Advertisement

“ಸಣ್ಣ ಕಥಾ ಪಂಚ ಪ್ರಶಸ್ತಿ’ಗೆ ಕವಯಿತ್ರಿ ಶಾರದಾ ಎ. ಅಂಚನ್‌ ಆಯ್ಕೆ

04:23 PM Apr 24, 2019 | Vishnu Das |

ಮುಂಬಯಿ: ಕಲಾವಿದೆ ಆರಾಧನಾ ಭಟ್‌ ಅವರ ನೇತೃತ್ವದ “ಆರದಿರಲಿ ಬದುಕು ಆರಾಧನಾ ಸೇವಾ ತಂಡ’ ಕೋಟೇಶ್ವರ ಇವರ ವಿರಾಟ್‌ ಸಂಭ್ರಮ-2019ರ ಅಂಗವಾಗಿ ಆಯೋಜಿಸಿದ “ಸಣ್ಣಕಥಾ ಪಂಚ ಪ್ರಶಸ್ತಿ’ಗೆ ನಗರದ ಲೇಖಕಿ, ಕವಿ ಶಾರದಾ ಎ. ಅಂಚನ್‌ ಅವರ “ರಿಕ್ಷಾ ಚಾಲಕ ಕಥೆ’ ಆಯ್ಕೆಗೊಂಡಿದೆ.

Advertisement

ನವಿಮುಂಬಯಿಯ ಎಂಜಿಎಂ ಮೆಡಿಕಲ್‌ ಕಾಲೇಜು ವಿಶ್ವವಿದ್ಯಾಲಯದ ರಕ್ತನಿಧಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಾರದಾ ಎ. ಅಂಚನ್‌ ಅವರು ಇಲ್ಲಿಯ

ವರೆಗೆ 11 ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ಕೃತಿಗಳಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ, ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ ಇನ್ನಿತರ ಸಾಹಿತ್ಯ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ. ಅವರ ಹಲವಾರು
ಕತೆ, ಕವನ, ಲೇಖನ, ವಿಮಶಾì ಲೇಖನಗಳನ್ನು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಚಂದ್ರಿಕಾ ನಾಗರಾಜ್‌ ಹಿರಿಯಡ್ಕ, ಶಶಿಕಾಂತ ಖೋತ್‌ ಮಂಗಳೂರು, ಲಕ್ಷ್ಮೀಕಾಂತ್‌ ತಂತ್ರಿ ಬೆಂಗಳೂರು, ಭಾರತಿ ವೈ. ಬೆಂಗಳೂರು ಅವರು ಪಂಚಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ತೀರ್ಪುಗಾರರಾಗಿ ಲೇಖಕ, ಕಾದಂಬರಿಗಾರ ಸುಶಾಂತ್‌ ಕೋಟ್ಯಾನ್‌ ಸಚ್ಚರಿಪೇಟೆ ಅವರು ಸಹಕರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next