ಕೊಲಂಬೊ: ವಾನಿಂದು ಹಸರಂಗ, ದುಷ್ಮಂತ ಚಮೀರ, ದಿಲ್ಶನ್ ಮಧುಶನಕ, ಲಹಿರು ಕುಮಾರ ಹೀಗೆ ಗಾಯಗೊಂಡ ಶ್ರೀಲಂಕಾ ಆಟಗಾರರ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ. ಅವರೇ ಮಹೀಶ ತೀಕ್ಷಣ.
ಏಷ್ಯಾ ಕಪ್ ಕೂಟದ ಅತ್ಯಂತ ನಿರ್ಣಾಯಕ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಪ್ರಮುಖ ಸ್ಪಿನ್ನರ್ ತೀಕ್ಷಣ ಗಾಯಗೊಂಡಿದ್ದಾರೆ. ಹೀಗಾಗಿ ರವಿವಾರ ನಡೆಯಲಿರುವ ಫೈನಲ್ ಹಣಾಹಣಿಯಿಂದ ಅವರು ಹೊರಗುಳಿದಿದ್ದಾರೆ.
ಸ್ನಾಯು ಗಾಯದಿಂದಾಗಿ ತೀಕ್ಷಣ ಅವರು ಏಷ್ಯಾಕಪ್ ಫೈನಲ್ ನಿಂದ ಹೊರಗುಳಿಯಲಿದ್ದಾರೆ. ಅವರು ತಮ್ಮ ಮಂಡಿರಜ್ಜುಗೆ ಗಾಯಕ್ಕೆ ಒಳಗಾಗಿದ್ದಾರೆ., ಶ್ರೀಲಂಕಾ ಕ್ರಿಕೆಟ್ ತೀಕ್ಷಣ ಬದಲಿಯಾಗಿ 27 ವರ್ಷದ ಆಫ್-ಸ್ಪಿನ್ನರ್ ಸಹನ್ ಅರಾಚಿಗೆ ಅವರನ್ನು ಫೈನಲ್ ಪಂದ್ಯಕ್ಕಾಗಿ ತಂಡಕ್ಕೆ ಸೇರಿಸಕೊಂಡಿದೆ.
ಇದನ್ನೂ ಓದಿ:Yash19 ಸಿನಿಮಾದಲ್ಲಿ ನಾಯಕಿಯಾಗಿ ಮೃಣಾಲ್, ಸಮಂತಾ, ಶ್ರದ್ಧಾ.. ಕಂಬ್ಯಾಕ್ ಮಾಡ್ತಾರ ಆ ನಟಿ?
ಏಕದಿನ ವಿಶ್ವಕಪ್ ಸಮೀಪಿಸುತ್ತಿರುವಾಗ, ಶ್ರೀಲಂಕಾ ತಂಡದಲ್ಲಿ ಗಾಯಗೊಳ್ಳುತ್ತಿರುವ ಪಟ್ಟಿ ನಿರಂತರವಾಗಿ ಹೆಚ್ಚುತ್ತಿದೆ.
ರವಿವಾರ ಭಾರತ ಮತ್ತು ಶ್ರೀಲಂಕಾ ತಂಡಗಳು ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಕೊಲಂಬೊದ ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದೆ.