Advertisement

Shooting Spot; ಹೆಚ್ಎಂಟಿ ಫ್ಯಾಕ್ಟರಿಯಲ್ಲಿ ಸಿನಿ ಅಡ್ಡ

03:19 PM Dec 01, 2023 | Team Udayavani |

ದೇಶದ ಜನಪ್ರಿಯ ಮತ್ತು ಪ್ರತಿಷ್ಟಿತ ಕೈಗಾರಿಕಾ ಸಂಸ್ಥೆಗಳ ಪೈಕಿ ಹೆಚ್‌ಎಂಟಿ (ಹಿಂದೂಸ್ಥಾನ್‌ ಮಿಷಿನ್‌ ಟೂಲ್ಸ್‌) ಕೂಡ ಒಂದು. ಇಂಥ ಹೆಚ್‌ಎಂಟಿ ಕಂಪೆನಿಯ ಕೈಗಾರಿಕಾ ಘಟಕ ಬೆಂಗಳೂರಿನ ಹೃದಯ ಭಾಗದಲ್ಲೂ ಇತ್ತು ಎಂಬುದು ಬಹುತೇಕರಿಗೆ ಗೊತ್ತಿರಬಹುದು. ಬೆಂಗಳೂರಿನ ಯಶವಂತಪುರ ಮತ್ತು ಜಾಲಹಳ್ಳಿಗೆ ಹೊಂದಿಕೊಂಡಿರುವಂತೆ ಇರುವ ಈ ಹೆಚ್‌ಎಂಟಿ ಕಂಪೆನಿಯ ಕೈಗಾರಿಕಾ ಘಟಕ ಇದೀಗ ಸಿನಿಮಾ ಮಂದಿಯ ಫೇವರೆಟ್‌ ಶೂಟಿಂಗ್‌ ಸ್ಪಾಟ್‌.

Advertisement

ಹೌದು, ಆಡಳಿತಾತ್ಮಕ ವೈಫ‌ಲ್ಯ ಮತ್ತು ಸತತ ನಷ್ಟದ ಸುಳಿಗೆ ಸಿಲುಕಿದ್ದ ಹೆಚ್‌ಎಂಟಿ ಕಂಪೆನಿಯ ಬೆಂಗಳೂರಿನ ಕೈಗಾರಿಕಾ ಘಟಕವನ್ನು ಕೆಲ ವರ್ಷಗಳ ಹಿಂದೆ ಬಂದ್‌ ಮಾಡಲಾಗಿತ್ತು. ಅದಾದ ಬಳಿಕ ಹೆಚ್‌ಎಂಟಿ ಕಂಪೆನಿಯ ಈ ಬೃಹತ್‌ ಕೈಗಾರಿಕಾ ಘಟಕದ ವಿಸ್ತಾರ ಕ್ಯಾಂಪಸ್‌ ಚಟುವಟಿಕೆಗಳಿದ್ದೆ ಬಿಕೋ ಎನ್ನುತ್ತಿದೆ. ಇಂಥ ಹೆಚ್‌ಎಂಟಿ ಕಂಪೆನಿಯ ಕ್ಯಾಂಪಸ್‌ ನಲ್ಲಿ ಈಗ ಪ್ರತಿವರ್ಷ ಹತ್ತಾರು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ. ಹೀರೋ ಇಂಟ್ರಡಕ್ಷನ್‌, ಆ್ಯಕ್ಷನ್‌ ಸೀನ್‌ಗಳು, ಚೇಸಿಂಗ್‌, ಹಾಡುಗಳು ಹೀಗೆ ಸಿನಿಮಾದ ಹತ್ತಾರು ದೃಶ್ಯಗಳ ಚಿತ್ರೀಕರಣಕ್ಕೆ ಹೆಚ್‌ ಎಂಟಿ ಕಂಪೆನಿಯ ಫ್ಯಾಕ್ಟರಿ ಕ್ಯಾಂಪಸ್‌ ಹೇಳಿ ಮಾಡಿಸಿದಂತಿದೆ.

ಬೆಂಗಳೂರಿನ ಹೃದಯ ಭಾಗದಲ್ಲಿರುವುದರಿಂದ, ಸಿನಿಮಾದ ಕಲಾವಿದರು ಮತ್ತು ತಂತ್ರಜ್ಞಾರ ಓಡಾಟಕ್ಕೆ ಕೂಡ ಹೆಚ್‌ಎಂಟಿ ಕಂಪೆನಿಯ ಫ್ಯಾಕ್ಟರಿ ಕ್ಯಾಂಪಸ್‌ ಅನುಕೂಲಕರವಾಗಿದೆ. ಜೊತೆಗೆ ಜನಜಂಗುಳಿ ಕೂಡ ಕಡಿಮೆಯಿರುವುದರಿಂದ ಯಾವುದೇ ಅಡೆತಡೆಗಳಿಲ್ಲದೆ ತಮ್ಮ ಸಿನಿಮಾದ ದೃಶ್ಯಗಳನ್ನು ಚಿತ್ರೀಕರಿಸಲು ನಿರ್ಮಾಪಕರು ಮತ್ತು ನಿರ್ದೇಶಕರ ಮೊದಲ ಆಯ್ಕೆ ಕೂಡ ಹೆಚ್‌ಎಂಟಿ ಕಂಪೆನಿಯ ಫ್ಯಾಕ್ಟರಿ ಕ್ಯಾಂಪಸ್‌ ಎನ್ನಬಹುದು.

ಕಳೆದ ವರ್ಷವೊಂದರಲ್ಲೆ ಕನ್ನಡದ ಬರೋಬ್ಬರಿ 40ಕ್ಕೂ ಹೆಚ್ಚು ಸಿನಿಮಾಗಳ ವಿವಿಧ ದೃಶ್ಯಗಳನ್ನು ಹೆಚ್‌ ಎಂಟಿ ಕಂಪೆನಿಯ ಫ್ಯಾಕ್ಟರಿ ಕ್ಯಾಂಪಸ್‌ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳಿನ ಅನೇಕ ಸಿನಿಮಾಗಳನ್ನೂ ಇಲ್ಲಿ ಆಗಾಗ್ಗೆ ಚಿತ್ರೀಕರಿಸಲಾಗುತ್ತದೆ. ಸಿನಿಮಾ. ಸೀರಿಯಲ್‌, ವೆಬ್‌ ಸೀರಿಸ್‌, ಫೋಟೋಶೂಟ್‌ ಹೀಗೆ ಚಿತ್ರೀಕರಣದ ಸ್ಪಾಟ್‌ ಆಗಿ ಹೆಚ್‌ಎಂಟಿ ಕಂಪೆನಿಯ ಫ್ಯಾಕ್ಟರಿ ಕ್ಯಾಂಪಸ್‌ ಈಗ ಅನೇಕಕರ ಗಮನ ಸೆಳೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next