Advertisement

ಅಮೆರಿಕ ಸ್ವಾತಂತ್ರ್ಯೋತ್ಸವ ಪರೇಡ್ ಮೇಲೆ ಗುಂಡಿನ ದಾಳಿ: ಆರು ಮಂದಿ ಸಾವು

08:37 AM Jul 05, 2022 | Team Udayavani |

ಚಿಕಾಗೋ: ಚಿಕಾಗೋದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಪರೇಡ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 36 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

Advertisement

ಘಟನೆಗೆ ಸಂಬಂಧಿಸಿದಂತೆ ರಾಬರ್ಟ್ ಎಂಬಾತನನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ಸೋಮವಾರ ರಾತ್ರಿ ಹೇಳಿದ್ದಾರೆ.

ಇದಕ್ಕೂ ಮೊದಲು, ಚಿಕಾಗೋ ಉಪನಗರವಾದ ಹೈಲ್ಯಾಂಡ್ ಪಾರ್ಕ್‌ನಲ್ಲಿ ಜುಲೈ 4ರಂದು ಪರೇಡ್‌ ನಲ್ಲಿ ವ್ಯಕ್ತಿಯೊಬ್ಬ ಕಟ್ಟಡ ಮೇಲ್ಭಾಗದಿಂದನ ಹೈಎಂಡ್ ರೈಫಲ್‌ ನಿಂದ ಗುಂಡು ಹಾರಿಸಿದ್ದಾನೆ.

ಸೆಂಟ್ರಲ್ ಅವೆನ್ಯೂದಲ್ಲಿ ಜುಲೈ ನಾಲ್ಕರಂದು ಮೆರವಣಿಗೆಗಾಗಿ ಜನರು ಜಮಾಯಿಸಿದಾಗ ಬೆಳಿಗ್ಗೆ 10 ಗಂಟೆಯ ನಂತರ ಗುಂಡಿನ ದಾಳಿ ಪ್ರಾರಂಭವಾಯಿತು ಎಂದು ಸಿಎನ್ಎನ್ ಹೇಳಿದೆ. ಗುಂಡಿನ ದಾಳಿ ನಡೆದ ಸ್ಥಳದ ಸಮೀಪದ ಕಟ್ಟಡದ ಮೇಲ್ಛಾವಣಿಯಲ್ಲಿ ಬಂದೂಕು ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ಪೊಲೀಸ್ ಕಮಾಂಡರ್ ಕ್ರಿಸ್ ಓ’ನೀಲ್ ಹೇಳಿದ್ದಾರೆ.

ಇದನ್ನೂ ಓದಿ:ಸೊಸೈಟಿಗಳಲ್ಲೂ ಸಿಗಲಿದೆ ಪೆಟ್ರೋಲ್‌? ಸದ್ಯ ಇರುವ ನಿಯಮ ಬದಲಿಸಲು ಕೇಂದ್ರದ ಚಿಂತನೆ

Advertisement

ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ಸತ್ತವರಲ್ಲಿ ಒಬ್ಬನನ್ನು 76 ವರ್ಷದ ನಿಕೋಲಸ್ ಟೊಲೆಡೊ ಎಂದು ಹೆಸರಿಸಿದೆ. ಗಾಲಿಕುರ್ಚಿಯಲ್ಲಿದ್ದ ಅವರು ಮೆರವಣಿಗೆಯಲ್ಲಿ ಭಾಗವಹಿಸಲು ಬಯಸಿರಲಿಲ್ಲ, ಆದರೆ ಅವರ ಅಂಗವೈಕಲ್ಯದಿಂದಾಗಿ ಅವನು ಯಾರೊಬ್ಬರ ಸುತ್ತಲೂ ಪೂರ್ಣ ಸಮಯ ಇರಬೇಕಾಗಿತ್ತು. ಆದರೆ ಅವರ ಕುಟುಂಬವು ಪರೇಡ್ ಈವೆಂಟ್ ನೋಡಲು ಬೇಕಾಗಿ ಟೊಲೆಡೊ ಅವರನ್ನೂ ಕರೆದುಕೊಂಡು ಬಂದಿತ್ತು.

ಪರೇಡ್ ನಡೆಯುತ್ತಿದ್ದಾಗ ಗುಂಡಿನ ಶಬ್ಧ ಕೇಳಿಸಿತು. ಮೊದಲು ಇದು ಪರೇಡ್ ನ ಭಾಗವೆಂದು ನಾನು ಭಾವಿಸಿದೆವು. ಪಟಾಕಿಯಂತೆ ಶಬ್ಧ ಬರುತ್ತಿತ್ತು. ಸುಮಾರು 200 ಬಾರಿ ಶಬ್ಧ ಕೇಳಿಸಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next