Advertisement

ಜಿಲ್ಲೆಗಳಲ್ಲಿ ರೆಮ್‌ಡೆಸಿವಿಯರ್‌ ಕೊರತೆ

02:42 PM May 05, 2021 | Team Udayavani |

ಬೆಂಗಳೂರು: ಕೊರೊನಾ ಸೋಂಕಿತರ ಜೀವ ಉಳಿಸಲುಅಗತ್ಯ ಔಷಧಿಗಳಲ್ಲಿ ಒಂದಾದ ರೆಮ್‌ಡೆಸಿವಿಯರ್‌ಚುಚ್ಚುಮದ್ದಿನ ಕೊರತೆಯನ್ನು ರಾಜ್ಯದ ಬಹುತೇಕ ಜಿಲ್ಲೆಗಳುಎದುರಿಸುತ್ತಿವೆ. ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ರೋಗಿಗಳಸಂಖ್ಯೆಗೆ ಹೋಲಿಸಿದರೆ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿಲ್ಲ.

Advertisement

ರೆಮ್‌ಡೆಸಿವಿಯರ್‌ ಚುಚ್ಚುಮದ್ದಿನ ಬೇಡಿಕೆ ಹಿನ್ನೆಲೆಯಲ್ಲಿಕಾಳಸಂತೆಯಲ್ಲೂ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವಪ್ರಕರಣಗಳೂ ಬಹುತೇಕ ಜಿಲ್ಲೆಗಳಲ್ಲಿ ವರದಿಯಾಗುತ್ತಲೇಇವೆ. ಸರ್ಕಾರದ ಮಾರ್ಗಸೂಚಿಯಂತೆ ಖಾಸಗಿಆಸ್ಪತ್ರೆಗಳಿಗೂ ಪೂರೈಕೆಯಾಗುತ್ತಿದ್ದರೂ ಬಹುತೇಕ ಕಡೆಬೇಡಿಕೆಗೆ ತಕ್ಕಂತೆ ಬಳಕೆ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

ಎಲ್ಲೆಲ್ಲಿ ರೆಮ್‌ಡೆಸಿವಿಯರ್‌ ಕೊರತೆ?: ದಾವಣಗೆರೆಜಿಲ್ಲೆಯಲ್ಲಿ ರೆಮ್‌ಡೆಸಿವಿಯರ್‌ ಕೊರತೆ ಕಾಡುತ್ತಿದ್ದು, ಸದ್ಯ20 ರೆಮ್‌ಡೆಸಿವಿಯರ್‌ ದಾಸ್ತಾನಿದೆ. ಪ್ರಸ್ತುತ ಇರುವರೋಗಿಗಳ ಸಂಖ್ಯೆಗೆ ಹೋಲಿಸಿದರೆ ಪ್ರತಿದಿನ150-200 ಅಗತ್ಯವಿದೆ. ಆದರೆ ಬೇಡಿಕೆ ಇದ್ದಷ್ಟುಪೂರೈಕೆ ಆಗುತ್ತಿಲ್ಲ.ಕಲಬುರಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಹೆಚ್ಚುತ್ತಿದ್ದರೂ ಅಗತ್ಯಕ್ಕೆ ತಕ್ಕಷ್ಟು ಪೂರೈಕೆಆಗುತ್ತಿಲ್ಲ. ಸರ್ಕಾರಿ-ಖಾಸಗಿ ಆಸ್ಪತ್ರೆಗಳಿಗೆ 2-3 ದಿನಗಳಿಗೊಮ್ಮೆಸರಬರಾಜಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ 800 ಇಂಜೆಕ್ಷನ್‌ಬೇಡಿಕೆ ಇದ್ದರೂ, 250 ಇಂಜೆಕ್ಷನ್‌ ಪೂರೈಕೆ ಆಗುತ್ತಿದೆ.

