Advertisement

ಜಿಪಿಎಸ್‌ನಡಿ ಬದುಕು-ಬವಣೆ

12:03 PM Oct 19, 2019 | mahesh |

ಒಂದು ಸಮಯವಿತ್ತು. ಚಿತ್ರರಂಗಕ್ಕೆ ಹೊಸದಾಗಿ ಬರುವವರು ಗುರುತಿಸಿಕೊಳ್ಳಬೇಕಾದರೆ ಸಿನಿಮಾನೇ ವೇದಿಕೆಯಾಗಿತ್ತು. ಆ ಮೂಲಕವೇ ಅವರು ತಮ್ಮ ಪ್ರತಿಭಾ ಪ್ರದರ್ಶನ ಮಾಡಬೇಕಿತ್ತು. ಆದರೆ, ಈಗ ಕಾಲ ಬದಲಾಗಿದೆ. ನಾನಾ ತರಹದ ಅವಕಾಶಗಳು ಇವೆ. ಅದರಲ್ಲಿ ಕಿರುಚಿತ್ರ ಕೂಡಾ ಒಂದು. ಸದ್ಯ ಕನ್ನಡ ಚಿತ್ರರಂಗದಲ್ಲಿ ಕಿರುಚಿತ್ರದ ಟ್ರೆಂಡ್‌ ನಡೆಯುತ್ತಿದೆ. ಚಿತ್ರರಂಗಕ್ಕೆ ಬರುವವರು ಕಿರುಚಿತ್ರದ ಮೂಲಕ ಗಮನಸೆಳೆಯುತ್ತಿದ್ದಾರೆ. ಅದರಲ್ಲೂ ಕೆಲವು ಕಿರುಚಿತ್ರಗಳು ತಮ್ಮ ಕಂಟೆಂಟ್‌ ಮೂಲಕ ಗಮನ ಸೆಳೆಯುತ್ತಿವೆ. ಈ ಸಾಲಿಗೆ ಹೊಸ ಸೇರ್ಪಡೆ “ಜಿಪಿಎಸ್‌’. ರಘುನಂದನ್‌ ಕಾನxಕ ಈ ಕಿರುಚಿತ್ರದ ನಿರ್ದೇಶಕರು.

Advertisement

ಕ್ಯಾಬ್‌ ಡ್ರೈವರ್‌ವೊಬ್ಬನನ್ನು ಮೂಲವಾಗಿಟ್ಟುಕೊಂಡು ಕಿರುಚಿತ್ರದ ಕಥೆ ಹೆಣೆಯಲಾಗಿದೆ. ಒಂದು ಕಡೆ ಕುಟುಂಬ ಮತ್ತೂಂದು ಕಡೆ ಕೆಲಸ. ಈ ಎರಡರ ಮಧ್ಯೆ ಸಿಲುಕಿರುವ ಆತನ ಭಾವನೆ, ಒತ್ತಡದ ಸುತ್ತ ಈ ಕಿರುಚಿತ್ರ ಸಾಗುತ್ತದೆ. ಚಿತ್ರವು ಈಗಾಗಲೇ ಹಲವು ಕಡೆ ಪ್ರದರ್ಶನಗೊಂಡು ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದೆ. ಇತ್ತೀಚೆಗೆ ಈ ಕಿರುಚಿತ್ರದ ಪ್ರದರ್ಶನ ನಡೆಯಿತು. ಸಾಹಿತಿ ಜಯಂತ್‌ ಕಾಯ್ಕಿಣಿ, ನಟ ನೀನಾಸಂ ಸತೀಶ್‌, ನಿರ್ದೇಶಕ ರಾಘು ಶಿವಮೊಗ್ಗ, ಹಿರಿಯ ಪತ್ರಕರ್ತ ಜೋಗಿ ಸೇರಿದಂತೆ ಅನೇಕರು ಕಿರುಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕಿರುಚಿತ್ರದಲ್ಲಿ ಚಾಲಕನಾಗಿ ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ.ಇವರೊಂದಿಗೆ ದಿವ್ಯ ಭಾಜ್‌ಪೈ, ಬೇಬಿ ಅಂಕಿತ, ಕಿರಣ್‌ ನಾಯಕ್‌, ಆನಂದ್‌ ನೀನಾಸಂ ನಟಿಸಿದ್ದಾರೆ. ಮೂರು ರಾತ್ರಿ ಬೆಂಗಳೂರು ಸುತ್ತಮುತ ¤ಚಿತ್ರೀಕರಣ ನಡೆಸಲಾಗಿದೆ. ಫ್ಲಂಗ್‌ ಪೊ›ಡಕ್ಷನ್‌ ಸಂಸ್ಥೆಯು ನಿರ್ಮಾಣ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next