Advertisement
ಮಂಜೂರಾದ ಒಟ್ಟು ಎ,ಬಿ,ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಶೇ.65 ಹುದ್ದೆಗಳು ಖಾಲಿಯಿದ್ದು, ಸರ್ಕಾರ ಆದಷ್ಟು ಬೇಗ ಇಲಾಖೆಗೆ ಶಸ್ತ್ರಚಿಕಿತ್ಸೆ ಮಾಡಬೇಕಿದೆ.
Related Articles
Advertisement
ಜಿಲ್ಲೆಯಲ್ಲಿ ರೈತರು ಪ್ರಮುಖವಾಗಿ ಒಕ್ಕಲುತನ, ಹೈನುಗಾರಿಕೆ, ಕುರಿ ಸಾಕಾಣಿಕೆ ನಡೆಸುತ್ತಿದ್ದು, ಸದ್ಯ ಮಳೆಗಾಲ ಆರಂಭವಾಗಿರುವುದರಿಂದ ಜಾನುವಾರುಗಳಿಗೆ ಸಾಮಾನ್ಯವಾಗಿ ಗಂಟಲು ಬೇನೆ, ಕಾಲುಬೇನೆ, ಕರಳು ಬೇನೆಗೆ ತುತ್ತಾಗುತ್ತವೆ. ರೈತರು ಜಾನುವಾರು, ಕುರಿ-ಮೇಕೆಗಳ ಚಿಕಿತ್ಸೆಗೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯಬೇಕಾದ ಪರಿಸ್ಥಿತಿ ಎದುರಾಗಿದೆ.
ಎರಡೇ ವರ್ಷದಲ್ಲಿ 10 ಹುದ್ದೆ ಖಾಲಿ
ಕಳೆದ ಎರಡೇ ವರ್ಷಗಳ ಅವ ಧಿಯಲ್ಲಿ ಕೋವಿಡ್ ಸೇರಿ ನಾಲ್ವರು ಸಿಬ್ಬಂದಿ ಮೃತಪಟ್ಟಿದ್ದಾರೆ. ನಿವೃತ್ತಿ, ವರ್ಗಾವಣೆ ಸೇರಿ ಜಿಲ್ಲೆಯಲ್ಲಿ 10 ಹುದ್ದೆಗಳು ಖಾಲಿಯಾಗಿವೆ. ಒಬ್ಬರು ಮಾತ್ರ ಬೇರೆ ಜಿಲ್ಲೆಯಿಂದ ವರ್ಗಾವಣೆಗೊಂಡು ಬಂದಿದ್ದಾರೆ ಎಂದು ಪಶುಪಾಲನೆ, ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ|ಜಿ.ಪಿ. ಮನಗೂಳಿ “ಉದಯವಾಣಿ’ಗೆ ಮಾಹಿತಿ ನೀಡಿದರು.
88 ಪಶು ಆಸ್ಪತ್ರೆ-ಚಿಕಿತ್ಸಾಲಯಗಳು
ಜಿಲ್ಲೆಯ ಗದಗ ತಾಲೂಕಿನಲ್ಲಿ 27, ಶಿರಹಟ್ಟಿ 13, ರೋಣ 23, ಮುಂಡರಗಿ 16, ನರಗುಂದ ತಾಲೂಕಿನ 9 ಸೇರಿ ಒಟ್ಟು 88 ಪಶು ಆಸ್ಪತ್ರೆ-ಚಿಕಿತ್ಸಾಲಯಗಳಿವೆ.
8 ಸಂಚಾರಿ ಪಶು ಚಿಕಿತ್ಸಾ ವಾಹನ
ಜಿಲ್ಲೆಯಲ್ಲಿ ತಾಲೂಕಿಗೊಂದರಂತೆ 7, ಗದಗ-ಬೆಟಗೇರಿ ಅವಳಿ ನಗರದ ಪಶು ವೈದ್ಯ ಪಾಲಿಕ್ಲಿನಿಕ್‌ಗೆ ಒಂದು ಸೇರಿ ಒಟ್ಟು 8 ಸಂಚಾರಿ ಪಶು ಚಿಕಿತ್ಸಾ ವಾಹನಗಳು ಆಗಮಿಸಿವೆ. ಪ್ರತಿಯೊಂದು ವಾಹನದಲ್ಲಿ ಪಶು ವೈದ್ಯಾಧಿಕಾರಿ, ಸಹಾಯಕ ಹಾಗೂ ಡ್ರೈವರ್ ಸೇರಿ ಮೂವರು ಸಿಬ್ಬಂದಿ ಇರಲಿದ್ದು, ಕೆಲವೇ ದಿನಗಳಲ್ಲಿ ಆ ಹುದ್ದೆಗಳು ನೇಮಕವಾಗಲಿವೆ.
ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಜರ್ಸಿ ಹಸುಗಳು, ಎಮ್ಮೆಗಳನ್ನು ಸಾಕುತ್ತಾರೆ. ಸದ್ಯ ಮಳೆಗಾಲ ಆರಂಭವಾಗಿರುವುದರಿಂದ ಜಾನುವಾರು ಹಾಗೂ ಕುರಿ-ಮೇಕೆಗಳಿಗೆ ವಿವಿಧ ಕಾಯಿಲೆಗಳು ಬರುತ್ತವೆ. ಪಶು ಚಿಕಿತ್ಸಾ ಕೇಂದ್ರದಲ್ಲಿ ವೈದ್ಯರ-ಸಿಬ್ಬಂದಿ ಕೊರತೆಯಿಂದ ಹೈನುಗಾರರು ಒಂದು ಕಡೆಯಿಂದ ಮತ್ತೂಂದು ಕಡೆಗೆ ಅಲೆದಾಡುವಂತಾಗಿದೆ. –ಶರಣಪ್ಪ ಜೋಗಿನ, ತಿಮ್ಮಾಪುರ ಗ್ರಾಮದ ರೈತ.
ವರ್ಷದಿಂದ ವರ್ಷಕ್ಕೆ ವೈದ್ಯರ ಕೊರತೆ ಕಾಡುತ್ತಿದೆ. ಈಗಾಗಲೇ ರಾಜ್ಯದ ಪಶುಪಾಲನೆ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿ 400 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆ ಪೈಕಿ ಕನಿಷ್ಟ 25 ಹುದ್ದೆಗಳನ್ನು ಜಿಲ್ಲೆಗೆ ನೀಡುವಂತೆ ಸಚಿವರಲ್ಲಿ ಮನವಿ ಮಾಡಲಾಗಿದೆ. –ಡಾ|ಜಿ.ಪಿ. ಮನಗೂಳಿ, ಉಪ ನಿರ್ದೇಶಕರು, ಪಶುಪಾಲನೆ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ.
-ಅರುಣಕುಮಾರ ಹಿರೇಮಠ