Advertisement

ಶೂಟಿಂಗ್‌: ಭಾರತದ ಬುಟ್ಟಿಯಲ್ಲಿ 25 ಪದಕ ; 12 ಚಿನ್ನ, 7 ಬೆಳ್ಳಿ, 6 ಕಂಚು

02:14 AM Mar 27, 2021 | Team Udayavani |

ಹೊಸದಿಲ್ಲಿ: ಐಎಸ್‌ಎಸ್‌ಎಫ್ ಶೂಟಿಂಗ್‌ ವಿಶ್ವಕಪ್‌ನಲ್ಲಿ ಆತಿಥೇಯ ಭಾರತ ತನ್ನ ಒಟ್ಟು ಪದಕಗಳ ಸಂಖ್ಯೆಯನ್ನು 25ಕ್ಕೆ ಏರಿಸಿಕೊಂಡು ಪ್ರಭುತ್ವ ಮುಂದುವರಿಸಿತು.

Advertisement

ಶುಕ್ರವಾರದ ಸ್ಪರ್ಧೆಗಳಲ್ಲಿ ಭಾರತಕ್ಕೆ ಮತ್ತೆರಡು ಚಿನ್ನದ ಪದಕದ ಜತೆಗೆ ಒಂದು ಬೆಳ್ಳಿ, ಒಂದು ಕಂಚು ಒಲಿದು ಬಂತು. 50 ಮೀ. ರೈಫ‌ಲ್‌ 3 ಪೊಸಿಶನ್‌ ಮಿಕ್ಸೆಡ್‌ ತಂಡ ವಿಭಾಗದಲ್ಲಿ ತೇಜಸ್ವಿನಿ ಸಾವಂತ್‌-ಸಂಜೀವ್‌ ರಜಪೂತ್‌ ಸ್ವರ್ಣಕ್ಕೆ ಗುರಿ ಇರಿಸಿದರು. ಉಕ್ರೇನ್‌ ವಿರುದ್ಧ ಇವರು 31-19 ಅಂತರದ ರೋಚಕ ಗೆಲುವು ಸಾಧಿಸಿದರು. ಐಶ್ವರಿ ಪ್ರತಾಪ್‌ ಸಿಂಗ್‌ ತೋಮರ್‌-ಸುನಿಧಿ ಚೌಹಾಣ್‌ ಜೋಡಿ ಕಂಚಿನ ಪದಕ ಜಯಿಸಿತು.

ಪುರುಷರ 50 ಮೀ. ರೈಫ‌ಲ್‌ 3 ಪೊಸಿಶನ್‌ ತಂಡ ವಿಭಾಗದಲ್ಲಿ ಸ್ವಪ್ನಿಸ್‌ ಕುಸಲೆ, ಚೈನ್‌ ಸಿಂಗ್‌, ನೀರಜ್‌ ಕುಮಾರ್‌ ಬಂಗಾರದೊಂದಿಗೆ ರಾರಾಜಿಸಿದರು.

ಪುರುಷರ 25 ಮೀ. ರ್ಯಾಪಿಡ್‌ ಫೈರ್‌ ವಿಭಾಗದಲ್ಲಿ 18 ವರ್ಷದ ಯುವ ಶೂಟರ್‌ ವಿಜಯವೀರ್‌ ಸಿಂಧು ಬೆಳ್ಳಿ ಗೆದ್ದರು.

Advertisement

Udayavani is now on Telegram. Click here to join our channel and stay updated with the latest news.

Next