Advertisement

ಕೋವಿಡ್ 19 ಗೃಹಬಂಧನಕ್ಕೆ ಸಾಕು ಪ್ರಾಣಿಗಳ ಶಾಕ್‌?

12:33 AM Apr 08, 2020 | Sriram |

ಬೆಂಗಳೂರು: ಕೋವಿಡ್ 19 ಸೋಂಕು ಪ್ರಾಣಿಗಳಲ್ಲೂ ಕಾಣಿಸಿಕೊಳ್ಳುತ್ತಿರುವುದು ಈಗ ಜನತೆಗೆ ಹೊಸ ಶಾಕ್‌ ನೀಡಿದೆ. ಅದ ರಲ್ಲೂ ಕೈಮೇಲೆ ಮುದ್ರೆ ಹಾಕಿಸಿಕೊಂಡು “ಗೃಹಬಂಧನ’ದಲ್ಲಿ ಇರುವವರು ಇದರಿಂದ ತುಸು ಹೆಚ್ಚೇ ಚಿಂತಿತರಾಗಿದ್ದಾರೆ.

Advertisement

ಕ್ವಾರಂಟೈನ್‌ ಆಗಿರುವವರು ಇದು ವರೆಗೆ ಕೇವಲ ಮನುಷ್ಯರೊಂದಿಗೆ ಸಾಮಾ ಜಿಕ ಅಂತರ ಕಾಯ್ದುಕೊಳ್ಳಬೇಕಿತ್ತು. ಆದರೆ ಬೆಲ್ಜಿಯಂನ ಬೆಕ್ಕು, ಚೀನದ ನಾಯಿ ಮತ್ತು ಅಮೆರಿಕದ ಹುಲಿಗೂ ಕೋವಿಡ್ 19 ಸೋಂಕು ಪ್ರಸಾರವಾಗಿರುವುದು ಈಗ ಬೆಳಕಿಗೆ ಬಂದಿದೆ. ಇದು ಮತ್ತೂಂದು ರೀತಿಯ ಆತಂಕ ಸೃಷ್ಟಿಸಿದೆ.

ಕ್ವಾರಂಟೈನ್‌ನಲ್ಲಿ ಇರುವವರು ಮನೆಯ ಸಾಕು ಪ್ರಾಣಿಗಳನ್ನು ಎತ್ತಿ ಆಡಿಸಿದ್ದಾರೆ. ಅದೇ ಪ್ರಾಣಿಗಳು ಆ ವ್ಯಕ್ತಿಯ ಕುಟುಂಬದ ಇತರ ಸದಸ್ಯರೊಂದಿಗೂ ಅಷ್ಟೇ ಒಡನಾಡಿವೆ. ಒಂದು ವೇಳೆ ಅವುಗಳಿಗೂ ಸೋಂಕು ಕಾಣಿಸಿಕೊಂಡರೆ ಏನು ಗತಿ ಎಂಬ ಆತಂಕ ಈಗ ಮನೆ ಮಾಡಿದೆ.

ಆತಂಕ ಬೇಡ; ಎಚ್ಚರ ಬೇಕು: ತಜ್ಞರು
ಈ ಬಗ್ಗೆ ಆತಂಕ ಬೇಡ. ಆದರೆ ಇದರಿಂದ ಸೋಂಕು ಪೀಡಿತರು ಸಾಕು ಪ್ರಾಣಿಗಳೊಂದಿಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎನ್ನುವುದು ಸಾಬೀತಾ ಗಿದೆ ಎಂದು ಹೆಬ್ಟಾಳದ ಕರ್ನಾಟಕ ಪಶು ವೈದ್ಯಕೀಯ, ಹೈನು ಮತ್ತು ಮೀನುಗಾರಿಕೆಗಳ ವಿಜ್ಞಾನಗಳ ಮಹಾವಿದ್ಯಾ ಲಯದ ಸಹಾಯಕ ಪ್ರಾಧ್ಯಾಪಕ ತಜ್ಞ ಡಾ| ಪ್ರಯಾಗ್‌ ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮಗಳು
-ಸಾಕುಪ್ರಾಣಿಗಳಿಗೆ ಆಹಾರ ಪೂರೈಕೆ ಮತ್ತು ಆರೈಕೆಯ ಅನಂತರ ಸ್ವತ್ಛವಾಗಿ ಕೈತೊಳೆಯಬೇಕು.
-ಪ್ರಾಣಿಗಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರೆ ತತ್‌ಕ್ಷಣ ಪಶುವೈದ್ಯರನ್ನು ಸಂಪರ್ಕಿಸಬೇಕು
-ಅನಾರೋಗ್ಯ ಸಮಸ್ಯೆ ಅಥವಾ ಕೋವಿಡ್ 19 ಸೋಂಕಿನ ಲಕ್ಷಣಗಳಿದ್ದವರು ಪ್ರಾಣಿಗಳಿಂದ ಅಂತರ ಕಾಯ್ದುಕೊಳ್ಳಬೇಕು
-ಸ್ಪಷ್ಟ ಚಿತ್ರಣ ಬರುವವರೆಗೂ ಪ್ರಾಣಿಯನ್ನು ಮುದ್ದಾಡುವುದು, ಆಹಾರ ಹಂಚಿಕೊಳ್ಳುವುದನ್ನು ಸಾಧ್ಯವಾದಷ್ಟು ತಪ್ಪಿಸಿ.

Advertisement

– ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next