ಗಜೇಂದ್ರಗಡ (ಗದಗ): ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹಾರ್ಡವೇರ್ ಅಂಗಡಿಯೊಂದು ಸುಟ್ಟು ಭಸ್ಮವಾಗಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಶನಿವಾರ ನಡೆದಿದೆ.
ಪ್ರಕಾಶ್ ಚಿತ್ರಗಾರ ಎಂಬುವರಿಗೆ ಸೇರಿದ ಅಂಗಡಿ ಇದಾಗಿದ್ದು, ಅಂಗಡಿಯಲ್ಲಿ ದಾಸ್ತಾನು ಮಾಡಿದ್ದ 3400 ಚೀಲ ಸಿಮೆಂಟ್, ಪ್ಲಾಸ್ಟಿಕ್ ವಸ್ತುಗಳು, ಪ್ಲೈವುಡ್, ಕಬ್ಬಿಣ ಮತ್ತು 70 ಸಾವಿರ ರೂ. ನಗದು ಬೆಂಕಿಗಾಹುತಿಯಾಗಿವೆ.
ಈ ನಡುವೆ ಸ್ಥಳೀಯರು ಹಲವು ಬಾರಿ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದರೂ, ಸುಮಾರು ಒಂದು ಗಂಟೆ ಬಳಿಕ ಆಗಮಿಸಿದ್ದಾರೆ. ಈ ಮಧ್ಯೆ ಖಾಸಗಿ ಟ್ಯಾಂಕರ್ ನಿಂದ ನೀರು ತರಿಸಿ ಸ್ಥಳೀಯರು ಬೆಂಕಿಯನ್ನು ನಂದಿಸಲು ಪ್ರಯತ್ನಪಟ್ಟರೂ ಬೆಂಕಿ ನಿಯಂತ್ರಣಕ್ಕೆ ಬರಲಿಲ್ಲ ಎಂದು ತಿಳಿದುಬಂದಿದೆ.
ಬಳಿಕ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ನಿಯಂತ್ರಿಸುವಲ್ಲಿ ಸಫಲವಾಯಿತು. ಆದರೆ ಈ ಹೊತ್ತಿಗಾಗಲೇ ಹಾರ್ಡವೇರ್ ಅಂಗಡಿಯಲ್ಲಿದ್ದ ಬಹುತೇಕ ಸಾಮಾಗ್ರಗಳು ಸುಟ್ಟು ಕರಕಲಾಗಿದ್ದು, ಸುಮಾರು ಹತ್ತು ಲಕ್ಷ ರೂಪಾಯಿಗಳ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ
ಘಟನಾ ಸ್ಥಳಕ್ಕೆ ಠಾಣೆ ಪಿಎಸ್ ಐ ಗುರುಶಾಂತ್ ದಾಶ್ಯಾಳ, ಹೆಸ್ಕಾಂ ಅಧಿಕಾರಿ ಬಸವರಾಜ ಮಹಾಮನಿ ಭೇಟಿ ನೀಡಿ ಪರಿಶೀಲಿಸಿದರು.