ಅಜೇಯ್ ರಾವ್ ನಾಯಕರಾಗಿ ನಟಿಸುತ್ತಿರುವ “ಶೋಕಿವಾಲ’ ಚಿತ್ರದ ಹಾಡುಗಳ ರೆಕಾರ್ಡಿಂಗ್ ಪೂರ್ಣಗೊಂಡಿದೆ. ಚಿತ್ರ ಕನ್ನಡ ಹಾಗೂ ತೆಲುಗಿನಲ್ಲಿ ತಯಾರಾಗುತ್ತಿದ್ದು, ಎರಡೂ ಭಾಷೆಯ ಸಾಂಗ್ ರೆಕಾರ್ಡಿಂಗ್ ಪೂರ್ಣಗೊಂಡಿದೆ.
ಹಾಡಿನ ಬಗ್ಗೆ ಮಾತನಾಡುವ ನಿರ್ದೇಶಕ ಜಾಕಿ, “ಜಯಂತ್ ಕಾಯ್ಕಿಣಿ ರವರು ಬರೆದಿರುವ ಹಾಡನ್ನು ಗಾಯಕ ಅನ್ವೇಷ್ ಹಾಡಿರುವುದು ತುಂಬಾ ಖುಷಿಯಾಗಿದೆ. ಹಾಡು ಕೂಡ ಅದ್ಬುತವಾಗಿ ಬಂದಿದೆ ಎಂದು ಎಲ್ಲರು ಮೆಚ್ಚುಗೆ ತಿಳಿಸಿದ್ದಾರೆ. ಇದೆ ಹಾಡನ್ನು ತೆಲುಗಿಗೆ ಕನ್ನಡದ ಸಿಂಗರ್ ಆದ ಶ್ವೇತ ದೇವನಹಳ್ಳಿ ಯವರು ಹಾಡಿದ್ದಾರೆ. ಆಗಸ್ಟ್ 20ಕ್ಕೆ ಮೊದಲ ಲಿರಿಕಲ್ ವಿಡಿಯೋ ಬಿಡುಗಡೆ ಮಾಡುತ್ತೇವೆ’ ಎನ್ನುವುದು ಅವರ ಮಾತು.
ಇದನ್ನೂ ಓದಿ:ಇಂದು ಹುಟ್ಟುಹಬ್ಬದ ಸಂಭ್ರಮ: ಉದಯವಾಣಿ ಜೊತೆ ಚಂದನವನದ ಸುಧಾ’ರಾಣಿ’ ಮಾತುಕತೆ
ಶ್ರೀಧರ್ ಸಂಭ್ರಮ್ ಸಂಗೀತವಿರುವ ಈ ಸಿನಿಮಾ ವನ್ನು ಕ್ರಿಸ್ಟಲ್ ಪಾರ್ಕ್ ಸಿನಿಮಾಸ್‌ನಡಿ ಟಿ.ಆರ್.ಚಂದ್ರಶೇಖರ್ ನಿರ್ಮಿಸಿದ್ದಾರೆ. ಅಂದಹಾಗೆ, ಶೋಕಿವಾಲ ಪಕ್ಕಾ ಹಳ್ಳಿ ಸೊಗಡಿನ ಚಿತ್ರ.
ಅಜೇಯ್ ರಾವ್, ಸಂಜನಾ ಆನಂದ್ ನಾಯಕ-ನಾಯಕಿ. ಉಳಿದಂತೆ ಚಿತ್ರದಲ್ಲಿ ಶರತ್ ಲೋಹಿತಾಶ್ವ, ಗಿರಿ , ತಬಲಾ ನಾಣಿ , ಮುನಿರಾಜ್, ಅರುಣಾ ಬಾಲರಾಜ್, ವಾಣಿ , ಚಂದನ , ಲಾಸ್ಯ, ನಾಗರಾಜಮೂರ್ತಿ ಇನ್ನೂ ತುಂಬಾ ಜನಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ . ಚನ್ನಪಟ್ಟಣ, ಶ್ರೀರಂಗಪಟ್ಟಣ, ಮಂಡ್ಯ, ಮೈಸೂರು, ತುಮಕೂರು, ಮಾಗಡಿ ಹಳ್ಳಿಗಳಲ್ಲಿ ಶೂಟಿಂಗ್ ಮಾಡಲಾಗಿದೆ.