Advertisement

ತ್ಯಾಜ್ಯ ಸಂಸ್ಕರಣೆ ಘಟಕದಲ್ಲಿ ಕಿರು ಅರಣ್ಯ

11:46 PM Jul 20, 2019 | Team Udayavani |

ಬೆಂಗಳೂರು: ಬಿ.ಪ್ಯಾಕ್‌, ಬಿಬಿಎಂಪಿ, ರೋಟರಿ ಡೌನ್‌ ಟೌನ್‌ ಹಾಗೂ ಹಸಿರು ಮಿಷನ್‌ ಸಹಯೋಗದೊಂದಿಗೆ ಹಸಿರು ಬೆಂಗಳೂರಿಗಾಗಿ ಶನಿವಾರ ಕನ್ನಹಳ್ಳಿಯ ಬಿಬಿಎಂಪಿ ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಕಿರು ಅರಣ್ಯ ನಿರ್ಮಾಣಕ್ಕಾಗಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Advertisement

ಕಾರ್ಯಕ್ರಮದಲ್ಲಿ ಕಸದಿಂದ ಹಸಿದು ನಿರ್ಮಾಣ ಮಾಡುವ ಸಂಕಲ್ಪದೊಂದಿಗೆ ಬಿ.ಪ್ಯಾಕ್‌, ರೋಟರಿ ಸಂಸ್ಥೆಯ ಸದಸ್ಯರು, ಮೌಂಟ್‌ ಕಾರ್ಮಲ್‌, ಜ್ಯೋತಿನಿವಾಸ್‌ ಕಾಲೇಜು, ಮಲ್ಲೇಶ್ವರ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಒಟ್ಟಾಗಿ 300ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟರು.

ಈ ವೇಳೆ ಮಾತನಾಡಿದ ಬಿ.ಪ್ಯಾಕ್‌ ಕಾರ್ಯನಿರ್ವಹಕ ಅಧಿಕಾರಿ ರೇವತಿ ಅಶೋಕ್‌, ಬಿಬಿಎಂಪಿಯ ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಕಿರು ಅರಣ್ಯ ನಿರ್ಮಿಸುವುದರಿಂದ ತ್ಯಾಜ್ಯದಿಂದ ಹೊರ ಬರುವ ದುರ್ವಾಸನೆಗೆ ಕಡಿವಾಣ ಬೀಳಲಿದೆ.

ಹೆಚ್ಚು ಸಸಿಗಳನ್ನು ಒಂದೆಡೆ ನಾಟಿ ಮಾಡುವುದರಿಂದ ಒಂದು ಮರ ಮತ್ತೂಂದು ಮರದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸಸಿಗಳು ಕಡಿಮೆ ಅವಧಿಯಲ್ಲಿ ಸ್ಪರ್ಧೆಗೆ ಬಿದ್ದವರಂತೆ ಎತ್ತರವಾಗಿ ಬೆಳೆಯುತ್ತವೆ. ಮುಂದಿನ ದಿನಗಳಲ್ಲಿ ಈ ರೀತಿಯ ಕಿರು ಅರಣ್ಯಗಳನ್ನು ಬೆಂಗಳೂರಿನ ಸುತ್ತಮುತ್ತಲು ನಿರ್ಮಿಸುವ ಬಿ.ಪ್ಯಾಕ್‌ ಹೊಂದಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next