Advertisement
ಚುನಾವಣ ಪ್ರಚಾರಕ್ಕೆ ಸೀಮಿತ ವೆಂಬಂತೆ ಆಗೊಮ್ಮೆ ಈಗೊಮ್ಮೆ ಜಿಲ್ಲೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಕೇಂದ್ರ ಸಚಿವೆ, ಉಡುಪಿ – ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಈಗ ವಿಕಸಿತ ಭಾರತ ಸಂಕಲ್ಪ ಯಾತ್ರೆ ನೆಪದಲ್ಲಿ ಚುನಾವಣ ಪ್ರಚಾರಕ್ಕಾಗಿ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಕರ್ನಾಟಕ ಸರಕಾರವು 4.50 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹಿಸಿ ಕೇಂದ್ರ ಸರಕಾರಕ್ಕೆ ನೀಡುತ್ತಿದೆ. ಇದರಲ್ಲಿ ಕೇಂದ್ರ ಸರಕಾರವು ರಾಜ್ಯ ಸರಕಾರಕ್ಕೆ ಎಷ್ಟು ಅನುದಾನ ನೀಡುತ್ತಿದೆ ಎಂದು ಶೋಭಾ ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದರು.
ಇರುವುದು ಯಾರ ತಂಡ?
ರಾಜ್ಯ ಸರಕಾರದ ಕ್ಯಾಬಿನೆಟ್‌ನಲ್ಲಿರುವುದು ಕಳ್ಳರ ತಂಡ ಎಂದು ಅಸಾಂವಿಧಾನಿಕ ಪದ ಬಳಕೆ ಮಾಡಿ ರುವ ಸಂಸದೆಯ ಹೇಳಿಕೆ ಅವರ ರಾಜಕೀಯ ಆಪ್ರಬುದ್ಧತೆಗೆ ಹಿಡಿದ ಕನ್ನಡಿಯಂತಾಗಿದೆ. ರಾಜ್ಯ ಸರಕಾರದ ಕ್ಯಾಬಿನೆಟ್‌ನಲ್ಲಿರುವುದು ಕಳ್ಳರ ತಂಡವೆಂದಾದರೆ, ಕೇಂದ್ರ ಸರಕಾರದ ಕ್ಯಾಬಿನೆಟ್ ಅನ್ನು ಏನೆಂದು ಕರೆಯ ಬೇಕಿದೆ ಎಂದು ಸೊರಕೆ ಪ್ರಶ್ನಿಸಿ ದ್ದಾರೆ. ನೇಜಾರು ಘಟನೆ ಕಾಣಿಸಿಲ್ಲವೇಕೆ ?
ಶೋಭಾ ಅವರ ಸಂಸದೀಯ ಕ್ಷೇತ್ರವಾಗಿರುವ ಉಡುಪಿ ನೇಜಾರಿ ನಲ್ಲಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ನಡೆದು 20 ದಿನಗಳು ಕಳೆದಿವೆ. ಕ್ಷೇತ್ರದ ಸಂಸದರು ಮಾತ್ರ ಈ ಘಟನೆಯನ್ನು ಖಂಡಿಸದೆ ಮೌನ ತಾಳಿರುವುದು ಅವರ ಸಂಕುಚಿತ ಮನಃ ಸ್ಥಿತಿಯನ್ನು ಬಿಂಬಿಸುತ್ತಿದೆ. ಜಿಲ್ಲೆಗೆ ಆಗಮಿಸಿಯೂ ಮನೆಯವರಿಗೆ ಸಾಂತ್ವನ ಹೇಳದಿರುವುದು ಖಂಡ ನೀಯ ಎಂದು ಸೊರಕೆ ಟೀಕಿಸಿದ್ದಾರೆ.