ಜೇವರ್ಗಿ: ವಿದ್ಯುತ್ ಶಾಟ್ ಸರ್ಕ್ನೂಟ್‌ನಿಂದ 10ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಕರಕಲಾಗಿ ಲಕ್ಷಾಂತರ ರೂ.ಹಾನಿಯಾದ ಘಟನೆ ತಾಲೂಕಿನ ಜೇರಟಗಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ಸೋಮವಾರ ನಸುಕಿನ ಜಾವ ಸಂಭವಿಸಿದೆ. ರವಿವಾರ ಮಧ್ಯರಾತ್ರಿ ಮಳೆ ಸುರಿದು ನಿಂತ ಬಳಿಕ ವಿದ್ಯುತ್ ಶಾಟ್ ಸರ್ಕ್ನೂಟ್ ಆಗಿ ಹೆದ್ದಾರಿಗೆ ಹೊಂದಿಕೊಂಡಿರುವ ಬೇಕರಿ, ಹಣ್ಣಿನ ಅಂಗಡಿ, ಮೊಬೈಲ್ ಅಂಗಡಿ ಹಾಗೂ 10ಕ್ಕೂ ಹೆಚ್ಚು ಹೋಟಲ್‌ಗಳಿಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ. ಸಂಪೂರ್ಣವಾಗಿ ಸುಟ್ಟು ಕರಕಲಾದ ನಂತರ ಪುನಃ ಮಳೆ ಸುರಿಯಲಾರಂಭಿಸಿತು. ಘಟನೆಯಲ್ಲಿ ನೂರಾರು ಮೊಬೈಲ್‌ಗಳು, ಕಂಪ್ಯೂಟರ್, ಪ್ರಿಡ್ಜ್, ಟೇಬಲ್, ಕುರ್ಚಿಗಳು ಸೇರಿದಂತೆ ಲಕ್ಷಾಂತರ ರೂ. ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರಭು ಮಡ್ಡಿತೋಟ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯುತ್ ಶಾಟ್ ಸರ್ಕ್ನೂಟ್‌ನಿಂದ ತೊಂದರೆಯಲ್ಲಿರುವ ಬಡ ವ್ಯಾಪಾರಿಗಳ ಕುಟುಂಬಕ್ಕೆ ಸರಕಾರ ಸೂಕ್ತ ಪರಿಹಾರ ನೀಡಬೇಕು ಎಂದು ವಿಶ್ವ ಹಿಂದೂ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಪ್ರವೀಣಕುಮಾರ ಕುಂಟೋಜಿಮಠ ಆಗ್ರಹಿಸಿದ್ದಾರೆ.