Advertisement

ಕರಾಳ ರೋಗ ಸುತ್ತ ಕಿರುಚಿತ್ರ

03:53 AM May 23, 2020 | Lakshmi GovindaRaj |

ಕನ್ನಡ ಸಿನಿಮಾರಂಗದ ಹಿರಿಯ ಪ್ರಚಾರಕರ್ತರಾದ ಸುಧೀಂದ್ರ ವೆಂಕಟೇಶ್‌ ಅವರ ಮಗ ಪವನ್‌ ವೆಂಕಟೇಶ್‌ ಕಿರುಚಿತ್ರವೊಂದರ ಮೂಲಕ ಕನ್ನಡದ ಮನರಂಜನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದಾನೆ. ಕೊರೊನ- ಕರಾಳ ರೋಗ  ನಾಶ ಎಂಬ ಕಿರುಚಿತ್ರವೊಂದರ ಮೂಲಕ ಕೋವಿಡ್‌-19ನ ವಿವಿಧ ಮಜಲುಗಳನ್ನು ಸಂದೇಶದ ಜೊತೆ ಅನಾವರಣಗೊಳಿಸಲಾಗಿದೆ. ಪವನ್‌ ಕಾಲೇಜು ವಿದ್ಯಾರ್ಥಿ.

Advertisement

ಬಾಲ್ಯದಿಂದಲೂ ಸಿನಿಮಾ ವಾತಾವರಣದಲ್ಲಿಯೇ ಬೆಳೆದು,  ನಿರ್ದೇಶಕನಾಗಬೇಕೆಂಬ ಆಸಕ್ತಿ ಹೊಂದಿದ್ದ ಪವನ್‌ ಈಗ ಕಿರುಚಿತ್ರ ನಿರ್ದೇಶಿಸಿದ್ದಾರೆ. ಈ ಹಿಂದೆ ಸಿನಿಮಾ ಪ್ರಚಾರಕರ್ತ ಡಿವಿ. ಸುಧೀಂದ್ರ ಅವರ ಬದುಕಿನ ಹಾದಿಯನ್ನು ತೆರೆದಿಡುವ ಸುಧೀಂದ್ರ ಸಿನಿ ಪಯಣ ಎನ್ನುವ ಸಾಕ್ಷ್ಯ ಚಿತ್ರವನ್ನು  ಪವನ್‌ ವೆಂಕಟೇಶ್‌ ನಿರ್ದೇಶಿಸಿದ್ದರು. ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಮೂರನೇ ತಲೆಮಾರಿನ ಹುಡುಗರೆಲ್ಲ ಸೇರಿ ಈ ಕಿರುಚಿತ್ರವನ್ನು ರೂಪಿಸಿದ್ದಾರೆ.

4 ನಿಮಿಷ 15 ಸೆಕೆಂಡ್‌ ಸಮಯದ ಈ ಶಾರ್ಟ್ ಫಿಲ್ಮ್ ಒಂದೇ ಕೋಣೆಯಲ್ಲಿ  ಚಿತ್ರಿತವಾಗಿದೆ. ಕೊರೊನಾ ತಡೆಯುವುದು ಹೇಗೆ ಅನ್ನೋದರ ವಿವರ ಇದರಲ್ಲಿದ್ದು, ತಾತ ಮತ್ತು ಮೊಮ್ಮೊಗನ ಪಾತ್ರಗಳ ಮೂಲಕ ಅದು ಅನಾವರಣಗೊಂಡಿದೆ. ತರುಣ ಜಯಸಿಂಹ ತಾತನ ಪಾತ್ರಲ್ಲಿ ಕಾಣಿಸಿಕೊಂಡರೆ ಮಾ. ಡಿ.ಎಸ್‌. ಸುಧೀಂದ್ರ ಮೊಮ್ಮಗನಾಗಿ ಪಾತ್ರ ನಿರ್ವಹಿಸಿದ್ದಾನೆ.

ಸುಧೀಂದ್ರ ವೆಂಕಟೇಶ್‌ ಅವರ ಪುತ್ರಿ ಚಂದನ ಪ್ರಸಾದನ ಮಾಡಿದ್ದಾರೆ. ವೆಂಕಟೇಶ್‌ ಪುತ್ರ ಪವನ್‌ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ  ನಿಭಾಯಿಸಿದ್ದಾರೆ. ಛಾಯಾಗ್ರಾಹಕ ಅರುಣ್‌ ಡಿ.ಎಂ ದೃಶ್ಯಗಳನ್ನು ಸೆರೆ ಹಿಡಿದ್ದಾರೆ. ಮನೋಜ್‌ ಹಾಗೂ ಮಲ್ಲೇಶ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ. ಈ ಕಿರುಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next