Advertisement

ತರಬೇತಿ ವೇಳೆ ಕ್ಯಾಪ್ಟರ್‌ನಿಂದ 50 ಅಡಿ ಕೆಳಕ್ಕೆ ಬಿದ್ದ ಯೋಧರು!

11:02 AM Jan 11, 2018 | Team Udayavani |

ಹೊಸದಿಲ್ಲಿ: ಜನವರಿ 15 ರಂದು ಆಚರಿಸಲಾಗುವ ಸೇನಾ ದಿನಾಚರಣೆಗಾಗಿ ತರಬೇಯಿಯಲ್ಲಿ ನಿರತರಾಗಿದ್ದ ಹೆಲಿಕ್ಯಾಪ್ಟರ್‌ನಿಂದ ಮೂವರು ವಾಯುಪಡೆಯ ಸೈನಿಕರು ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಅವಘಡ ದೆಹಲಿಯಲ್ಲಿ ಮಂಗಳವಾರ ನಡೆದಿದ್ದು ಗುರುವಾರ ಬೆಳಕಿಗೆ ಬಂದಿದೆ.

Advertisement

ಗಾಯಗೊಂಡಿರುವ ಸೈನಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಹಗ್ಗದ ಮೂಲಕ ಹೆಲಿಕ್ಯಾಪ್ಟರ್‌ನಿಂದ ಇಳಿಯುವ ಸಾಹಸ ತರಬೇತಿ ನಡೆಸುವ ವೇಳೆ ಹಗ್ಗ ಕಳಚಿ  ಅವಘಡ ನಡೆದಿದೆ.ಮೂವರು ಯೋಧರು 50 ಅಡಿ ಎತ್ತರಿದಿಂದ ಒಬ್ಬರ ಮೇಲೆ ಒಬ್ಬರು ಬಿದ್ದಿರುವುದು ದೃಶ್ಯದಲ್ಲಿ ಕಂಡು ಬಂದಿದೆ.

ಸೇನೆ ಈ ಬಗ್ಗೆ ತನಿಖೆಗೆ ಆದೇಶಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next