Advertisement

ರೈತರ ಉತ್ಪಾದನೆಗೆ ತಕ್ಕಂತೆ ರಫ್ತು, ಮಾರುಕಟ್ಟೆ ಹೆಚ್ಚಿಸಲು ಯೋಜನೆ :ಸಚಿವೆ ಶೋಭಾ ಕರಂದ್ಲಾಜೆ 

04:03 PM Sep 18, 2021 | Team Udayavani |

ಅಂಕೋಲಾ : ಮಹಾಮಾರಿ ಕೋವಿಡ್ ನುಡುವೆಯೆ ಕೃಷಿ ಪ್ರಧಾನ ನಮ್ಮ ದೇಶ  ಕೃಷಿ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದೆ ಎಂದು ಕೇಂದ್ರ ಕೃಷಿ  ರಾಜ್ಯ ಸಚಿವ ಶೋಭಾ ಕರಂದ್ಲಾಜೆ  ಹೇಳಿದ್ದಾರೆ.

Advertisement

ಅವರು ಅಂಕೋಲಾದ ವಂದಿಗೆ ಪಂಚಾಯತ್ ಹೊಸಗದ್ಧೆ ಬೂತ್ ಅಧ್ಯಕ್ಷ ಸೋಮೇಶ್ವರ ಗೌಡ ರವರ ಮನೆಯಲ್ಲಿ ಬಿಜೆಪಿ ಪಕ್ಷದ ಧ್ವಜಾರೋಹಣ ಮತ್ತು ನಾಮಫಲಕ ಅಳವಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ರೈತರು ಕೋವಿಡ್ ನ ಕ್ಲೊಷ್ಟಕರ ಸಂದರ್ಭದಲ್ಲಿಯೂ ಸುಮಾರು 305 ಮಿಲಿಯನ್ ಮೆಟ್ರಿಕ್ ಟನ್ ಕೃಷಿ ಬೆಳೆ ಉತ್ಪಾದನೆ ಮಾಡಲಾಗಿದೆ ಅದೇ ರೀತಿ 326 ಮಿಲಿಯನ್  ಮೆಟ್ರಿಕ್ ಟನ್ ತರಕಾರಿ ಹಣ್ಣುಗಳ ಉತ್ಪಾದನೆ ಮಾಡಲಾಗಿದೆ ದೇಶದ  ರೈತರ ಉತ್ಪಾದನೆಗೆ ತಕ್ಕಂತೆ ರಪ್ತು ಮತ್ತು ಮಾರುಕಟ್ಟೆ ಹೆಚ್ಚಿಸಲು ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಇದನ್ನೂ ಓದಿ :ಶಿರಸಿ : ಕೊಪ್ಪಳಗದ್ದೆ ಕೆರೆ ಅಭಿವೃದ್ದಿಗೆ ಜೀವಜಲ ಚಿಂತನೆ, ಸಮಾಲೋಚನೆ

ಬಳಿಕ ಸಚಿವೆ ಶೋಭಾ ಕರಂದ್ಲಾಜೆಯವರು  ವೃಕ್ಷಾರೋಪಣ ನಡೆಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ್ ನಾಯಕ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯ್ಕ. ಮಂಡಲ ಅಧ್ಯಕ್ಷ  ಸಂಜಯ್ ನಾಯ್ಕ ಪ್ರಮುಖರಾದ  ಭಾಸ್ಕರ ನಾರ್ವೆಕರ, ಜಗದೀಶ್ ನಾಯಕ್ , ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ ನಾಯಕ, ಪುರಸಬೆ ಉಪಾಧ್ಯಕ್ಷೆ ರೇಖಾ ಗಾಂವಕರ. ಪುರಸಬೆ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಾ ನಾಯ್ಕ.ರಾಜೇಶ್ವರಿ ಕೇಣಿಕರ. ಅನುರಾಧಾ ನಾಯ್ಕ. ರಾಘವೇಂದ್ರ ಭಟ್. ರಾಮಚಂದ್ರ ಹೆಗಡೆ. ಗಣಪತಿ ನಾಯ್ಕ. ದಾಮೋದರ ರಾಯ್ಕರ. ನಾಗೇಶ್ ಕಿಣಿ. ಹಾಗೂ ಪಕ್ಷದ ಪ್ರಮುಖರು ಕಾರ್ಯಕರ್ತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next