ತುಮಕೂರಿನಲ್ಲಿ ಸೋಂಕಿತರ ಸಂಖ್ಯೆಗನುಗುಣವಾಗಿ ರೆಮ್‌ಡೆಸಿವಿಯರ್‌ ಸಿಗುತ್ತಿಲ್ಲ. ಮಾಹಿತಿ ಪ್ರಕಾರ ಪ್ರತಿದಿನ 800 ರಿಂದ1000 ಜನರಿಗೆ ರೆಮ್‌ಡೆಸಿವಿಯರ್‌ ಅಗತ್ಯವಿದ್ದರೆ ಜಿಲ್ಲೆಗೆಬರುತ್ತಿರುವುದೇ 500 ಜನರಿಗೆ ನೀಡುವಷ್ಟು ಎಂದು ವೈದ್ಯರೇಮಾಹಿತಿ ನೀಡಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ಅಲಭ್ಯ: ಉಡುಪಿ ಜಿಲ್ಲೆಯ ಸರ್ಕಾರಿಆಸ್ಪತ್ರೆಯಲ್ಲಿ 144 ರೆಮ್‌ಡೆಸಿವಿಯರ್‌ ಲಭ್ಯವಿದೆ. ಖಾಸಗಿಆಸ್ಪತ್ರೆಗಳಲ್ಲಿ ಸ್ಟಾಕ್‌ ಇಲ್ಲ. ದಿನವೊಂದಕೆ R 300ರಷ್ಟು ಅಗತ್ಯ ಜಿಲ್ಲೆಗೆಇದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.ಬೆಳಗಾವಿ ಜಿಲ್ಲೆಯಲ್ಲಿ ಸರ್ಕಾರಿ-ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾ ಗಿ ರುವ ಸೋಂಕಿತರಿಗೆ ಈಗ ಸದ್ಯ 2583 ರೆಮ್‌ಡೆಸಿವಿಯರ್‌ ಅಗತ್ಯವಿದೆ. ಜಿಲ್ಲೆಯಲ್ಲಿ ಅಗತ್ಯವಾದಷ್ಟು ಚುಚ್ಚುಮದ್ದುದಾಸ್ತಾನಿದೆ. ಸರ್ಕಾರದಿಂದ ಸಮರ್ಪಕ ಪೂರೈಕೆ ಆಗುತ್ತಿದೆ. ಆದರೆಕೆಲ ಖಾಸಗಿ ಆಸ್ಪತ್ರೆಗಳಿಗೆ ಕೊರತೆ ಕಂಡು ಬಂದರೂ ಕೆಲ ಹೊತ್ತಿನಬಳಿಕ ಬೇರೆ ಕಡೆಯಿಂದ ಪೂರೈಸಲಾಗುತ್ತಿದೆ.

Advertisement

ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದೆ.ಮೆಗ್ಗಾನ್‌ ಆಸ್ಪತ್ರೆಯೊಂದಕ್ಕೆ ಪ್ರತಿದಿನ 180 ರಿಂದ 210 ವಯಲ್ಸ್‌ಬೇಕಾಗಿದೆ. ಇನ್ನು ಖಾಸಗಿ, ತಾಲೂಕು ಸರಕಾರಿ ಆಸ್ಪತ್ರೆಗಳಿಗೆ ಪ್ರತಿದಿನ 100 ವಯಲ್ಸ್‌ ಬೇಕು. ಪ್ರತಿದಿನ 300ರಿಂದ 350 ವಯಲ್ಸ್‌ಬೇಡಿಕೆ ಇದೆ. ಆದರೆ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ.ವಿಜಯಪುರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಹೆಚ್ಚುತ್ತಿರುವುದರಿಂದ ನಿತ್ಯ 2,500 ಲಸಿಕೆಗೆ ಬೇಡಿಕೆ ಇದೆ. 31ಖಾಸಗಿ ಆಸ್ಪತ್ರೆಗಳು 5953 ಲಸಿಕೆ ಪಡೆದಿದ್ದು, 5827 ವಿತರಿಸಿವೆ.126 ಲಸಿಕೆ ಲಭ್ಯ ಇವೆ. ಮಂಗಳವಾರ ರಾತ್ರಿ ವೇಳೆ ಇನ್ನೂ 230ವಯಲ್‌ ಬರುವ ನಿರೀಕ್ಷೆ ಇದೆ.

ಬೀದರ ಜಿಲ್ಲೆಯಲ್ಲೂ ಚುಚ್ಚುಮದ್ದು ಕೊರತೆ ಇದೆ. ಬ್ರಿಮ್ಸ್‌ಆಸ್ಪತ್ರೆ ಸೇರಿ ತಾಲೂಕಿನ ಸರ್ಕಾರಿ ಆಸ್ಪತ್ರೆಗಳಿಗೆ ಪ್ರತಿದಿನ 250ರಿಂದ 300 ಡೋಸ್‌ ಚುಚ್ಚುಮದ್ದು ಅವಶ್ಯಕತೆ ಇದೆ.

