Advertisement
ದೀಪಗಳ ಸಾಲುಬೆಳಕಿನ ಹಬ್ಬಕ್ಕೆ ಪ್ರಮುಖವಾಗಿ ಬೇಕಾದ ದೀಪಗಳ ಬೃಹತ್ ಸಂಗ್ರಹ ಇಲ್ಲಿದೆ. ದೇಶದ ವಿವಿಧ ಭಾಗಗಳ ಕಲಾಕಾರರು, ಲೋಹ, ಗಾಜು, ಕಲ್ಲು, ಮರ ಇತ್ಯಾದಿ ವಸ್ತುಗಳಿಂದ ರಚಿಸಿರುವ ದೀಪಗಳನ್ನು ಇಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ. ಕರಕುಶಲ ವಸ್ತುಗಳು, ಪೂಜಾ ಸಾಮಗ್ರಿಗಳು, ಅಲಂಕಾರಿಕ ವಸ್ತುಗಳು, ಆಭರಣಗಳು, ಮೂರ್ತಿಗಳು, ಮನೆ ಮಂದಿಗೆ ಬೇಕಾದ ಬಟ್ಟೆಗಳು, ಸಿಹಿ ತಿಂಡಿಗಳೂ ಇಲ್ಲಿ ಲಭ್ಯ.
ಕಾಶ್ಮೀರದಿಂದ ಕಾಂಜೀಪುರಂವರೆಗಿನ ರೇಷ್ಮೆ ಸೀರೆ ಉತ್ಪಾದಕರು, ರೇಷ್ಮೆ ಸೀರೆ ವಿನ್ಯಾಸಗಾರರು, ರೇಷ್ಮೆ ಸಹಕಾರ ಸಂಘಗಳೂ ಸೇರಿ 100ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಕರಕುಶಲ ಉತ್ಪನ್ನಗಳು ಪ್ರದರ್ಶನಕ್ಕಿವೆ. ಹುಲ್ಲಿನ ಹಾಸು, ಬೆಳ್ಳಿಯ ಸೂಕ್ಷ್ಮಕೆತ್ತನೆಯ ಆಭರಣಗಳು, ಸೆಣಬಿನ ಚಪ್ಪಲಿ, ಅಂದದ ಆಟಿಕೆಗಳು, ಜವಳಿ ಮತ್ತು ಗೃಹೋಪಾಲಂಕಾರಿ ಸಾಮಗ್ರಿಗಳು ಸೇರಿದಂತೆ ಅನೇಕ ಕರಕುಶಲ ವಸ್ತುಗಳು ಲಭ್ಯ. ಕಣ್ಮನ ಸೆಳೆಯುವ ಪುರಾತನ ಹಿತ್ತಾಳೆಯ ಕರಕುಶಲ ವಸ್ತುಗಳು, ಸೌರ ಚಿತ್ರಕಲಾಕೃತಿಗಳು, ಬೆಳ್ಳಿಯ ಆಭರಣಗಳು, ಆಧುನಿಕತೆಯ ಹಿನ್ನೆಲೆಯಲ್ಲಿ ಪುರಾತನ ಸೊಬಗನ್ನು ಬಿಂಬಿಸಲಿವೆ. ಪೆಂಡೆಟ್‌ಗಳು, ಬಳೆಗಳು, ಹೇರ್‌ಪಿನ್‌ಗಳಷ್ಟೇ ಅಲ್ಲದೆ ಮುತ್ತಿನ ಆಭರಣದ ಕುಂಕುಮ ಬಾಕ್ಸ್‌ಗಳೂ ಕಣ್ಮನ ಸೆಳೆಯುತ್ತವೆ. ಉತ್ಸವದಲ್ಲಿ ಪ್ರತಿದಿನ ಸಂಜೆ, ಸಂಗೀತ ಕಾರ್ಯಕ್ರಮಗಳೂ ನೀಡಲಿದೆ. ಎಲ್ಲಿ?: ಕರ್ನಾಟಕ ಚಿತ್ರಕಲಾ ಪರಿಷತ್, ರೇಸ್ ಕೋರ್ಸ್ ರಸ್ತೆ
ಯಾವಾಗ?: ಅಕ್ಟೋಬರ್ 27- ನವೆಂಬರ್ 4, ಬೆಳಗ್ಗೆ 11- 7.30
ಪ್ರವೇಶ: ಉಚಿತ