ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಶೂಟಿಂಗ್ ತಂಡ ಗರಿಷ್ಠ ಪದಕ ಗೆಲ್ಲುವ ನಿರೀಕ್ಷೆ ಹೊಂದಲಾಗಿತ್ತು.
ಆದರೆ ಎಲ್ಲರೂ ವಿಫಲರಾಗುವುದರೊಂದಿಗೆ ತಂಡ ಬರಿಗೈಯಲ್ಲಿ ಮರಳಿತ್ತು. ಇದರಿಂದ ಬೇಸತ್ತಿರುವ ರಾಷ್ಟ್ರೀಯ ಶೂಟಿಂಗ್ ಸಂಸ್ಥೆ (ನ್ಯಾಶನಲ್ ರೈಫಲ್ ಅಸೋಸಿಯೇಶನ್ ಆಫ್ ಇಂಡಿಯಾ) ಎಲ್ಲ 24 ರಾಷ್ಟ್ರೀಯ ಕೋಚ್‌ಗಳನ್ನು ಜವಾಬ್ದಾರಿಯಿಂದ ಮುಕ್ತಗೊಳಿಸಿದೆ.
ಮುಂದಿನ ವರ್ಷದ ನೂತನ ಋತುವನ್ನು ಸಂಪೂರ್ಣ ಹೊಸ ಕೋಚ್‌ಗಳೊಂದಿಗೆ ಆರಂಭಿಸಲು ನಿರ್ಧರಿಸಲಾಗಿದೆ.
ಇದೇ ವೇಳೆ ಶೂಟರ್‌ಗಳು ಎಲ್ಲಿ ಎಡವಿದರು ಎನ್ನುವುದನ್ನೂ ಪರಿಶೀಲಿಸಲಾಗುತ್ತದೆ ಎಂದು ಎನ್‌ಆರ್‌ಎಐ ಪ್ರಧಾನ ಕಾರ್ಯದರ್ಶಿ ಕನ್ವರ್ ಸುಲ್ತಾನ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ:ದುಬೈನಲ್ಲಿ ಕಳುವಾಗಿದ್ದ ಮರಡೋನ ಅವರ 20 ಲಕ್ಷದ ವಾಚ್ ಅಸ್ಸಾಮ್‌ನಲ್ಲಿ ಪತ್ತೆ!