ವಿಜಯಪುರ: ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದೆ. ಭೀಮಾ ತೀರದ ಕುಖ್ಯಾತ ಮಹಾದೇವ ಭೈರಗೊಂಡನ ಮೇಲೆ ಗುಂಡಿನ ದಾಳಿ ನಡೆದಿದೆ.
ಭೀಕರವಾಗಿ ಗಾಯಗೊಂಡಿರುವ ಮಹಾದೇವನನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಾದೇವ ಭೈರಗೊಂಡ ಚಡಚಣ ತಾಲೂಕ ಕೆರೂರ ಗ್ರಾಮದ ಮನೆಯಲ್ಲಿ ಇದ್ದಾಗ ದಾಳಿ ನಡೆಸಿದ ಅಪರಿಚಿತರ ತಂಡ, ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ:ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ಹೊಂದಿದ್ದ ಕಲಬುರ್ಗಿಯ ವ್ಯಕ್ತಿ ಬಂಧನ
ಗುಂಡಿನ ದಾಳಿಯಲ್ಲಿ ತೀವ್ರ ಗಾಯಗೊಂಡ ಮಹಾದೇವ ಭೈರಗೊಂಡ ವಿಜಯಪುರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿರುವ ಚಡಚಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.