Advertisement
ಕಳೆದ 15 ವರ್ಷಗಳಲ್ಲಿ ಈ ಮಾಹಿತಿ ಪ್ರಕಟವಾದಾಗೆಲ್ಲ ಅದರ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಒಂದು ರಾಷ್ಟ್ರವಾಗಿ ಇಂತಹ ದುರಂತಗಳ ಬಗ್ಗೆ ನಮಗೆ ಕಿಂಚಿತ್ತೂ ಆತಂಕವಿಲ್ಲವೇ?
Related Articles
Advertisement
ಕಳೆದೆರಡು ವರುಷಗಳಲ್ಲಿ ರೈತರ ಆತ್ಮಹತ್ಯೆಗಳ ಸಂಖ್ಯೆಯ ಹೆಚ್ಚಳಕ್ಕೆ ಕಾರಣ ತೀವ್ರ ಬರಗಾಲ. ತಮಿಳುನಾಡಿನ ಮುಖ್ಯಮಂತ್ರಿ ಇಡೀ ರಾಜ್ಯವೇ ಬರಪೀಡಿತವೆಂದು ಘೋಷಿಸಿ¨ªಾರೆ. ಕರ್ನಾಟಕದ ಒಟ್ಟು 176 ತಾಲೂಕುಗಳಲ್ಲಿ 160 ಬರಪೀಡಿತವೆಂದು ಸರಕಾರವು ಫೆಬ್ರವರಿ 2017ರ ಆರಂಭದಲ್ಲಿ ಘೋಷಿಸಿದೆ. ರೈತರ ಆತ್ಮಹತ್ಯೆಗಳ ಹೊಸ ಮಾಹಿತಿ ಬಹಿರಂಗವಾಗುತ್ತಿದ್ದಂತೆಯೇ ಇನ್ನೊಂದು ಸುದ್ದಿಯೂ ಸದ್ದು ಮಾಡುತ್ತಿತ್ತು: ಅದೇನೆಂದರೆ, ನೋಟುಗಳ ಮಾನ್ಯತೆ ರದ್ದು ಮಾಡಿದ್ದರಿಂದಾಗಿ, ನವಂಬರ್ ಡಿಸೆಂಬರ್ 2016ರಲ್ಲಿ ಬ್ಯಾಂಕುಗಳು ಈ ಮೂರು ವರ್ಗಗಳಿಗೆ ನೀಡಿದ ಸಾಲದ ಪ್ರಮಾಣ ಚರಿತ್ರೆಯÇÉೇ ಅತ್ಯಂತ ಕಡಿಮೆ ವ್ಯಾಪಾರವಹಿವಾಟಿಗೆ, ವ್ಯಕ್ತಿಗಳಿಗೆ ಮತ್ತು ರೈತರಿಗೆ.
ಗ್ರಾಮೀಣ ಸಾಲ ವ್ಯವಸ್ಥೆ ಕುಸಿಯಲು ರಾಜಕೀಯ ಇಚ್ಛಾಶಕ್ತಿಯ ಕೊರತೆ ಪ್ರಧಾನ ಕಾರಣ. ಇಂತಹ ಪರಿಸ್ಥಿತಿಯಲ್ಲಿ ಏರುತ್ತಿರುವ ಸಾಲದ ಹೊರೆ ರೈತರನ್ನು ಹೈರಾಣ ಮಾಡಿದೆ. ಸೋತು ಸುಣ್ಣವಾಗಿದ್ದ ರೈತರು, 2016ರಲ್ಲಿ ಸಾಧಾರಣ ಮಳೆ ಆಗುತ್ತದೆಂದು ನಿರೀಕ್ಷಿಸಿದ್ದರು. ಸಾಧಾರಣ ಮಳೆ ಬಂತು, ರೈತರಿಗೆ ಬಂಪರ್ ಫಸಲೂ ಬಂತು. ಆದರೆ, ಸರಕಾರವು ರೈತರ ಕೈಬಿಟ್ಟಿತು. ರೂ.500 ಮತ್ತು ರೂ.1,000ದ ನೋಟುಗಳ ಮಾನ್ಯತೆ ರದ್ದು ಮಾಡಿದ್ದರಿಂದಾಗಿ ಕೃಷಿ ಉತ್ಪನ್ನಗಳ ಮಾರುಕಟ್ಟೆ ಕುಸಿಯಿತು; ಅದರೊಂದಿಗೆ ರೈತರ ಆಸೆಗಳೆಲ್ಲ ಮಣ್ಣುಪಾಲಾದವು.
ಕರ್ನಾಟಕದಲ್ಲಿ ಕೆಲವೆಡೆ ಎಲೆಕೋಸು ಬೆಳೆದ ರೈತರು ಎಲೆಕೋಸಿನ ಹೊಲದಲ್ಲಿ ಕುರಿಗಳನ್ನು ಮೇಯಲು ಬಿಟ್ಟಿ¨ªಾರೆ. ಇನ್ನು ಕೆಲವೆಡೆ ಟ್ರಾಕ್ಟರಿನಿಂದ ಎಲೆಕೋಸಿನ ಹೊಲ ಉಳುಮೆ ಮಾಡಿ, ತಾವೇ ಬೆಳೆದಿದ್ದ ಎಲೆಕೋಸನ್ನು ಮಣ್ಣಿಗೆ ಸೇರಿಸುತ್ತಿ¨ªಾರೆ. ಯಾಕೆಂದರೆ ಎಲೆಕೋಸಿನ ಬೆಲೆ ಕಿ.ಲೋಗ್ರಾಂಗೆ ಒಂದು ರೂಪಾಯಿಗೆ ಕುಸಿದಿದೆ. ಹಾಗಾಗಿ ಕೊಯ್ದು ಮಾರಿದರೆ ರೈತರಿಗೆ ಕೊಯ್ಲಿನ ಮಜೂರಿ ವೆಚ್ಚವೂ ಗಿಟ್ಟುವುದಿಲ್ಲ.
