ಹೊಸದಿಲ್ಲಿ: ಭಾರತದ ಶೂಟರ್ ಶಹಜಾರ್ ರಿಜ್ವಿ ಅವರು ಐಎಸ್‌ಎಸ್‌ಎಫ್ ವಿಶ್ವ ರ್‍ಯಾಂಕಿಂಗ್‌ನ ಪುರುಷರ 10 ಮೀ. ಏರ್ ರೈಫಲ್ ರ್‍ಯಾಂಕಿಂಗ್‌ನಲ್ಲಿ ನಂಬರ್ ವನ್ ಅಲಂಕರಿಸಿದ್ದಾರೆ. ಚೀನದ ಚಾಂಗ್ವಾನ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಬೆಳ್ಳಿಯ ಪದಕ ಗೆಲ್ಲುವ ಮೂಲಕ ರಿಜ್ವಿ ಈ ಸಾಧನೆ ಮಾಡಿದ್ದಾರೆ.
ಅಗ್ರ ಹತ್ತರಲ್ಲಿ ಜಿತು ರಾಯ್
ಒಟ್ಟಾರೆ 1654 ಅಂಕ ಗಳಿಸುವ ಮೂಲಕ ರಿಜ್ವಿ ಅವರು ರಷ್ಯಾದ ಆರ್ಟೆಬ್ ಚೆನೊìಸೋವ್ (1046) ಅವರನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದರು. ಜಪಾನಿನ ಟೊಮೊಯುಕಿ ಮಾಟ್ಸುದ (803) ಮೂರನೇ ಸ್ಥಾನದಲ್ಲಿದ್ದಾರೆ. ಅಗ್ರ 10ರಲ್ಲಿ ಭಾರತದ ಜಿತು ರಾಯ್ ಕಾಣಿಸಿಕೊಂಡಿದ್ದಾರೆ. ಜಿತು ಆರನೇ ಸ್ಥಾನ ಪಡೆದಿದ್ದರೆ ಓಂ ಪ್ರಕಾಶ್ ಮಿತರ್ವಾಲ್ 12ನೇ ಸ್ಥಾನ ಪಡೆದಿದ್ದಾರೆ.
ಚಾಂಗ್ವಾನ್‌ನಲ್ಲಿ ಬೆಳ್ಳಿ ಪಡೆದಿದ್ದ ರಿಜ್ವಿ ಮೆಕ್ಸಿಕೋದ ಗ್ವಾಡಲಜಾರದಲ್ಲಿ ಮಾರ್ಜ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ವಿಶ್ವದಾಖಲೆಯ ಸಾಧನೆಯೊಂದಿಗೆ ಚಿನ್ನ ಜಯಿಸಿದ್ದರು. ಹೀಗಾಗಿ ಅವರು ಅಗ್ರಸ್ಥಾನಕ್ಕೇರುವಂತಾಯಿತು. ಭಾರತದ ರವಿ ಕುಮಾರ್ ನಾಲ್ಕನೇ ಮತ್ತು ದೀಪಕ್ ಕುಮಾರ್ 9ನೇ ಸ್ಥಾನ ಪಡೆದಿದ್ದಾರೆ. ಪುರುಷರ 50 ಮೀ. 3 ಪೊಸಿಸನ್ ಪಟ್ಟಿಯಲ್ಲಿ ಭಾರತದ ಅಖೀಲ್ ಶೆರಾನ್ (4ನೇ) ಮತ್ತು ಸಂಜೀವ್ ರಜಪೂತ್ (8ನೇ) ಅಗ್ರ 10ರೊಳಗಿನ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮನು ಭಾಕರ್ 4ನೇ ಸ್ಥಾನ
ವನಿತಾ ಶೂಟರ್‌ಗಳಲ್ಲಿ ಮನು ಭಾಕರ್ ವನಿತಾ 10 ಮೀ. ಏರ್ ಪಿಸ್ತೂಲ್ ರ್‍ಯಾಂಕಿಂಗ್‌ನಲ್ಲಿ 4ನೇ ಸ್ಥಾನ ಪಡೆದಿದ್ದಾರೆ. ಭಾರತೀಯ ಶೂಟರ್‌ಗಳಲ್ಲಿ ಅಗ್ರ ಹತ್ತರೊಳಗಿನ ಸ್ಥಾನ ಪಡೆದವರಲ್ಲಿ ಬಾಕರ್ ಮಾತ್ರ ಸೇರಿದ್ದಾರೆ. ಅವರು ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದರು.