Advertisement
ಅವರು ಶುಕ್ರವಾರ ಗ್ರಾಮದಲ್ಲಿ ಭಾರತ ನಿರ್ಮಾನ ರಾಜೀವ್ ಗಾಂಧಿ ಸೇವಾ ಕೇದ್ರದಿಂದ 35 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಗ್ರಾಪಂ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಗ್ರಾಪಂ ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿರುವ ಅಧ್ಯಕ್ಷ-ಉಪಾಧ್ಯಕ್ಷ-ಸದಸ್ಯರು ಜನರ ಕಷ್ಟ-ಸುಖಗಳಿಗೆ ಸ್ಪಂದಿಸಬೇಕು. ಹಾಗೆ ಅಧಿಕಾರಿಗಳು ಜನರ ಸೇವಕರಾಗಿ ಕೆಲಸ ಮಾಡಬೇಕೆ ಹೊರತು ಅಧಿಕಾರಿಗಳಾಗಿ ಅಲ್ಲ. ಗ್ರಾಪಂ ಅಭಿವೃದ್ಧಿ ಮಾಡಲು ಪಿಡಿಒ ಎಂಬ ಅಧಿಕಾರಿಯನ್ನ ನೆಮಿಸಲಾಗಿದೆ. ಅಭಿವೃದ್ಧಿ ಅಧಿಕಾರಿ ಎಂದು ನೇಮಿಸಿದ್ದೇ ಜನರ ಸೇವೆಗಾಗಿ. ಸದ್ಯ ಕೆಲವು ಪಿಡಿಒ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಜನರಿಗೆ ಸ್ಪಂದಿಸುತ್ತಿಲ್ಲ ಎಂದು ಸಿದ್ಧರಾಮಯ್ಯ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಕಾರ್ಯವೈಖರಿ ಕುರಿತು ಅಸಮಾಧಾನ ಹೊರ ಹಾಕಿದರು.
Related Articles
Advertisement
ಶಾಸಕನಿರಲಿ, ಮುಖ್ಯಮಂತ್ರಿಯೇ ಇರಲಿ, ಗ್ರಾಪಂ ಅಧ್ಯಕ್ಷ ಇರಲಿ ಯಾರು ಇಲ್ಲಿ ದೇವಲೋಕದಿಂದ ಬಂದವರಲ್ಲ. ಇಲ್ಲಿರುವವರೆಲ್ಲ ಮನುಷ್ಯರೇ.. ನಿಮ್ಮಲ್ಲೇ ನಿಮ್ಮ ಪರವಾಗಿ ನಿಮ್ಮ ಕೆಲಸ ಮಾಡುವ ಪ್ರತಿನಿಧಿ. ನಿಮ್ಮ ವೋಟಿನಿಂದ ಆಯ್ಕೆಯಾಗಿ ಹೋಗಿರುವ ನಾನು ಸೇರಿದಂತೆ ಎಲ್ಲರೂ ಜನಸೇವಕರೇ. ನಿಮ್ಮ ಕೆಲಸ ಮಾಡುವುದೇ ನಮ್ಮ ಕಾಯಕವಾಗಿರಬೇಕಷ್ಟೆ ಎಂದು ಸಿದ್ಧರಾಮಯ್ಯ ಹೇಳಿದರು.
ಸೋಮನಕೊಪ್ಪ ನೀಲಲೋಹಿತ ಸ್ವಾಮಿಜಿ, ಶಾಸಕ ಆನಂದ ನ್ಯಾಮಗೌಡ್ರ, ಮಾಜಿ ಸಚಿವ ಎಚ್ ವೈ ಮೇಟಿ, ಸಣ್ಣಬೀರಪ್ಪ ಪೂಜಾರ, ನಾಗಪ್ಪ ಅಡಪಟ್ಟಿ, ಹೊಳಬಸು ಶೆಟ್ಟರ್, ಭೀಮಸೇನ ಚಿಮ್ಮನಕಟ್ಟಿ, ಬ್ಲಾಕ್ ಅಧ್ಯಕ್ಷ ಎಚ್ ಬಿ ಯಕ್ಕಪ್ಪನವರ, ಬಸವರಾಜ ಕಟ್ಟಿಕಾರ, ಮಹೇಶ ಹೊಸಗೌಡ್ರ, ಶಿವವ್ವ ಕರಲಿಂಗನ್ನವರ, ಬಸವರಾಜ ಬ್ಯಾಹಟ್ಟಿ, ರಾಮಣ್ಣ ಡೊಳ್ಳಿನ, ಹನಮಂತ ನರಗುಂದ, ವೆಂಕಣ್ಣ ಹೊರಕೇರಿ, ಶಿವಾನಂದ ಮಣ್ಣೂರ, ಲಕ್ಷ್ಮಣ್ ದಾದನಟ್ಟಿ, ಸಣ್ಣಬೀರಪ್ಪ ದ್ಯಾವನಗೌಡ್ರ, ಮಾರುತಿ ತಳವಾರ, ರಾಮನಗೌಡ ದ್ಯಾವನಗೌಡ್ರ, ರೇಣುಕಾ ಹಿರಗನ್ನವರ, ಲಲಿತಾ ಹುನಗುಂದ. ಬಸವ್ವ ತುರನೂರ , ಕಮಲವ್ವ ಪಾಟೀಲ, ಲಲಿತಾ ಪೂಜಾರ, ಶೇಖಪ್ಪ ಪವಾಡಿನಾಯ್ಕರ್, ದ್ಯಾವಪ್ಪ ಕರಿಗಾರ, ನೇತ್ರಾವತಿ ಹಡಪದ, ನಾಗವ್ವ ದಂಡಿನ, ಶ್ಯಾಮಲಾ ಮಾದರ ಸೇರಿದಂತೆ ಪಿಡಿಒ ಪರಸನ್ನವರ ಗ್ರಾಮಸ್ಥರು ಸಿಬಂದಿಗಳು ಇದ್ದರು.