ಹಾಗಾದರೆ, ರೈತರು ಈಗೇನು ಮಾಡಲಿ¨ªಾರೆ? ಅವರು ಹೆಚ್ಚು ಸಾಲ ಮಾಡಲಿ¨ªಾರೆ ದೈನಂದಿನ ವೆಚ್ಚಕ್ಕಾಗಿ, ಚಳಿಗಾಲದ ಬೆಳೆ ಉಳಿಸಿಕೊಳ್ಳಲಿಕ್ಕಾಗಿ ಮತ್ತು ಬೇಸಗೆಯ ಬೆಳೆಯ ತಯಾರಿಗಾಗಿ. ಆದರೆ, ಭಾರತೀಯ ರಿಸರ್ವ್ ಬ್ಯಾಂಕಿನ ಮಾಹಿತಿಯ ಪ್ರಕಾರ, ಬ್ಯಾಂಕ್ ಇತ್ಯಾದಿ ಸಾಂಸ್ಥಿಕ ಮೂಲಗಳಿಂದ ರೈತರಿಗೆ ನೀಡಲಾದ ಒಟ್ಟು ಸಾಲ ಕಡಿಮೆಯಾಗುತ್ತಿದೆ. ಆದ್ದರಿಂದ ರೈತರು ಖಾಸಗಿ ಲೇವಾದೇವಿದಾರರಿಂದ ಅಧಿಕ ಬಡ್ಡಿಯ ಸಾಲ ಪಡೆಯುವುದು ಅನಿವಾರ್ಯವಾಗುತ್ತದೆ. ಇದು ರೈತರ ಸಾಲದ ಹೊರೆಯ ಹೆಚ್ಚಳಕ್ಕೆ ಕಾರಣವಾಗಲಿದೆ. ಈ ಸಾಲವನ್ನೆಲ್ಲ ಅವರು ಮರುಪಾವತಿಸಲು ಸಾಧ್ಯವೇ? ಹಂಗಾಮಿನಿಂದ ಹಂಗಾಮಿಗೆ ರೈತರ ಸಾಲದ ಹೊರೆ ಹೆಚ್ಚಾಗುತ್ತ ಹೋದಂತೆ ಅವರು ಹತಾಶರಾಗಿ, ಆತ್ಮಹತ್ಯೆಯ ಹಾದಿ ಹಿಡಿಯುತ್ತಾರೆ.
ಹಾಗಿರುವಾಗ, ರೈತರನ್ನು ಈ ಸಾಲದ ಸುಳಿಯಿಂದ ರಕ್ಷಿಸಲಿಕ್ಕಾಗಿ ಸರಕಾರ ಏನು ಮಾಡಬೇಕು? ತಟಕ್ಕನೆ ಅಧಿಕ ಮೌಲ್ಯದ ನೋಟುಗಳ ಮಾನ್ಯತೆ ರದ್ದು ಮಾಡಿ, ರೈತರಿಗೂ ಸಲೀಸಾಗಿ ನಗದು ಸಿಗದಂತೆ ಮಾಡಿದ ಸರಕಾರ, ಈಗ ರೈತರಿಗೆ ಸುಲಭವಾಗಿ ಕೃಷಿಸಾಲ ಸಿಗುವ ವ್ಯವಸ್ಥೆ ಮಾಡಬೇಕು.
ಫೆಬ್ರವರಿ 1, 2017ರಂದು ಕೇಂದ್ರ ಸರಕಾರದ ವಿತ್ತ ಸಚಿವರು ಮಂಡಿಸಿದ 2017-18ರ ಬಜೆಟಿನಲ್ಲಿ ಈ ಬಗ್ಗೆ ಪ್ರಮುಖ ಘೋಷಣೆ ಮಾಡಲಾಗಿದೆ. ಕಳೆದ ವರ್ಷದ ಬಜೆಟಿನಲ್ಲಿ ರೂಪಾಯಿ 9 ಲಕ್ಷ ಕೋಟಿ ಹಣವನ್ನು ಕೃಷಿ ಸಾಲಕ್ಕಾಗಿ ಮೀಸಲಾಗಿಟ್ಟಿದ್ದ ಕೇಂದ್ರ ಸರಕಾರ, ಈ ಬಜೆಟಿನಲ್ಲಿ ಅದನ್ನು ರೂಪಾಯಿ ಹತ್ತು ಲಕ್ಷ ಕೋಟಿಗೆ ಹೆಚ್ಚಿಸಿದೆ. ಈ ಸಾಲ ರೈತರಿಗೆ ಶೇಕಡಾ 7 ಬಡ್ಡಿದರದಲ್ಲಿ ಸಿಗಲಿದೆ. ಜೊತೆಗೆ, ಸಕಾಲದಲ್ಲಿ ಕೃಷಿಸಾಲ ಮರುಪಾವತಿಸಿದ ರೈತರಿಗೆ ಶೇಕಡಾ 3 ಬಡ್ಡಿ ರಿಯಾಯ್ತಿ ಮುಂದುವರಿಯಲಿದೆ. ಕೇಂದ್ರ ಬಜೆಟಿನ ಈ ಕ್ರಮಗಳು ಸರಿಯಾಗಿ ಜಾರಿಯಾಗಿ, ರೈತರ ಸಂಕಟ ಕಡಿಮೆಯಾಗಲೆಂದು ಹಾರೈಸೋಣ.
– ಅಡ್ಕೂರು ಕೃಷ್ಣ ರಾವ್