ ಜತೆಗಿನ ಸಂಘರ್ಷದಿಂದಾಗಿ ಬಿಜೆಪಿಗೆ ರಾಜೀನಾಮೆ ನೀಡಿ, ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next