Advertisement
ಹಳೆ ಅಡಿಕೆಯ ಧಾರಣೆಯಲ್ಲಿ ಅಲ್ಪ ಮುನ್ನಡೆ ಸಾಧಿಸಿದರೂ, ಬೆಳೆಗಾರರು ಇನ್ನೂ ಹೆಚ್ಚಿನ ಬೆಲೆ ನಿರೀಕ್ಷೆಯಲ್ಲಿರುವ ಕಾರಣದಿಂದ ಹೆಚ್ಚಿನ ಅಡಿಕೆ ಮಾರುಕಟ್ಟೆ ಪ್ರವೇಶಿಸಿಲ್ಲ. ಡಬಲ್ ಚೋಲು 310 ರೂ.ವರೆಗೆ ಖರೀದಿ ನಡೆದಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿದೆ. ಉಳಿದಂತೆ ಪಠೊರಾ 100 ರೂ.ನಿಂದ 115, ಉಳ್ಳಿಗಡ್ಡೆ- 89 ರೂ.ನಿಂದ 90, ಕರಿಗೋಟು- 80 ರೂ.ನಿಂದ 81 ರೂ.ಗಳಿಗೆ ಖರೀದಿಯಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಇವುಗಳ ಬೆಲೆಯಲ್ಲಿ ಕೊಂಚ ಕುಸಿತ ಕಂಡುಬಂದಿದೆ.
Related Articles
Advertisement
ತೆಂಗಿನ ಕಾಯಿ ಧಾರಣೆ ಸ್ಥಿರತೆ ಕಾಯ್ದುಕೊಂಡಿದ್ದು, ಹೊಸ ತೆಂಗಿನಕಾಯಿ 24-25 ರೂ., ಹಳೆಯ ತೆಂಗಿನಕಾಯಿ 25-26 ರೂ.ತನಕ ಖರೀದಿಯಾಗಿದೆ. ಆದರೆ ದೊಡ್ಡ ಗಾತ್ರದ ತೆಂಗಿನಕಾಯಿ 30-31ರೂ.ಗಳಿಗೆ ಖರೀದಿಯಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಪ್ರಸ್ತುತ ದಿನಗಳಲ್ಲಿ ಬಹುತೇಕ ಎಲ್ಲಾ ಕೃಷಿ ಉತ್ಪನ್ನಗಳು ಕೂಡ ಮಾರುಕಟ್ಟೆ ಸ್ಥಿರತೆಯ ಮೂಲಕ ಸಾಗುತ್ತಿದ್ದು, ಒಂದೆರಡು ರೂ.ಗಳ ವ್ಯತ್ಯಾಸಗಳನ್ನು ಹೊರತು ಪಡಿಸಿದರೆ ಉಳಿದಂತೆ ಯಥಾಸ್ಥಿತಿಯಲ್ಲಿ ಸಾಗುತ್ತಿದೆ. ಗರಿಷ್ಠ ಧಾರಣೆ ತಲುಪಿದರೂ ಅದು ಎಲ್ಲಾ ಮಾರುಕಟ್ಟೆಗಳಲ್ಲಿ ಬೆಳೆಗಾರರಿಗೆ ಲಭ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ.