ಮೈಸೂರು: ಸಾಂಸ್ಕ್ರತಿಕ ನಗರಿಯಲ್ಲಿ ಗುಂಡಿನ ಸದ್ದು ಕೇಳಿ ಬಂದಿದ್ದು, ಚಿನ್ನಾಭರಣ ಕಳವು ಮಾಡಲು ಬಂದಿದ್ದ ಖದೀಮರು ಹಾರಿಸಿದ ಗುಂಡಿಗೆ ಅಮಾಯಕ ಬಲಿಯಾಗಿರುವ ಘಟನೆ ನಡೆದಿದೆ.
ದಡದಹಳ್ಳಿ ಗ್ರಾಮದ ಚಂದ್ರು (23) ಮೃತ ದುರ್ದೈವಿ.
ನಗರದ ವಿದ್ಯಾರಣ್ಯಪುರಂ ಚಿನ್ನಾಭರಣ ಮಳಿಗೆಯೊಂದಕ್ಕೆ ಸೋಮವಾರ ಸಾಯಂಕಾಲ ಚಿನ್ನ ಖರೀದಿಸುವಂತೆ ಬಂದ ಖದೀಮರು, ಏಕಾಏಕಿ ಅಂಗಡಿ ಮಾಲೀಕನಿಗೆ ಪಿಸ್ತೂಲ್ ತೋರಿಸಿ ಬೆದರಿಸಿ ಚಿನ್ನಾಭರಣ ದೋಚಲು ಯತ್ನಿಸಿದ್ದಾರೆ.
ಈ ವೇಳೆ ಪ್ರತಿರೋಧ ಒಡ್ಡಲು ಅಂಗಡಿ ಮಾಲೀಕ ಮುಂದಾದಾಗ ಚಿನ್ನಾಭರಣ ಅಂಗಡಿಯಿಂದ ಹೊರಬಂದು ದರೋಡೆಕೋರರು . ಇದೇ ವೇಳೆ ರಸ್ತೆಯಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಗುಂಡು ತಗುಲಿದ್ದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆ ನಡೆದ ಕೂಡಲೇ ಖದೀಮರು ಸ್ಥಳದಿಂದ ಪರಾರಿಯಾಗಿದ್ದಾರೆ.
ಇದನ್ನೂ ಓದಿ :ಪೋರ್ಟಲ್ ದೋಷ : ಹಣಕಾಸು ಸಚಿವೆ ಸೀತಾರಾಮನ್ ಭೇಟಿಯಾದ ಇನ್ಫೋಸಿಸ್ ಸಿಇಒ
ಈ ವೇಳೆ ಸ್ಥಳಗಳಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ನಂತರ ಶ್ವಾಸನಾಳದ ಸಹಕಾರದೊಂದಿಗೆ ಖದೀಮರ ಶೋಧನೆಗೆ ಪೊಲೀಸರು ಯತ್ನಿಸಿದರು.