Advertisement

ತನ್ನ ಅನುಮತಿ ಇಲ್ಲದೆ ಹೂ ಕಿತ್ತ ಅತ್ತೆಗೆ ಸೊಸೆಯಿಂದ ಅಮಾನುಷ ಹಲ್ಲೆ

03:50 PM Jun 01, 2018 | udayavani editorial |

ಹೊಸದಿಲ್ಲಿ : ತನ್ನ ಅನುಮತಿ ಇಲ್ಲದೆ ಮನೆಯ ಕೈತೋಟದಲ್ಲಿನ ಹೂವನ್ನು ಕಿತ್ತ 75 ವರ್ಷ ಪ್ರಾಯದ ಅತ್ತೆಯನ್ನು ಅಮಾನುಷವಾಗಿ ಹೊಡೆದು ಹಲ್ಲೆ ಗೈದ ಘಟನೆ ಕೋಲ್ಕತಾದ ಗಾರಿಯಾ ಪ್ರದೇಶದಲ್ಲಿ ನಡೆದಿದೆ.

Advertisement

ಈ ಘಟನೆಯನ್ನು ನೆರೆಮನೆಯ ರಂತು ಸೇನ್‌ಗುಪ್ತಾ ಎಂಬವರು ವಿಡಿಯೋದಲ್ಲಿ ಸೆರೆ ಹಿಡಿದಿದ್ದು ಅದೀಗ ಸಾಮಾಜಿಕ ಮಾದ್ಯಮದಲ್ಲಿ ವೈರಲ್‌ ಆಗಿದೆ. 

ವಿಡಿಯೋದಲ್ಲಿ ಸೊಸೆ ಸ್ವಪ್ನಾ ಪಾಲ್‌ ಎಂಬಾಕೆ ತನ್ನ 75 ವರ್ಷ ಪ್ರಾಯದ ವೃದ್ಧೆ ಅತ್ತೆ ಜಶೋದಾ ಪಾಲ್‌  ಅವರನ್ನು ಅಮಾನುಷವಾಗಿ ಹೊಡೆದು ಹಲ್ಲೆಗೈಯುತ್ತಿರುವುದು ಕಂಡು ಬರುತ್ತದೆ. 

ಈ ವಿಡಿಯೋ ಚಿತ್ರಿಕೆಯ ಆಧಾರದಲ್ಲಿ ಪೊಲೀಸರು ಆರೋಪಿ ಸೊಸೆ ಸ್ವಪ್ನಾಳನ್ನು ಬಂಧಿಸಿದ್ದಾರೆ. ಮಾತ್ರವಲ್ಲದೆ ಕ್ರೂರಿ ಸೊಸೆ ಮತ್ತು ಆಕೆಯ ವೃದ್ಧ ಅತ್ತೆಯ ಫೋಟೋವನ್ನು ಪೊಲೀಸರು ತಮ್ಮ ಅಧಿಕೃತ ಫೇಸ್‌ ಬುಕ್‌ ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.  

ಸೊಸೆಯಿಂದ ಹಲ್ಲೆಗೆ ಗುರಿಯಾಗಿದ್ದ ಅತ್ತೆ ಜಶೋದಾ ಅವರ ಪತಿ ಕೆಲವು ವರ್ಷಗಳ ಹಿಂದೆ ತೀರಿ ಹೋಗಿದ್ದಾರೆ. ಮರೆವು ರೋಗ ಪೀಡಿತರಾಗಿರುವ ಜಶೋದಾ ಅವರು ತಮ್ಮ ಮಗ-ಸೊಸೆಯೊಂದಿಗೆ ವಾಸವಾಗಿದ್ದಾರೆ. ಆರೋಪಿ ಸೊಸೆಯನ್ನು ಪೊಲೀಸರು ಬೇಲ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. 

Advertisement

ಸಾಮಾಜಿಕ ಜಾಲಿಗರು ಸೊಸೆಯ ಅಮಾನುಷ ಕೃತ್ಯವನ್ನು ವ್ಯಾಪಕವಾಗಿ ಖಂಡಿಸಿ ಆಕೆಗೆ ಕಠಿನ ಶಿಕ್ಷಯಾಗಬೇಕೆಂದು ಆಗ್ರಹಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next