ಕಾಫಿನಾಡಲ್ಲಿ ಸದ್ಯಕ್ಕಿಲ್ಲ ಸಮಸ್ಯೆ: ಚಿಕ್ಕಮಗಳೂರಲ್ಲಿ ಅಗತ್ಯಕ್ಕನುಗುಣವಾಗಿ ಪ್ರತಿದಿನ 42 ಡೋಸ್‌ ಬೆಂಗಳೂರು ಮತ್ತುಹಾಸನದಿಂದ ಪೂರೈಕೆಯಾಗುತ್ತಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ ರೆಮ್‌ಡೆಸಿವಿಯರ್‌ ಔಷಧ ಕೊರತೆ ಸಮಸ್ಯೆ ತಲೆದೋರಿಲ್ಲ.ಚಿಕ್ಕಬಳ್ಳಾಪುರ ಜಿಲ್ಲೆಯ ಸರ್ಕಾರಿ ಕೋವಿಡ್‌ ಆಸ್ಪತ್ರೆಯಲ್ಲಿ250 ವಯಲ್‌ ಮತ್ತು ಖಾಸಗಿ ಕೋವಿಡ್‌ ಆಸತ್ರೆಗಳಲ್ಲಿ 50ವಯಲ್‌ ಸಂಗ್ರಹಣೆ ಇದೆ.

ಪ್ರತಿದಿನ 30 ರಿಂದ 40 ವಯಲ್‌ಮಾತ್ರ ಬಳಕೆಯಾಗುತ್ತಿದೆ. 270 ವಯಲ್‌ ಬಳಕೆಗೆ ಲಭ್ಯವಿದೆ.ಅಲ್ಲದೆ, ಔಷಧಿ ಖಾಲಿ ಆಗುತ್ತಿದಂತೆ ಅಂದೇ ಸರಬರಾಜುಮಾಡಿಕೊಳ್ಳಲಾಗುತ್ತಿದೆ.ಮೈಸೂರು ಜಿಲ್ಲೆಯಲ್ಲಿ ಸದ್ಯದ ಮಟ್ಟಿಗೆ ಯಾವುದೇ ಕೊರತೆಎದುರಾಗಿಲ್ಲ. ಹುಣಸೂರು ತಾಲೂಕು ಆಸ್ಪತ್ರೆಯಲ್ಲಿ 40, ಪಿರಿಯಾ ಪಟ್ಟಣದಲ್ಲಿ 38, ತಿ.ನರಸೀಪುರದಲ್ಲಿ 7 ರೆಮ್‌ಡೆಸಿವಿಯರ್‌ಇದ್ದು ಉಳಿದ ತಾಲೂಕಿನಲ್ಲಿ ಶೂನ್ಯದಲ್ಲಿದೆ. ಮೈಸೂರಿನ ಕೆ.ಆರ್‌.ಆಸ್ಪತ್ರೆಯಲ್ಲಿ 37, ಜೆಎಸ್‌ಎಸ್‌ ಆಸ್ಪತ್ರೆಯ ಡ್ರಗ್‌ ಸೆಂಟರ್‌ನಲ್ಲಿ734 ಹಾಗೂ ವಿವಿಧ ಆಸ್ಪತ್ರೆ ಸೇರಿದಂತೆ 1018 ರೆಮ್‌ಡಿಸಿವಿರ್‌ಲಭ್ಯವಿದೆ.

ಧಾರವಾಡ ಜಿಲ್ಲಾಡಳಿತದ ಮಾಹಿತಿಯನ್ವಯಔಷಧದ ಕೊರತೆ ಇಲ್ಲ. ಕಳೆದ ವಾರದಲ್ಲಿ ಜಿಲ್ಲೆಗೆ 740 ರೆಮ್‌ಡೆಸಿವಿಯರ್‌ ಔಷಧ ಬಂದಿತ್ತು. ಪ್ರತಿ 2 ದಿನಕ್ಕೊಮ್ಮೆ ಔಷಧಪೂರೈಕೆಯಾ ಗುತ್ತಿದ್ದು, ಬಂದಂತೆ ಬಳಸಲಾಗುತ್ತಿದೆ.ಚಿತ್ರದುರ್ಗ ಜಿಲ್ಲೆಗೆ ನಿತ್ಯ 500 ವಯಲ್‌ ಅಗತ್ಯವಿದೆ. ಖಾಸಗಿಆಸ್ಪತ್ರೆಗಳಿಗೆ ಪ್ರತಿ ದಿನ 300 ಹಾಗೂ ಸರ್ಕಾರಿ ಆಸ್ಪತ್ರೆಗೆ 200ವಯಲ್‌ ಬೇಕು. ಸದ್ಯಕ್ಕೆ ಜಿÇಗೆ ೆÉ ಸಾಕಾಗುವಷ್ಟು ರೆಮ್‌ಡೆಸಿವಿಯರ್‌ ಸರಬರಾಜಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.ಹಾವೇರಿ ಜಿಲ್ಲೆಯಲ್ಲಿ ಈವರೆಗೆ 1734 ವಯಲ್‌ ಸ್ವೀಕರಿಸಲಾಗಿದೆ. ಈ ಪೈಕಿ 933 ವಯಲ್‌ ದಾಸ್ತಾನಿದೆ. ಹೆಚ್ಚುವರಿಯಾಗಿಜಿಲ್ಲಾಡಳಿತದಿಂದ ಪ್ರತಿದಿನ ಬೇಡಿಕೆ ಸಲ್ಲಿಸಲಾಗುತ್ತಿದ್ದು, ನಿತ್ಯ300-400 ರೆಮ್‌ಡೆಸಿವಿಯರ್‌ ಪೂರೈಕೆಯಾಗುತ್ತಿದೆ.ಕೊಪ್ಪಳ ಜಿಲ್ಲೆಯಲ್ಲಿ 489 ಡೋಸ್‌ ಲಭ್ಯವಿದೆ. ಇಲ್ಲಿಯವರೆಗೂ ಸೋಂಕಿತರಿಗೆ ಈ ಔಷಧಿಯ ಕೊರತೆಯಾಗಿಲ್ಲ.

ಎಲ್ಲಕೊರೊನಾ ಸೋಂಕಿತರಿಗೂ ಔಷ ಧ ಕೊಡುತ್ತಿಲ್ಲ. ಸೋಂಕಿತರಆರೋಗ್ಯದ ಸ್ಥಿತಿಯ ಆಧಾರದ ಮೇಲೆ ಹಾಗೂ ಅಗತ್ಯಕ್ಕೆ ತಕ್ಕಂತೆ ಮಾತ್ರ ಔಷಧಿ ಪೂರೈಕೆ ಮಾಡಲಾಗುತ್ತಿದೆ.

ಉತ್ತರ ಕನ್ನಡದಲ್ಲಿ ಪ್ರತಿದಿನ 60-90 ಡೋಜ್‌ ಬಳಕೆ:ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿದಿನ 60 ರಿಂದ 90 ಡೋಜ್‌ಬಳಕೆಯಾಗುತ್ತಿದೆ. ಮೇ 4 ರಂದು ನೀಡಿದ ಮಾಹಿತಿ ಪ್ರಕಾರಕಾರವಾರದ ಕ್ರಿಮ್ಸ್‌ ಅಧೀನ ಆಸ್ಪತ್ರೆಯಲ್ಲಿ 200 ಡೋಜ್‌ ಸೇರಿಒಟ್ಟು 14 ಸರ್ಕಾರಿ ತಾಲೂಕು ಆಸ್ಪತ್ರೆಗಳಲ್ಲಿ ರೆಮ್‌ಡೆಸಿವಿಯರ್‌721 ಡೋಜ್‌ ಇತ್ತು. ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವರೆಮ್‌ಡೆಸಿವಿಯರ್‌ 721 ಡೋಜ್‌ ದಾಸ್ತಾನಿದೆ. ಪ್ರತಿದಿನ 62ಡೋಜ್‌ ಬಳಕೆಯಾಗುತ್ತಿದೆ.ಗಣಿನಾಡಿನಲ್ಲೂ ರೆಮ್‌ಡೆಸಿವಿಯರ್‌ ಕೊರತೆಯಿದೆ.

ರಾಜ್ಯಸರ್ಕಾರದಿಂದ ಪ್ರತಿದಿನ 200ಕ್ಕೂ ಹೆಚ್ಚು ರೆಮ್‌ಡೆಸಿ ವಿ ಯರ್‌ಚುಚ್ಚುಮದ್ದು ಸರಬರಾಜಾಗುತ್ತಿದೆ. ಕಳೆದ ಒಂದು ವಾರದಲ್ಲಿ1520 ಇಂಜೆಕ್ಷನ್‌ ಸರಬರಾಜಾಗಿದೆ. ಜಿಲ್ಲೆಯಲ್ಲಿ ಇರುವಸೋಂಕಿತರಿಗೂ ಸರ್ಕಾರದಿಂದ ಸರಬರಾಜಾಗುತ್ತಿರುವಚುಚ್ಚುಮದ್ದು ಸಾಲದು. ಆಯಾ ದಿನಗಳು ಬಂದಚುಚ್ಚುಮದ್ದುಗಳು ಅಂದೇ ವಿಮ್ಸ್‌, ಜಿಲ್ಲಾಸ್ಪತ್ರೆಗಳಿಗೆಕಳುಹಿಸಿದಲ್ಲಿ ಅಂದೇ ಖಾಲಿಯಾಗುತ್ತಿದೆ ಎಂದು ಆರೋಗ್ಯಇಲಾಖೆ ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next