Advertisement
ಇದು 2005ರ ವಿದ್ಯಮಾನ. ಅಂದು ಕೊಲ್ಹಾಪುರದ ತೇಜಸ್ವಿನಿ ಹೆಸರು ಶೂಟಿಂಗ್ ಕ್ಷೇತ್ರದಲ್ಲಿ ಚಾಲ್ತಿಗೆ ಬಂದಿರಲಿಲ್ಲ. ಅವರಿಗೆ ಜರ್ಮನಿ ಶೂಟಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ತೀವ್ರ ಆರ್ಥಿಕ ಅಡಚಣೆ ಎದುರಾಗಿತ್ತು. ಆಗ ತೇಜಸ್ವಿನಿ ಕುಟುಂಬದ ಆತ್ಮೀಯರಾದ, ಹಿರಿಯ ಬಿಜೆಪಿ ಮುಖಂಡ ಚಂದ್ರಕಾಂತ್ ಪಾಟೀಲ್ ಜತೆ ಗೋವಾ ಮುಖ್ಯಮಂತ್ರಿ ಪಾರೀಕರ್ ಅವರನ್ನು ಭೇಟಿಯಾಗಿ ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ. ಇದಕ್ಕೆ ಸ್ಪಂದಿಸಿದ ಪಾರೀಕರ್ ಕೂಡಲೇ ಚೆಕ್ ಒಂದಕ್ಕೆ ಸಹಿ ಹಾಕಿ ತೇಜಸ್ವಿನಿ ಕೈಗೆ ನೀಡುತ್ತಾರೆ. ಇದು ಒಂದು ಲಕ್ಷ ರೂ. ಮೊತ್ತವನ್ನು ಒಳಗೊಂಡಿದ್ದಾಗಿ ತೇಜಸ್ವಿನಿ ಹೇಳುತ್ತಾರೆ.
Advertisement
ಪಾರೀಕರ್ ಕೊಡುಗೆ ಸ್ಮರಿಸಿಕೊಂಡ ಶೂಟರ್ ತೇಜಸ್ವಿನಿ
12:30 AM Mar 19, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.